ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಹಿನ್ನೆಲೆಯಲ್ಲಿ ತೆರವುಗೊಳಿಸುವ ವ್ಯಾಪಾರಿಗಳಿಗೆ ಅರ್ಹವಾದ ನಷ್ಟಪರಿಹಾರ ನೀಡಬೇಕು, ಪುನರ್ವಸತಿ ಖಚಿತಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಕಚೇರಿಗೆ ಜಾಥಾ ನಡೆಯಿತು.
ಜಾಥಾವನ್ನು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಉಪಾಧ್ಯಕ್ಷರೂ ಜಿಲ್ಲಾ ಅಧ್ಯಕ್ಷರೂ ಆದ ಕೆ.ಅಹಮ್ಮದ್ ಶರೀಫ್ ಉದ್ಘಾಟಿಸಿ ಮಾತನಾಡಿದರು.
ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕಾಸರಗೋಡು ಜಿಲ್ಲಾ ಸಮಿತಿ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ ಅಧ್ಯಕ್ಷತೆ ವಹಿಸಿದರು.
ಜಾಥಾವನ್ನು ಉದ್ದೇಶಿಸಿ ಎ.ಕೆ. ಮೊದೀನ್ ಕುಂಞಿ, ಮುಹಮ್ಮದ್ ರಫೀಕ್ ಕೆ.ಎ., ಹಂಸ, ಕೆ.ಜೆ. ಸಜಿ, ಕೆ. ಕುಂಞಿಕಣ್ಣನ್, ಚಂದ್ರಾವತಿ ಮೊದಲಾದವರು ಮಾತನಾಡಿದರು.
ಹೊಸ ಬಸ್ ನಿಲ್ದಾಣ ಪರಿಸರದಿಂದ ಆರಂಭಗೊಂಡ ಮೆರವಣಿಗೆಗೆ ಬಾಲಕೃಷ್ಣನ್, ವಿಕ್ರಂ ಪೈ ಮೊದಲಾದವರು ನೇತೃತ್ವ ನೀಡಿದರು.