Advertisement
ಸತತ ಎರಡು ತಿಂಗಳು ಲಾಕ್ ಡೌನ್ ಇದ್ದುದರಿಂದ ಸರಕಾರಿ ಕೆಲಸಗಳು ಮಂದಗತಿಯಲ್ಲಿವೆ. ಈ ನಡುವೆ ಭೂ ಪರಭಾರೆಗೆ ಪಡೆದ 11ಇ ನಕ್ಷೆ ನೋಂದಣಿಗೆ ಸರ್ವೇ ಇಲಾಖೆ ಕೇವಲ 1 ತಿಂಗಳ ವಿನಾಯಿತಿ ನೀಡಿತ್ತು.
ಈ ಮಧ್ಯೆ ಸರ್ವರ್ ಸಮಸ್ಯೆ ಮತ್ತಿತರ ತೊಂದರೆ ಎದುರಾದ್ದರಿಂದ ಈಗಾಗಲೇ ಅರ್ಜಿ ಸಲ್ಲಿಸಿದವರ ಕಾಲಮಿತಿ ಮುಗಿದಿದೆ. ವಿನಾಯಿತಿ ಅವಧಿ ವಿಸ್ತರಿಸದೆ ಇರುವುದರಿಂದ ಕಾಲಮಿತಿ ಮುಗಿದಿರುವ ರೈತರು ಒಂದು ಸರ್ವೇ ನಂಬರಿಗೆ 1,200 ರೂ.ಗಳಂತೆ ಪಾವತಿಸಿ ಮತ್ತೂಮ್ಮೆ ಅಳತೆಗೊಳಪಡಿಸಿ ಹೊಸ ನಕ್ಷೆ ತಯಾರಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.
Related Articles
Advertisement
ತಮ್ಮದಲ್ಲದ ತಪ್ಪಿನಿಂದ ಜನರಿಗೆ ಸಂಕಷ್ಟಸರಕಾರವು ಎಲ್ಲ ಕ್ಷೇತ್ರಗಳಲ್ಲಿ ಕನಿಷ್ಠ 3 ತಿಂಗಳ ವಿನಾಯಿತಿ ಘೋಷಿಸಿದ್ದರೂ ಸರ್ವೇ ಇಲಾಖೆ ವ್ಯಾಪ್ತಿಗೆ ಕೇವಲ ಒಂದು ತಿಂಗಳು ಮಿತಿಗೊಳಿಸಿದೆ. ವಿನಾಯಿತಿ 3 ತಿಂಗಳು ಇದ್ದರೂ ಕೆಲವು ಕಡತಗಳಿಗೆ ಒಂದು ತಿಂಗಳ ಅವಧಿ ಸೂಚಿಸುತ್ತಿದೆ. ಈ ಕುರಿತು ಉಪನೋಂದಣಾಧಿಕಾರಿಗಳಿಗೂ ಸಮರ್ಪಕ ಮಾಹಿತಿ ಇಲ್ಲ. ಇಲಾಖೆ ಈ ಬಗ್ಗೆ ಸಾರ್ವಜನಿಕ ಪ್ರಕಟನೆ ನೀಡದಿರುವುದರಿಂದ ರೈತರಿಗೆ ಮಾಹಿತಿ ಲಭಿಸಿಲ್ಲ. ಇಲಾಖೆಯ ಈ ಕ್ರಮದಿಂದ 11ಇ ನಕ್ಷೆ ಪಡೆದು ಲಾಕ್ ಡೌನ್‌ನಿಂದಾಗಿ ನೋಂದಣಿಗೆ ಬಾಕಿಯಾಗಿರುವ ಎಲ್ಲ ಕಡತಗಳ ವಿಚಾರದಲ್ಲಿ ಜನರು ತಮ್ಮದಲ್ಲದ ತಪ್ಪಿಗೆ ದುಬಾರಿ ಮೊತ್ತ ತೆತ್ತು ಮತ್ತೆ ಅಳತೆ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದ ಬ್ಯಾಂಕ್ ವ್ಯವಹಾರ, ಜಮೀನು ವಿಭಾಗ ಪರಭಾರೆಗೂ ಹೊಡೆತ ಬಿದ್ದಿದೆ. ಆರಂಭದಲ್ಲಿ 11ಇ ನಕ್ಷೆ ಪಡೆದು ನೋಂದಣಿಗೆ 6 ತಿಂಗಳ ಅವಧಿ ನೀಡಲಾಗಿತ್ತು. ಕೋವಿಡ್ ಕಾರಣದಿಂದ ಮೂರು ತಿಂಗಳ ಹೆಚ್ಚುವರಿ ಅವಧಿ ನೀಡಲಾಗಿದೆ. ಈ ಮಧ್ಯೆಯೂ ತಾಂತ್ರಿಕ ದೋಷದಿಂದ ನೋಂದಣಿಗೆ ಬಾಕಿ ಉಳಿದಿರುವ ಕಡತಗಳಿದ್ದಲ್ಲಿ ಮತ್ತೂಮ್ಮೆ ಪರಿಶೀಲಿಸಲು ಉಪನೋಂದಣಾಧಿಕಾರಿಗಳಿಗೆ ಸೂಚಿಸುತ್ತೇನೆ.
– ಶ್ರೀಧರ್ ಹೆಚ್ಚುವರಿ ನಿರ್ದೇಶಕರು, ಸರ್ವೇ ಇಲಾಖೆ, ಬೆಂಗಳೂರು