ಪಿರಿಯಾಪಟ್ಟಣ: ಹಿಡುವಳಿದಾರರ ಪಹಣಿ ವಿಸ್ತೀರ್ಣ ಮತ್ತು ಅನುಭವ ಹಾಗೂ ಸರ್ವೇಯ ದಾಖಲೆಯ ಆನುಗುಣವಾಗಿ ಜಮೀನು ಅಳತೆ ಮಾಡಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಪಹಣಿ ನೀಡಲಾಗುವುದು ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎ.ಎನ್.ಮಂಜೇಗೌಡ ತಿಳಿಸಿದರು.
ಪಟ್ಟಣ ತಾಲೂಕಿನ ಮಲಗನಕೆರೆ ಗ್ರಾಮದಲ್ಲಿ ಕಂದಾಯ ಇಲಾಖೆ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ವತಿಯಿಂದ ಏರ್ಪಡಿಸಲಾಗಿದ್ದ ಪೋಡಿಮುಕ್ತ ಗ್ರಾಮ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಣಸೂರು ವಿಭಾಗ ವ್ಯಾಪ್ತಿಗೆ ಬರುವ ಭೂದಾಖಲೆಗಳಲ್ಲಿ 1ರಿಂದ4 ನೇ ಹಂತದವರೆ ಪೋಡಿಮುಕ್ತ ಅಭಿಯಾನದಡಿ 25 ಗ್ರಾಮಗಳ ಅಳತೆ ಪೂರೈಸಿ ದುರಸ್ತಿ ಕೆಲಸ ಪೂರೈಸಿ ಕಂದಾಯ ಇಲಾಖೆಯ ಮೂಲಕ ಪಹಣೀಕರಣ ಮಾಡಿಸಿ ಸಂಬಂಧಪಟ್ಟ ಹಿಡುವಳಿದಾರರಿಗೆ ಉಚಿತವಾಗಿ ನೀಡಲಾಗುತಿದೆ. 5ನೇ ಹಂತದಲ್ಲಿ 10 ಗ್ರಾಮಗಳು ಆಳತೆಗೆ ಆಯ್ಕೆಗೊಂಡಿದ್ದು, ಈ ಪೈಕಿ 2 ಗ್ರಾಮಗಳ ಅಳತೆ ಮುಗಿದಿದೆ.
3ನೇ ಗ್ರಾಮ ರಾವಂದೂರು ಹೋಬಳಿ ಮಲಗನಕೆರೆ ಗ್ರಾಮದಲ್ಲಿ ಪೋಡಿ ಮುಕ್ತ ಅಭಿಯಾನದ ಒಟ್ಟು ಸ.ನಂ.235ರಲ್ಲಿ ಒಟ್ಟು 428 ಬ್ಲಾಕ್‌ಗಳ ಅಳತೆ ಕೆಲಸ ಮುಗಿಸಲಾಗಿದೆ. ಹಿಡುವಳಿದಾರರಿಂದ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಎಲ್ಲಾ ಹಿಡುವಳಿದಾರರಿಗೆ ಪೋಡು ಮಾಡಿ ಆರ್‌ಟಿಸಿ ವಿತರಿಸಲಾಗುವುದು ಎಂದು ಪೋಡಿ ಮುಕ್ತ ಅಭಿಯಾನಕ್ಕೆ ಬರುವ ಭೂಮಾಪಕರಿಗೆ ಸಹಕಾರ ನೀಡುವಂತೆ ತಿಳಿಸಿದರು.
ಭೂ ದಾಖಲೆ ಸಹಾಯಕ ನಿರ್ದೇಶಕರಾದ ಪರ್ಯಾವೇಕ್ಷರಾದ ಮಹೇಶ್ ಮತ್ತು ಕೆ.ಅನಿಲ್‌ಆಂತೋನಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಕೆ.ಪ್ರಕಾಶ್ ಮತ್ತು ಗ್ರಾಪಂ ಅಧ್ಯಕ್ಷರು, ಸದಸ್ಯರು ಇದ್ದರು.