Advertisement
ಈಗಾಗಲೇ ನಗರದ 18 ಕಡೆ ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆ ಸ್ಮಾರ್ಟ್ ಸಿಟಿ ನಿರ್ಧರಿಸಿತ್ತು. ಆದರೆ ಬಹುತೇಕ ರಸ್ತೆಗಳ ಭೂಸ್ವಾಧೀನ ಸಂಬಂಧಿತ ವಿಚಾರ ಪೂರ್ಣ ವಾಗದೆ ಪಾಲಿಕೆಯಲ್ಲಿ ಬಾಕಿಯಾಗಿತ್ತು. ಭೂಸ್ವಾಧೀನ ಆಗದೆ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಿರಲಿಲ್ಲ. ಈ ಮಧ್ಯೆ, ಕೆಲವೆಡೆ ರಸ್ತೆ ವಿಸ್ತ ರಣೆಗೊಂಡು ಅಭಿವೃದ್ಧಿಯಾಗಿದ್ದರೂ ಅಲ್ಲಿ ಫುಟ್‌ಪಾತ್-ಚರಂಡಿ ಕಾಮಗಾರಿ ನಡೆಸಲು ಭೂಮಿ ಅಗತ್ಯವಿದೆ. ಈ ಕಾರಣದಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಲು ಪಾಲಿಕೆ ಮುಂದಡಿ ಇಟ್ಟಿದೆ.
Related Articles
Advertisement
ಜಪ್ಪು ಮಾರ್ಕೆಟ್ ವ್ಯಾಪ್ತಿಯ ಕಾಸ್ಸಿಯಾ ಜಂಕ್ಷನ್‌ನಿಂದ ಬೋಳಾರ ಮುಖ್ಯರಸ್ತೆಯವರೆಗೆ 18 ಮೀ. ಅಗಲ, ಸೆಂಟ್ರಲ್ ಮಾರ್ಕೆಟ್ ವ್ಯಾಪ್ತಿಯ ಕಲ್ಪನಾ ಸ್ವೀಟ್ಸ್‌ನಿಂದ ಮಾಡರ್ನ್ ಬೆಡ್‌ಹೌಸ್‌ವರೆಗೆ 15 ಮೀ. ಅಗಲ, ರೂಪವಾಣಿ ಥಿಯೇಟರ್ ವ್ಯಾಪ್ತಿಯ ಭವಂತಿ ಸ್ಟ್ರೀಟ್ ಜಂಕ್ಷನ್ ನಿಂದ ಫೆಲಿಕ್ಸ್ ಪೈ ಬಝಾರ್‌ವರೆಗೆ 12 ಮೀ. ಅಗಲ, ಅಜಿಜುದ್ಧೀನ್ 2ನೇ ಅಡ್ಡ ರಸ್ತೆ ವ್ಯಾಪ್ತಿಯ ಎಂಪಿಟಿ ರಸ್ತೆಯಿಂದ ಅಜಿಜುದ್ದೀನ್ ರಸ್ತೆಯವರೆಗೆ 9 ಮೀ. ಅಗಲ, ಎಂಪಿಟಿ 3ನೇ ಅಡ್ಡ ರಸ್ತೆ ವ್ಯಾಪ್ತಿಯ (ಜಲರಾಮ ದೇವಸ್ಥಾನದ ಹತ್ತಿರ ರಸ್ತೆ) ಎಂಪಿಟಿ ರಸ್ತೆಯಿಂದ ಅಜಿಜುದ್ಧೀನ್ ರಸ್ತೆ 9 ಮೀ. ಅಗಲ, ಅನ್ಸಾರಿ ರಸ್ತೆ ವ್ಯಾಪ್ತಿಯ ಹಳೆ ಬಂದರು ರಸ್ತೆಯಿಂದ ಕಂಡತಪಳ್ಳಿ ವೆಟ್‌ವೆಲ್‌ವರೆಗೆ 9 ಮೀ. ಅಗಲದಲ್ಲಿ ಅಭಿವೃದ್ಧಿಯಾಗಲಿದೆ.
