Advertisement

ಪುಣೆ ಬಿಲ್ಲವರ ಕನಸು ನನಸಾಗಲು ಮಹತ್ತರ ಕಾರ್ಯ ಕೈಗೂಡಿದೆ: ವಿಶ್ವನಾಥ್‌ ಪೂಜಾರಿ

01:13 PM Dec 14, 2020 | Suhan S |

ಪುಣೆ, ಡಿ. 13: ಬಿಲ್ಲವ ಸಮಾಜ ಸೇವಾ ಸಂಘ ಪುಣೆಯ ಸಂಘದ ಸಮಾಜಪರ ಕಾರ್ಯಗಳಿಗೆ, ಸಮಾಜ ಬಾಂಧವರಿಗೆ ಅಗತ್ಯ ವಾಗಿ ಬೇಕಾಗಿದ್ದ ಹಾಗೂ ಸಮಾಜದ ಹೆಮ್ಮೆಗೆ ಧ್ಯೋತಕವಾಗಿ ಪುಣೆಯಲ್ಲಿ ನಮ್ಮದೇ ಒಂದು ಭವನದ ನಿರ್ಮಾಣ ಆಗಲೇಬೇಕಾಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಭವನ ನಿರ್ಮಾಣಕ್ಕೆ ತೀರಾ ಆವಶ್ಯಕವಾಗಿದ್ದ ಜಾಗ ಖರೀದಿಯ ಕಾರ್ಯ ನಮ್ಮ ಕುಲದೇವರು ಮತ್ತು ಬ್ರಹ್ಮಶ್ರೀ ನಾರಾಯಣಗುರುಗಳ ಆಶೀರ್ವಾದದಿಂದ ಕೈಗೂಡಿದಂತಾಗಿದೆ. ಇನ್ನು ಮುಂದೆ ಗುರು ಮಂದಿರ ಮತ್ತು ಸಭಾಭವನದಂತಹ ಯೋಜನೆಗಳಿಗೆ ಸಮಾಜ ಬಾಂಧವರ ಸಹಾಯ, ಸಹಕಾರ ಅಗತ್ಯ ವಾಗಿದೆ. ಮುಂದಿನ ನಮ್ಮ ಎಲ್ಲ ಮಹತ್ಕಾರ್ಯಗಳು ದೈವೀಚ್ಛೆಯಂತೆ ನಡೆದು, ನಮ್ಮೆಲ್ಲರ ಪ್ರಯತ್ನದಿಂದ ಶೀಘ್ರದಲ್ಲೇ ಯಶಸ್ಸನ್ನು ಕಾಣಬೇಕಾಗಿದೆ. ಪುಣೆ ಬಿಲ್ಲವರ ಸಂಪೂರ್ಣ ಸಹಕಾರ ಮತ್ತು ಬೆಂಬಲದಿಂದ ನಮ್ಮ ಬೃಹತ್‌ ಯೋಜನೆ ನಿರ್ವಿಘ್ನವಾಗಿ ನೆರವೇರಲಿದೆ ಎಂಬ ವಿಶ್ವಾಸವಿದೆ. ಇದೀಗ ಪುಣೆ ಬಿಲ್ಲವರ ಬಹುದಿನಗಳ ಕನಸಾಗಿರುವ ಭವನ ನಿರ್ಮಾಣಕ್ಕೆ ಬೇಕಾದಂತಹ ಮಹತ್ತರವಾದ ಒಂದು ಕಾರ್ಯ ಕೈಗೂಡಿದೆ ಎಂದು ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ್‌ ಪೂಜಾರಿ ಕಡ್ತಲ ಹೇಳಿದರು.

