Advertisement

ಉಡುಪಿ : 10 ಸೆಂಟ್ಸ್‌ ವರೆಗಿನ ಭೂ ಪರಿವರ್ತನೆ ಅಧಿಕಾರ ಡಿಸಿಗೆ

04:01 PM Nov 06, 2022 | Team Udayavani |

ಉಡುಪಿ : ಪಿಟಿಸಿಎಲ್‌ ಕಾಯ್ದೆ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನಿನ ಕನ್ವರ್ಷನ್‌ ಸರಕಾರದ ಮಟ್ಟದಲ್ಲಿ ಆಗಬೇಕಿತ್ತು. ಇದೀಗ ಸರಕಾರ ರಾಜ್ಯಾದ್ಯಂತ ಎಸ್ಸಿ, ಎಸ್ಟಿ ಅವರಿಗೆ 10 ಸೆಂಟ್ಸ್‌/4 ಗುಂಟೆ ವರೆಗೆ ಸ್ವಂತ ವಾಸದ ಉದ್ದೇಶಕ್ಕೆ ಮನೆ ನಿರ್ಮಿಸಲು ಜಿಲ್ಲಾಧಿಕಾರಿ ಹಂತದಲ್ಲಿಯೇ ಭೂ ಪರಿವರ್ತನೆಗೆ ಅವಕಾಶ ನೀಡಿ ಸರಕಾರ ಆದೇಶ ಹೊರಡಿಸಿದೆ ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದ್ದಾರೆ.

Advertisement

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರು ಪಿಟಿಸಿಎಲ್‌ ಕಾಯ್ದೆ ವ್ಯಾಪ್ತಿಗೆ ಒಳಪಡುವ ಜಮೀನುಗಳಲ್ಲಿ ಸ್ವಂತ ವಾಸ್ತವ್ಯದ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿದ್ದಲ್ಲಿ ಈ ಪ್ರಕ್ರಿಯೆಗಳು ಸರಕಾರದ ಹಂತದಲ್ಲಿ ವಿಳಂಬವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಸರಕಾರದ ಈ ಆದೇಶದಿಂದಾಗಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ವಿಳಂಬವಾಗದೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಮಾರಾಟ ಮಾಡುವಂತಿಲ್ಲ. ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಂದಾಯ ಸಚಿವ ಆರ್‌. ಅಶೋಕ್‌ ಕೊಕ್ಕರ್ಣೆಗೆ ಆಗಮಿಸಿದ್ದಾಗ ಈ ಬಗ್ಗೆ ಅವರ ಗಮನಕ್ಕೆ ತರಲಾಗಿದ್ದು, ವಿಧಾನಸಭೆಯಲ್ಲಿಯೂ ಇದನ್ನು ಪ್ರಸ್ತಾವ ಮಾಡಲಾಗಿತ್ತು ಎಂದು ಶಾಸಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next