Advertisement

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ: ರಿಯಲ್‌ ಎಸ್ಟೇಟ್‌ಗೆ ಸಲೀಸು?

12:51 AM Jun 13, 2020 | Sriram |

ಬೆಂಗಳೂರು: ಕರ್ನಾಟಕ ಭೂ ಸುಧಾರಣ ಕಾಯ್ದೆಗೆ ತಿದ್ದುಪಡಿ ತರುವ ರಾಜ್ಯ ಸರಕಾರದ ತೀರ್ಮಾನದಿಂದ ಕೃಷಿ ಜಮೀನು ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ ಬಳಕೆ ಯಾಗುವ ಅಪಾಯವಿದೆಯೇ?

Advertisement

ಕೃಷಿ ಜಮೀನು ಖರೀದಿಸಿದರೂ ಕೃಷಿ ಬಳಕೆಗೆ ಮಾತ್ರ ಎಂಬ ಕಠಿನ ಷರತ್ತು ವಿಧಿಸದೆ ಇದ್ದರೆ ಇಂಥ ಅಪಾಯ ಸಾಧ್ಯತೆ ಇದ್ದು, ಕೃಷಿಕರ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಸರಕಾರದ ತೀರ್ಮಾನದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವುದರಿಂದ ಕೃಷಿ ಬಳಕೆಗೆ ಕಡ್ಡಾಯ ಎಂಬ ಷರತ್ತು ವಿಧಿಸಬಹುದೇ ಎಂಬ ಬಗ್ಗೆ ಮರುಪರಿಶೀಲನೆ ನಡೆಸುವ ಆಗ್ರಹವೂ ಕೇಳಿಬರುತ್ತಿದೆ.ಸಂಪುಟ ಸದಸ್ಯರಲ್ಲೇ ಈ ವಿಚಾರದಲ್ಲಿ ಭಿನ್ನರಾಗ ಮೂಡಿದೆ. ಇದು ವಿವಾದದ ಸ್ವರೂಪ ಪಡೆಯುವ ಲಕ್ಷಣಗಳು ಕಂಡುಬರುತ್ತಿವೆ.

ಕರ್ನಾಟಕ ಭೂ ಸುಧಾರಣಾ ಕಾಯ್ದೆಯ 79 ಎ, ಬಿ, ಸಿ, 80 ರದ್ದು ಪಡಿಸಿ ಕಲಂ 63ರಡಿ ಜಮೀನು ಮಾಲಕತ್ವ ನೀಡು ವು ದು, ಐವರು ಸದಸ್ಯರ ಕುಟುಂಬ 108 ಎಕರೆವರೆಗೂ ಕೃಷಿ ಭೂಮಿ ಹೊಂದಲು ಅವಕಾಶ ಕಲ್ಪಿಸುವುದರಿಂದ ಕೃಷಿ ಭೂಮಿ ಹಣವಂತರ ಪಾಲಾಗಬ ಹುದೇ ಎಂಬ ಆತಂಕವಿದೆ. ಇಂಥವರು ಮುಂದಿನ ದಿನಗ ಳಲ್ಲಿ ಇದೇ ಭೂಮಿಯನ್ನು ರಿಯಲ್‌ ಎಸ್ಟೇಟ್‌ ಆಗಿ ಪರಿವರ್ತನೆ ಮಾಡಿಕೊಳ್ಳಬಹುದು ಎಂಬ ಆಕ್ಷೇಪ ಕೇಳಿ ಬಂದಿದೆ.

