Advertisement

ಸರ್ವಜ್ಞ ಭವನಕ್ಕೆ ಜಮೀನು-ಅನುದಾನ: ಪ್ರಿಯಾಂಕ್‌ ಖರ್ಗೆ ಭರವಸೆ

01:46 PM Apr 06, 2022 | Team Udayavani |

ಚಿತ್ತಾಪುರ: ಕುಂಬಾರ ಸಮಾಜದ ಬಹುದಿನಗಳ ಬೇಡಿಕೆಯಾದ ಸರ್ವಜ್ಞ ಭವನ ನಿರ್ಮಾಣಕ್ಕಾಗಿ ಪಟ್ಟಣದಲ್ಲಿ ಒಂದು ಎಕರೆ ಜಮೀನು ಮಂಜೂರು ಮಾಡಲಾಗಿದ್ದು, 50 ಲಕ್ಷ ರೂ. ಅನುದಾನ ಬಿಡುಗಡೆ ಮತ್ತು ಕುಂಬಾರ ಅಭಿವೃದ್ಧಿ ಮಂಡಳಿ ನಿಗಮವನ್ನಾಗಿಸಲು ಪ್ರಯತ್ನಿಸಲಾಗುವುದು ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಕುಂಬಾರ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕುಂಬಾರ ಜನಜಾಗೃತಿ ಸಮಾವೇಶ ಹಾಗೂ ಕವಿ ಸರ್ವಜ್ಞ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಧ್ವನಿ ಇಲ್ಲದ ಸಮಾಜದ ಜನರು ಒಂದಾಗಿರುವುದು ಖುಷಿ ತರುವ ಸಂಗತಿಯಾಗಿದೆ. ಸರ್ವಜ್ಞ ಜಯಂತ್ಯುತ್ಸವ ಆಚರಿಸುತ್ತಿದ್ದೇವೆ. ಮೂರೇ ಮೂರು ಸಾಲುಗಳಲ್ಲಿ ಜೀವನದ ಬಗ್ಗೆ ಹಾಗೂ ವಾಸ್ತವಿತೆ ಬಗ್ಗೆ ಮನಮುಟ್ಟುವಂತೆ ವಚನ ರಚಿಸುತ್ತಿದ್ದ ಸರ್ವಜ್ಞರು ಬಸವಾದಿ ಶರಣರಿಂದ ಪ್ರಭಾವಕ್ಕೆ ಒಳಗಾದ ಶ್ರೇಷ್ಠ ಕವಿಯಾಗಿದ್ದಾರೆ ಎಂದು ಕೊಂಡಾಡಿದರು. ಜಾತಿ ವ್ಯವಸ್ಥೆ ಆಳವಾಗಿ ಬೇರುಬಿಟ್ಟು ಮೂಢನಂಬಿಕೆ ತಾಂಡವಾಡುತ್ತಿದ್ದ ಆ ಕಾಲ ಘಟ್ಟದಲ್ಲಿ ಜನರನ್ನು ಜಾಗೃತಿಗೊಳಿಸಲು ತಮ್ಮ ತ್ರಿಪದಿ ವಚನಗಳ ಮೂಲಕ ಕನ್ನಡ ಆಸ್ಮಿತೆ ಮೂಡಿಸಿದ್ದ ಸರ್ವಜ್ಞರು ಅಸಮಾನ್ಯ ಕವಿಯಾಗಿದ್ದರು. ಅವರು ಒಟ್ಟು 7 ಕೋಟಿ ವಚನ ರಚಿಸಿದ್ದು ಪ್ರಶಾಂಸರ್ಹ. 16ನೇ ಶತಮಾನದಲ್ಲಿಯೇ ಸಮಾನತೆಗಾಗಿ ಹೋರಾಟ ನಡೆಸಿದ್ದ ಸರ್ವಜ್ಞ ಕವಿ ಎಲ್ಲ ಕಾಲಕ್ಕೂ ಸಲ್ಲುವ ಕವಿ ದಾರ್ಶನಿಕರಾಗಿದ್ದಾರೆ ಎಂದರು.

