Advertisement

ಭೂ ನ್ಯಾಯ ಮಂಡಳಿ ಕಡತ ವಿಚಾರಣೆ

11:08 AM Jul 03, 2022 | Team Udayavani |

ಆಳಂದ: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಭೂ ನ್ಯಾಯ ಮಂಡಳಿ ಕಡತಗಳನ್ನು ಕಲಬುರಗಿ ಸಹಾಯಕ ಆಯುಕ್ತೆ ಆಗಿರುವ ಭೂ ನ್ಯಾಯ ಮಂಡಳಿ ಅಧ್ಯಕ್ಷೆ ಮೊನೋರುತ್‌ (ಐಎಎಸ್‌) ವಿಚಾರಣೆ ನಡೆಸಿದರು.

Advertisement

ಪಟ್ಟಣ ಹೊರವಲಯದ ತಾಲೂಕು ಆಡಳಿತ ಸೌಧದಲ್ಲಿ ನಡೆದ ಭೂ ನ್ಯಾಯ ಮಂಡಳಿ ಸಭೆಯಲ್ಲಿ ಮಂಡಳಿ ಸದಸ್ಯರು ಮತ್ತು ವಾದಿ, ಪ್ರತಿವಾದಿ ನ್ಯಾಯವಾದಿಗಳು, ಸಂಬಂಧಿತ ಬಹುತೇಕ ರೈತ ಕಕ್ಷಿದಾರರು ಹಾಜರಿದ್ದರು.

ತಹಶೀಲ್ದಾರರು ಮತ್ತು ಭೂ ನ್ಯಾಯ ಮಂಡಳಿ ಕಾರ್ಯದರ್ಶಿ ಯಲ್ಲಪ್ಪ ಸುಬೇದಾರ, ಸದಸ್ಯ ಸಂತೋಷ ಮಾನು ಪವಾರ, ಲಿಂಗರಾಜ ಗುರುಪಾದಪ್ಪ ಪಾಟೀಲ, ಶ್ರೀಮಂತ ಹಣಮಂತ ಗೋಧೆ, ಈರಣ್ಣಾ ಗುರುನಾಥ ಸೊನ್ನದ ಇದ್ದರು. ಗೇಣಿ ಜಮೀನು ಕುರಿತು ಒಟ್ಟು 22 ಪ್ರಕರಣದ ಕಡಿತ ವಿಲೇವಾರಿ ಬಾಕಿಯಿದ್ದು, ಸಭೆಯಲ್ಲಿ ಆಯುಕ್ತರು ಪರಿಶೀಲಿಸಿ ವಿಚಾರಣೆ ನಡೆಸಿ ಆಗಸ್ಟ್‌ 5ರಂದು ಭೂ ನ್ಯಾಯ ಮಂಡಳಿ ಸಭೆ ನಡೆಸುವಂತೆ ಸೂಚಿಸಿದರು. ಕಂದಾಯ ಇಲಾಖೆ ಶಿರಸ್ತೇದಾರ ಶ್ರೀನಿವಾಸ ಕುಲಕರ್ಣಿ, ಪ್ರಥಮ ದರ್ಜೆ ಸಹಾಯಕ ಶರಣು ಹಕ್ಕಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next