ಯಳಂದೂರು : ಆಂಧ್ರಪ್ರದೇಶದ ಪ್ರಭಾವಿ ವ್ಯಕ್ತಿ ಯಾದ ಹರೀಶ್‌ಕುಮಾರ್ ಅವರು ತಿಮ್ಮೇಗೌಡನ ಪಾಳ್ಯದ ವ್ಯಾಪ್ತಿಯಲ್ಲಿರುವ ದಲಿತರಿಗೆ ಸೇರಿರುವ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ ವ್ಯವಸಾಯವನ್ನು ಮಾಡುತ್ತಿರುವುದು ಖಂಡಿಸಿ ಹರೀಶ್ ಕುಮಾರ್ ವಿರುದ್ಧ ಕಾನೂನು ಕ್ರಮವಹಿಸಬೇಕೆಂದು ಆಗ್ರಹಿಸಿ ಇರಸವಾಡಿ ಗ್ರಾಮಸ್ಥರು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎಂ.ನಂಜುಂಡಸ್ವಾಮಿ ಮಾತನಾಡಿ, ಚಾ.ನಗರ ತಾಲೂಕಿನ ಬಿಆರ್‌ಟಿ ವನ್ಯಧಾಮದ ಕೆ.ದೇವರಹಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ತಿಮ್ಮೇಗೌಡಪಾಳ್ಯದ ಸರ್ವೆ ನಂಬರ 55ರಲ್ಲಿ ಇರಸವಾಡಿ ಗ್ರಾಮದ ದಲಿತರ ಜನಾಂಗಕ್ಕೆ 72 ಎಕರೆ ಪ್ರದೇಶವನ್ನು ತಲಾ 4 ಎಕರೆಯಂತೆ 18 ರೈತರಿಗೆ 1962ರಲ್ಲಿ ಅರಣ್ಯ ಮಂತ್ರಿಯಾಗಿದ ಬಿ.ರಾಚಯ್ಯ ಮಂಜೂರಾತಿ ಮಾಡಿ ಸಾಗುವಳಿ ಪತ್ರವನ್ನು ಕೊಟ್ಟಿದ್ದಾರೆ.
ಈ ಜಮೀನಿನಲ್ಲಿ ರೈತರು ಅನೇಕ ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು, ಹೀಗಿರುವ ಅನೇಕ ಸಾರಿ ಬರಗಾಲ, ಕಾಡು ಪ್ರಾಣಿಗಳ ಕಾಟದಿಂದ ಬೆಳೆನಾಶ ಸೇರಿದಂತೆ ಅನೇಕ ಕಾರಣದಿಂದ ಜೀವನೋಪಾಯಕ್ಕೆ ಬೇರೆ ಕಡೆ ಹೋಗಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೆವು, ಇದರಿಂದ ಕೆಲವು ವರ್ಷಗಳ ಕಾಲ ಬೆಳೆ ಮಾಡಲು ಸಾಧ್ಯವಾಗಲಿಲ್ಲ ಹೀಗಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು 60 ಎಕರೆ ಪ್ರದೇಶವನ್ನು ನಡೆತೋಪು, ಆನೆ ಕಂದಕ, ಮಾಡಿಕೊಂಡಿದ್ದಾರೆ. ಉಳಿದ ಸರ್ವೆ ನಂಬರ್ 55/48, 55/49, 55/50 ರ ಸರ್ವೇ ನಂ. 12 ಎಕರೆಯಷ್ಟು ಖಾಸಗಿ ವ್ಯಕ್ತಿಯಾದ ಹರೀಶ್ ಕುಮಾರ್ ಎಂಬುವರು ಆಕ್ರಮಿಸಿಕೊಂಡಿ ಇರಸವಾಡಿ ಗ್ರಾಮದ ರೈತರಿಗೆ ಸೇರಿರುವ ಜಮೀನ ಪ್ರದೇಶದಲ್ಲಿ ತೆಂಗಿನ ಸಸಿ, ಕಲ್ಲಿನ ಬೇಲಿ ಹಾಕಿ ಜಮೀನನ್ನು ವಶಪಡಿಸಿಕೊಳ್ಳುವು ತಂತ್ರವನ್ನು ಮಾಡಿದ್ದಾನೆ. ಈ ಬಗ್ಗೆ ರೈತರು ಕೇಳೀದಕ್ಕೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರ ಮೇಲೆ ಜಮೀನಿನ ತೆಂಗಿನ ಸಸಿ ಹಾಗೂ ಕಲ್ಲಿನ ಕಂಬ, ತಂತಿ ಬೇಲಿಯನ್ನು ನಾಶಪಡಿಸಿದ್ದಾರೆ ಎಂದು ಸುಳ್ಳು ದೂರು ನೀಡಿ ಗ್ರಾಮಸ್ಥರನ್ನು ಎದುರಿಸು ತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಹರೀಶ್ ಕುಮಾರ್ ರೈತರ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.