ನೀವು ಧ್ವನಿ ಇಲ್ಲದವರು ಎಂದು ಭಾವಿಸಬೇಕಿಲ್ಲ. ನಿಮ್ಮ ಧ್ವನಿಯಾಗಿ ನಾನು ನಿಮ್ಮೊಂದಿಗೆ ಇದ್ದೇನೆ. ಕಲ್ಯಾಣ ಕರ್ನಾಟಕದ ಜನರ ಏಳಿಗೆಗಾಗಿ ನಾನು ಎಲ್ಲ ಪಕ್ಷದ ನಾಯಕರೊಂದಿಗೆ ಕೈ ಜೋಡಿಸಿ ಹೋರಾಟ ನಡೆಸಲು ಸಿದ್ಧನಿದ್ದೇನೆ. ಇಲ್ಲಿ ರಾಜಕೀಯ ವಿಷಯ ಪ್ರಮುಖವಾಗುವುದಿಲ್ಲ. ನಾನು ಕುಂಬಾರ ಸಮಾಜದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಹೇಳಿದರು.

ಕುಂಬಾರ ಸಮಾಜದ ತಾಲೂಕು ಅಧ್ಯಕ್ಷ ಪ್ರಭು ಕುಂಬಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್‌, ಸಾಹಿತಿ ಬನ್ನಪ್ಪ ಬಿ.ಕೆ ಮಾತನಾಡಿದರು. ಶ್ರೀ ಶರಣ ಗುಂಡಯ್ಯ ಸ್ವಾಮಿ, ಶ್ರೀ ಸೋಮಶೇಖರ ಶಿವಾಚಾರ್ಯ, ಶ್ರೀ ಪರ್ವತೇಶ್ವರ ಶಿವಾಚಾರ್ಯ, ಶ್ರೀ ಸಂಗಮನಾಥ ಸ್ವಾಮಿ ಆಶೀರ್ವಚನ ನೀಡಿದರು.

Advertisement

ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶರವಶರಣಪ್ಪ ಸುಲೇಪೇಟ್‌, ಎಂ. ರಾಚಪ್ಪ, ಉಮಾಕಾಂತ ಹಳ್ಳೆ, ಭೀಮಣ್ಣ ಸಾಲಿ, ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ, ಶಿವಾನಂದ ಪಾಟೀಲ, ಸೋಮಶೇಖರ ಪಾಟೀಲ, ಜಗದೇವ ಕುಂಬಾರ, ದೇವಿಂದ್ರಪ್ಪ, ಜಗನ್ನಾಥ ಕುಂಬಾರ, ಕಲ್ಲಪ್ಪ ಕುಂಬಾರ, ಲಕ್ಷ್ಮಣ ಕುಂಬಾರ, ಶ್ರೀಹರಿ ಕುಂಬಾರ, ನಾಗಣ್ಣ ವಾರದ್‌, ದಶರಥ ಕುಂಬಾರ, ಶಿವರುದ್ರ ಭೀಣಿ, ಶಿವರಾಜ ಕಲಗುರ್ತಿ, ನಾಮದೇವ ರಾಠೊಡ, ಮಲ್ಲಿಕಾರ್ಜುನ ಎಮ್ಮೇನೂರ್‌, ಸಾಬಣ್ಣ ಡಿಗ್ಗಿ, ಭೀಮರಾಯ ಕುಂಬಾರ, ಶರಣಬಸಪ್ಪ ಕುಂಬಾರ, ಭೀಮರಾಯ ಕುಂಬಾರ ಇತರರು ಇದ್ದರು. ವೀರಣ್ಣ ಕುಂಬಾರ ಸ್ವಾಗತಿಸಿದರು, ನರಸಪ್ಪ ಕುಂಬಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next