ಹಳೆಬಂದರು ವ್ಯಾಪ್ತಿಯ ಬದ್ರಿಯಾ ಶಾಲೆ ರಸ್ತೆಯಿಂದ ಬಂದರ್ ಗೇಟ್‌ವರೆಗೆ 9 ಮೀ., ನಿರೇಶ್ವಾಲ್ಯದ ರೊಸಾರಿಯೋ ಚರ್ಚ್ ರಸ್ತೆಯಿಂದ ಗೂಡ್‌ಶೆಡ್ ರಸ್ತೆಯವರೆಗೆ 9 ಮೀ., ಸಂಜೆವಾಣಿ ವ್ಯಾಪ್ತಿಯ ನಿರೇಶ್ವಾಲ್ಯ ರಸ್ತೆಯಿಂದ ಗೂಡ್‌ಶೆಡ್ ವರೆಗೆ 9 ಮೀ. ಅಗಲ, ಪೋರ್ಟ್‌ರೋಡ್‌ನ ಹ್ಯಾಮಿಲ್ಟನ್ ಜಂಕ್ಷನ್‌ನಿಂದ ಬದ್ರಿಯಾ ಶಾಲೆ ಜಂಕ್ಷನ್ 18 ಮೀ., ವಿಆರ್‌ಎಲ್ ಉತ್ತರ ರಸ್ತೆಯ ಜುಮ್ಮಾ ಮಸೀದಿ ರಸ್ತೆಯಿಂದ ಹಳೆಬಂದರುವಿನ 2 ಪ್ರತ್ಯೇಕ ರಸ್ತೆಗಳು 12 ಮೀ., ರೈಲು ನಿಲ್ದಾಣ ವ್ಯಾಪ್ತಿಯ ಯು.ಪಿ. ಮಲ್ಯ ರಸ್ತೆಯಿಂದ ಕೇಂದ್ರ ರೈಲು ನಿಲ್ದಾಣ ರಸ್ತೆ 12 ಮೀ. ವಿಸ್ತರಣೆಗೆ ನಿರ್ಧರಿಸಲಾಗಿದೆ.
ಖಾಸಗಿ ಭೂ ಮಾಲಕರಿಗೆ ನೋಟಿಸ್
ಸಂಬಂಧಪಟ್ಟ ರಸ್ತೆಯ ವಿಸ್ತರಣೆ ನೆಲೆಯಿಂದ ಭೂಸ್ವಾಧೀನ ಪ್ರಕ್ರಿಯೆಗೆ ಪಾಲಿಕೆ ಒಪ್ಪಿಗೆ ನೀಡಿದೆ. ಈ ಮೂಲಕ ಮುಂದೆ ಸಂಬಂಧಪಟ್ಟ 18 ರಸ್ತೆಗಳ ನಕ್ಷೆ ಸಿದ್ಧಪಡಿಸಿ ಮಾರ್ಕಿಂಗ್ ಮಾಡಲಾಗುತ್ತದೆ. ಖಾಸಗಿ ಭೂಮಿ ಯಾರಿಂದ ಪಡೆಯಬೇಕಾಗುತ್ತದೆ ಎಂಬ ಬಗ್ಗೆ ಲೆಕ್ಕಾಚಾರ ಮಾಡಲಾಗುತ್ತದೆ. ಅದರಂತೆ ಸಂಬಂಧಪಟ್ಟ ಭೂಮಾಲಕರಿಗೆ ಪಾಲಿಕೆಯಿಂದ ನೋಟಿಸ್ ನೀಡಲಾಗುತ್ತದೆ. ಅದರಂತೆ ಭೂಪರಿಹಾರಕ್ಕಾಗಿ ಟಿ.ಡಿ.ಆರ್. ನೀಡುವ ಪ್ರಕ್ರಿಯೆ ನಡೆಯುತ್ತದೆ. ಇದು ಪೂರ್ಣವಾದ ಬಳಿಕ ಸಂಬಂಧಪಟ್ಟ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿ ಕಾಮಗಾರಿ ನಡೆಸಲು ಪಾಲಿಕೆಯು ಅನುಮತಿ ನೀಡಲಿದೆ. ಸದ್ಯ ಮಳೆಗಾಲ ಆರಂಭವಾಗುತ್ತಿರುವ ಕಾರಣದಿಂದ ಈ ರಸ್ತೆಗಳ ವಿಸ್ತರಣೆ ಕಾಮಗಾರಿ ಮಳೆಗಾಲದ ಅನಂತರವಷ್ಟೇ ಆಗುವ ಸಾಧ್ಯತೆಯಿದೆ.
ಸ್ಮಾರ್ಟ್‌ಸಿಟಿ ಮುಖೇನ ರಸ್ತೆ ಅಭಿವೃದ್ಧಿ
ನಗರದ 18 ರಸ್ತೆಯ ವಿಸ್ತರಣೆ ಅಥವಾ ಚರಂಡಿ, ಫುಟ್‌ಪಾತ್ ಕಾಮಗಾರಿ ಕೈಗೊಳ್ಳಲು ಅಗತ್ಯ ವಿರುವ ಜಾಗವನ್ನು ಖಾಸಗಿ ಭೂಮಾಲೀಕರಿಂದ ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಈಗಾಗಲೇ ಪಾಲಿಕೆ ತೀರ್ಮಾನಿಸಿದೆ. ಬಳಿಕ ಸ್ಮಾರ್ಟ್‌ಸಿಟಿ ಮುಖೇನ ಈ ರಸ್ತೆಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. – ಪ್ರೇಮಾನಂದ ಶೆಟ್ಟಿ, ಮೇಯರ್, ಪಾಲಿಕೆ
-ದಿನೇಶ್ ಇರಾ