Advertisement

ಗುರುವಂದನ ಕಾರ್ಯಕ್ರಮ :

ಪುಣೆ ಬಿಲ್ಲವ ಬಾಂಧವರ ಬಹು ನಿರೀಕ್ಷಿತ ಗುರು ಮಂದಿರ ಮತ್ತು ಬಿಲ್ಲವ ಸಭಾಭವನಕ್ಕೆ ಸರ್ವೆ ನಂ. 82/1, ಅಂಬೇಗಾಂವ್‌ ಖುರ್ದ್ ಪುಣೆ ಎಂಬಲ್ಲಿ ಸುಮಾರು ಒಂದು ಎಕ್ರೆ ಯಷ್ಟು ಖರೀದಿಸಿದ ಜಾಗದಲ್ಲಿ ಇತ್ತೀಚೆಗೆ ಬಿಲ್ಲವ ಭಾಂದವರೆಲ್ಲ ಸೇರಿ ಆಯೋಜಿ ಸಿದ್ದ ಗುರುವಂದನ ಕಾರ್ಯ ಕ್ರಮದಲ್ಲಿ ವಿಶ್ವನಾಥ್‌ ಪೂಜಾರಿ ಮಾತನಾಡಿ, ಬಿಲ್ಲವ ಸಮಾಜ ಕ್ಕಾಗಿ, ಪುಣೆ ಬಿಲ್ಲವರಿ ಗಾಗಿ ಕೈಗೊ ಳ್ಳುವ ಈ ಕಾರ್ಯ ಸಮಾಜದ ಅಭಿವೃದ್ಧಿ ಗೋ ಸ್ಕರ ವಾಗಿ ನಡೆಯು ತ್ತಿದೆ. ಇದು ಸಮಾ ಜದ ಕೆಲಸವಾ ಗಿದ್ದು, ಸಮಾಜ ಬಾಂಧವ ರೆಲ್ಲರೂ ಒಗ್ಗೂಡಿ ಕೆಲಸ ಮಾಡ ಬೇಕು ಎಂದು ಕರೆ ನೀಡಿದರು.

ಗುರುವಂದನ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ, ಹಿರಿಯರಾದ ಜಿನ್ನಪ್ಪ ಕೋಟ್ಯಾನ್‌, ಲಿಂಗಪ್ಪ ಪೂಜಾರಿ, ಸತೀಶ್‌ ಪೂಜಾರಿ, ಸಂಘದ ಉಪಾಧ್ಯಕ್ಷರಾದ ಸಂದೇಶ್‌ ಪೂಜಾರಿ ಮತ್ತು ಭಾಸ್ಕರ್‌ ಪೂಜಾರಿ ಉಪ ಸ್ಥಿತರಿ ದ್ದರು. ಅಧ್ಯಕ್ಷರು ಮತ್ತು ಹಿರಿ ಯರು ತೆಂಗಿ ನಕಾಯಿ ಒಡೆದು ಗುರು ವಿನ ಭಾವಚಿತ್ರ ಹೊಂದಿರುವ ಪತಾಕೆಯ ಧ್ವಜಾರೋಹಣಗೈದರು. ಶಂಕರ್‌ ಪೂಜಾರಿ ಬಂಟಕಲ್‌ ಅವರು ಗುರು ಭಜನೆಯೊಂದಿಗೆ ಪ್ರಾರ್ಥಿಸಿ ಶುಭ ಹಾರೈಸಿದರು.

ಪ್ರಮುಖರಾದ ಲಿಂಗಪ್ಪ ಪೂಜಾರಿ, ಉಮೇಶ್‌ ಪೂಜಾರಿ, ಸತೀಶ್‌ ಪೂಜಾರಿ, ಪ್ರಕಾಶ್‌ ಪೂಜಾರಿ ಬೈಲೂರು, ಶಿವಪ್ರಸಾದ್‌ ಪೂಜಾರಿ, ರಾಘು ಪೂಜಾರಿ, ಕಿರಣ್‌ ಪೂಜಾರಿ, ಗಿರೀಶ್‌ ಪೂಜಾರಿ, ರವಿ ಪೂಜಾರಿ, ದಯಾ ನಂದ ಪೂಜಾರಿ, ಶಿವರಾಮ ಪೂಜಾರಿ, ಶೇಖರ್‌ ಪೂಜಾರಿ, ಸೂರ್ಯ ಪೂಜಾರಿ, ಧನಂಜಯ್‌ ಪೂಜಾರಿ ವಾರ್ಜೆ, ಸುಜಾತಾ ಪೂಜಾರಿ, ಅರುಣಾ ಪೂಜಾರಿ, ಪುಷ್ಪವೇಣಿ ಪೂಜಾರಿ, ಸುಜಾತಾ ಬಂಗೇರ, ಪ್ರೇಮಾ ಪೂಜಾರಿ ಮೊದಲಾದವರು ಉಪಸ್ಥಿ ತರಿ  ದ್ದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದರು. ಸಂಘದ ಕಾರ್ಯ  ದರ್ಶಿ ಸದಾನಂದ ಬಂಗೇರ ಕಾರ್ಯ  ಕ್ರಮ ನಿರೂಪಿಸಿ, ವಂದಿಸಿದರು. ಲಘು ಉಪ ಹಾರದ ವ್ಯವಸ್ಥೆ ಯನ್ನು ಆಯೋಜಿಸಲಾಗಿತ್ತು.

