Advertisement

Land-For-Jobs Scam: ತೇಜಸ್ವಿ, ಲಾಲು ಪ್ರಸಾದ್‌ಗೆ ಇಡಿ ಸಮನ್ಸ್ ಜಾರಿ

07:51 PM Dec 20, 2023 | Team Udayavani |

ನವದೆಹಲಿ : ರೈಲ್ವೇ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್​ಗೆ ಜಾರಿ ನಿರ್ದೇಶನಾಲಯ ಬುಧವಾರ ಸಮನ್ಸ್​ ಜಾರಿ ಮಾಡಿದೆ.

Advertisement

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ತನಿಖಾಧಿಕಾರಿಗಳ ಮುಂದೆ ತಮ್ಮ ಹೇಳಿಕೆ ದಾಖಲಿಸಲು ಡಿ.​ 22ರಂದು ತೇಜಸ್ವಿ ಯಾದವ್ ಹಾಗೂ ಡಿ.​ 27ರಂದು ಲಾಲು ಪ್ರಸಾದ್​ ಯಾದವ್ ವಿಚಾರಣೆಗೆ ಹಾಜರಾಗುವಂತೆ​ ಸಮನ್ಸ್​ನಲ್ಲಿ ಸೂಚಿಸಲಾಗಿದೆ.

ಯುಪಿಎ-1 ಸರಕಾರದಲ್ಲಿ ಲಾಲು ಪ್ರಸಾದ್​ ಯಾದವ್ ರೈಲ್ವೇ ಸಚಿವರಾಗಿದ್ದ ವೇಳೆ ಹಗರಣ ನಡೆದಿದ್ದು,
2004 ರಿಂದ 2009 ರವರೆಗೆ ಭಾರತೀಯ ರೈಲ್ವೇಯ ವಿವಿಧ ವಲಯಗಳಲ್ಲಿ ಗ್ರೂಪ್ ಡಿ ಹುದ್ದೆಗಳಿಗೆ ಹಲವಾರು ಜನರನ್ನು ನೇಮಿಸಲಾಯಿತು.

ನೇಮಕಗೊಂಡವರು ಬದಲಿಯಾಗಿ ತಮ್ಮ ಜಮೀನನ್ನು ಆಗಿನ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್​ ಯಾದವ್​ ಅವರ ಕುಟುಂಬ ಸದಸ್ಯರಿಗೆ ಮತ್ತು ಸಂಬಂಧಿತ ಕಂಪನಿ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್​ಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next