ಏಕೆ ಈ ಆತಂಕ?
– ಕಾಯ್ದೆ ತಿದ್ದುಪಡಿ ಸಂಬಂಧ ಕಂದಾಯ ಇಲಾಖೆಯು ಸಂಪುಟ ಸಭೆಗೆ ಸಿದ್ಧಪಡಿಸಿರುವ ಟಿಪ್ಪಣಿಯಲ್ಲಿ ಎಲ್ಲೂ ಕೃಷಿಕರಲ್ಲದವರು ಕೃಷಿ ಜಮೀನು ಖರೀದಿಸಿದಾಗ ಕೃಷಿ ಮತ್ತು ಸಂಬಂಧಿ ಉಪ ಕಸುಬುಗಳಿಗೆ ಮಾತ್ರ ಕಡ್ಡಾಯ ವಾಗಿ ಬಳಸ ಬೇಕು ಎಂದು ನಮೂದಿಸಿಲ್ಲ.
– ವ್ಯವಸಾಯ ಕೈಗೊಳ್ಳದ ಕೃಷಿ ಜಮೀನುಗಳಲ್ಲಿ ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ/ ಹಡಿಲು ಭೂಮಿಯನ್ನು ಕೃಷಿ ಯೇ ತರ ಚಟು ವಟಿಕೆ ಕೈಗೊಳ್ಳಲು ಇಚ್ಛಿಸು ವವರು ಖರೀ ದಿಸ ಬಹುದು ಎಂದು ಉಲ್ಲೇಖೀಸಲಾಗಿದೆ.
– ಹೀಗಾಗಿ ಹಡಿಲು ಭೂಮಿ ಎಂದರೆ ಕೃಷಿ ಮಾಡದೆ ಬಿಟ್ಟಿರುವ ಜಮೀನು ಕೂಡ ಎಂಬರ್ಥ ಬರಲಿದೆ. ಈ ಅವಕಾಶ ಬಳಸಿ ರಿಯಲ್‌ ಎಸ್ಟೇಟ್‌ಗೆ ಕೃಷಿ ಭೂಮಿ ಬಳಕೆಯಾಗಬಹುದು.

Advertisement

ಮೊದಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಬಹುರಾಷ್ಟ್ರೀಯ ಕಂಪೆನಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು. ಈಗ ಅವರು ಕೃಷಿಭೂಮಿ ಒಡೆಯರಾಗಲು ಮತ್ತೂಂದು ತಿದ್ದುಪಡಿ ತರಲಾಗಿದೆ. ಇದು ರಿಯಲ್‌ ಎಸ್ಟೇಟ್‌ ದಂಧೆಯಲ್ಲದೆ ಮತ್ತೇನೂ ಅಲ್ಲ.
– ಪ್ರೊ| ನರಸಿಂಹಪ್ಪ , ಕೃಷಿ ತಜ್ಞ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರ ಆದಾಯ ಭದ್ರತೆಗೆ ಮಾತ್ರವಲ್ಲ, ದೇಶದ ಆಹಾರ ಭದ್ರತೆ ಬುಡಕ್ಕೆ ಕೊಡಲಿ ಏಟು ಹಾಕುತ್ತದೆ. ಕೃಷಿ ಭೂಮಿ ರೈತರ ಕೈ ತಪ್ಪಿ ಆ ಮೂಲಕ ಕೃಷಿ ಉತ್ಪಾದನೆಗೆ ಅಪಾಯ ಬರಬಾರದು ಎಂಬುದೇ 1961ರ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಉದ್ದೇಶವಾಗಿತ್ತು.
– ಪ್ರಕಾಶ್‌ ಕಮ್ಮರಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

ಪ್ರಸಕ್ತ ಸನ್ನಿವೇಶದಲ್ಲಿ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸೂಕ್ತ. ಜತೆಗೆ ಕೃಷಿ ಬಳಕೆಗೆ ಕಡ್ಡಾಯ ಎಂದು ಸೇರಿಸುವ ಬಗ್ಗೆಯೂ ಸಾಧ್ಯವೇ ಎಂಬುದನ್ನು ಪರಿಶೀಲಿಸಲು ಸಂಬಂಧಪಟ್ಟ ಇಲಾಖೆ ಜತೆ ನಾನು ಚರ್ಚಿಸುತ್ತೇನೆ.
– ಬಿ.ಸಿ. ಪಾಟೀಲ್‌, ಕೃಷಿ ಸಚಿವ

-ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next