Advertisement

ಸುಮಾರು ಐವತ್ತು ವರ್ಷಗಳ ಹಿಂದೆಯೇ ಪುಣೆಯಲ್ಲಿ ಬಿಲ್ಲವ ಸಂಘಟನೆ ಸ್ಥಾಪನೆಯಾಗಿದ್ದರೂ ಸಂಘದ ಭವನ ನಿರ್ಮಾಣಕ್ಕೆ ಸ್ವಂತ ಜಾಗ ಖರೀದಿಸಲು ಅಸಾಧ್ಯವಾಗಿತ್ತು. ಆದರೆ ಪ್ರಸ್ತುತ ಅಧ್ಯಕ್ಷರಾಗಿರುವ ವಿಶ್ವನಾಥ್‌ ಪೂಜಾರಿ ಕಡ್ತಲ ಅವರ ನೇತೃತ್ವದಲ್ಲಿ ಇಂತಹ ವಿಶಾಲವಾದ ಸುಂದರ ಜಾಗವನ್ನು ಖರೀದಿಸಿದ್ದು, ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇನ್ನು ಮುಂದಿನ ಕಾರ್ಯ ಭವ್ಯವಾದ ಗುರು ಮಂದಿರ, ಸಭಾಭವನ ನಿರ್ಮಾಣ ನಮ್ಮ ಮುಂದಿದೆ. ಇವೆಲ್ಲವೂ ಎಲ್ಲರ ಸಹಕಾರದಿಂದ ಸಾಂಗವಾಗಿ ನೆರವೇರಬೇಕಿದೆ. ಸಮಾಜಕ್ಕೆ ಕೀರ್ತಿ ತರುವಂತಹ ಇಂತಹ ಯೋಜನೆಗಳಿಗೆ ಎಲ್ಲರು ಒಂದಾಗಿ ಸಹಕರಿಸಬೇಕು. ಜಿನ್ನಪ್ಪ ಕೋಟ್ಯಾನ್‌

ಪುಣೆ ಬಿಲ್ಲವ ಸಮಾಜದ ಹಿರಿಯರು ಪುಣೆ ಬಿಲ್ಲವರಿಗೆ ಆವಶ್ಯಕವಾಗಿ ಬೇಕಾಗಿದ್ದ ಸೂಕ್ತವಾದ ಜಾಗವೊಂದು ಗುರುಗಳ ಕೃಪೆಯಿಂದ, ಹಿರಿಯರ ಆಶೀರ್ವಾದದಿಂದ ಲಭಿಸಿದೆ. ನಮ್ಮ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಪ್ರಯತ್ನಕ್ಕೆ ಸಿಕ್ಕಿದ ಪ್ರತಿಫಲ ಇದಾಗಿದೆ. ಮುಂದಿನ ಅಭಿವೃದ್ಧಿಯ ಮಹತ್ಕಾರ್ಯಗಳಿಗೆ ನಾವೆಲ್ಲರೂ ಒಮ್ಮತದಿಂದ ಒಗ್ಗಟ್ಟಾಗಿ ಕೆಲಸ ಮಾಡೋಣ. ಈ ಕಾರ್ಯಗಳಿಗೆ ಗುರುವರ್ಯರ ಮಾತು, ಕುಲದೇವರ ಆಶೀರ್ವಾದ ಸದಾ ಇರುತ್ತದೆ. ಗೀತಾ ಪೂಜಾರಿ ಸದಸ್ಯೆ, ಮಹಿಳಾ ವಿಭಾಗ, ಪುಣೆ ಬಿಲ್ಲವ ಸಂಘ

Advertisement

Udayavani is now on Telegram. Click here to join our channel and stay updated with the latest news.

Next