ಭಟ್ಕಳ : ತಾಲೂಕಿನಲ್ಲಿ ಆ. 2ರಂದು ಸುರಿದ ಭಾರೀ ಮಳೆಯಿಂದ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತ ಉಂಟಾಗಿ ನಾಲ್ವರು ಸಾವನ್ನಪಿದ್ದ ಸುದ್ದಿ ಮರೆಯುವ ಮುನ್ನವೇ ಮತ್ತೆ ಅದೇ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿ ಜನರು ಇನ್ನಷ್ಟು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಆ. 2 ರಂದು ಬೆಳಗಿನ ಜಾವ ಗುಡ್ಡ ಕುಸಿದು ಕೆಳಕ್ಕೆ ಜಾರಿದ್ದು ದೊಡ್ಡ ದೊಡ್ಡ ಭಾಗವೇ ಸಡಿಲಗೊಂಡಿತ್ತು. ಕಳೆದ 2-3 ದಿನಗಳಿಂದ ಸ್ವಲ್ಪ ಸ್ವಲ್ಪವೇ ಜಾರುತ್ತಿದ್ದ ಗುಡ್ಡದ ಭಾಗ ಮತ್ತೆ ಜಾರಿ ಕೆಳಕ್ಕೆ ಬಂದಿದ್ದು ಅಕ್ಕಪಕ್ಕದ ಮನೆಯವರೂ ಕೂಡಾ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಅಕ್ಕಪಕ್ಕದ ಆರು ಮನೆಯವರಿಗೆ ನೋಟೀಸು ನೀಡಿ ಮನೆಯನ್ನು ಖಾಲಿ ಮಾಡಲು ಸೂಚನೆ ನೀಡಲಾಗಿತ್ತಾದರೂ ಇದುವರೆಗೂ ಯಾವುದೇ ಮನೆಯವರು ಮನೆ ಖಾಲಿ ಮಾಡಿಲ್ಲ.
ಗುಡ್ಡ ಕುಸಿತದ ಮೇಲ್ಬಾಗದಲ್ಲಿ ಸಂಪರ್ಕ ರಸ್ತೆ ಇದ್ದು ಇನ್ನೂ ಸ್ವಲ್ಪ ಗುಡ್ಡದ ಭಾಗ ಕುಸಿದರೆ ಹತ್ತಿರದಲ್ಲಿಯೇ ಇರುವ ರಸ್ತೆ ಸಂಪರ್ಕವೂ ಕೂಡಾ ಕಡಿತಗೊಳ್ಳುವ ಆತಂಕ ನಿರ್ಮಾಣಗೊಂಡಿದೆ.
ಇದನ್ನೂ ಓದಿ : ಚೀಟಿಂಗ್.. ಕಾಮನ್ವೆಲ್ತ್ ಗೇಮ್ಸ್ ಹಾಕಿ ಸೆಮಿ ಫೈನಲ್ ನಲ್ಲಿ ಮೋಸದಾಟ: ಭಾರತಕ್ಕೆ ಸೋಲು