ಕನಕಪುರ:ಕಂದಾಯಇಲಾಖೆಯಜಾಗವನ್ನು ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನದ ಹೆಸರಿನಲ್ಲಿ ಸರ್ಕಾರಕ್ಕೆ ನೀಡಿ ಅದರಿಂದ ಬಂದ ಕೋಟ್ಯಂತರ ಹಣವನ್ನು ಗಣ್ಯವ್ಯಕ್ತಿಗಳೂಂದಿಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಶಾಮೀಲಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ.
ರಸ್ತೆ ಅಗಲೀಕರಣಕ್ಕೆ ಭೂಸ್ವಾಧಿನವಾಗಿರುವ ತಾಲೂಕಿನಕಸಬಾಹೋಬಳಿಯರಾಯಸಂದ್ರ ಗ್ರಾಮದ ಕೆರೆ ಜಾಗ ಮತ್ತು ಸರ್ಕಾರಿ ಗುಂಡುತೋಪುಗಳನ್ನು ಅಕ್ರಮವಾಗಿ ಖಾತೆಮಾಡಿ, ಬಂದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ತಾಲೂಕು ಆಡಳಿತ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ದುರ್ಬಳಕೆಯಾಗಿರುವ ಹಣವನ್ನು ತಾಲೂಕು ಆಡಳಿತದ ವಶಕ್ಕೆ ಪಡೆಯಬೇಕು ಎಂದು ತಾಲೂಕು ಆಡಳಿತಕ್ಕೆ ಬಂದ 2 ಪ್ರತ್ಯೇಕ ದೂರುಗಳ ಹಿನ್ನೆಲೆಯಲ್ಲಿ ತಹಶೀಲ್ದಾರ್ ವರ್ಷಾ ಒಡೆಯರ್ ಸದರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಕ್ರಮ ಖಾತೆ: ಕಸಬಾ ಹೋಬಳಿ ತುಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಸಂದ್ರ ಗ್ರಾಮದ ಸರ್ವೆ ನಂ.45 ರಲ್ಲಿ 1 ಎಕರೆ 30 ಗುಂಟೆ. ಮತ್ತು ಸರ್ವೆ ನಂ.46 ರಲ್ಲಿ1ಎಕರೆ31 ಗುಂಟೆ ಸೇರಿ ಒಟ್ಟು 3.5 ಎಕರೆಗೂ ಹೆಚ್ಚಿನ ಸರ್ಕಾರಿ ಕೆರೆ ರಾಷ್ಟ್ರೀಯ ಹೆದ್ದಾರಿ 209ಗೆ ಹೊಂದಿಕೊಂಡಿದ್ದು, ಕೆಲವು ವ್ಯಕ್ತಿಗಳೂಂದಿಗೆ ತುಂಗಣಿ ಪಿಡಿಒ, ಗ್ರಾಮ ಲೆಕ್ಕಿಗ ಹಾಗೂ ಕಾರ್ಯನಿರ್ವಹಕ ಅಧಿಕಾರಿ ಶಾಮೀಲಾಗಿ ಸರ್ಕಾರಿ ರವಿನ್ಯೂ ಜಾಗವನ್ನು ತಾಲೂಕು ಆಡಳಿತದ ಗಮನಕ್ಕೆ ತರದೆ ನಿವೇಶನಕ್ಕೆ ಹಂಚಿಕೆ ಮಾಡುವ ನೆಪದಲ್ಲಿ ಆಕ್ರಮವಾಗಿ ಗ್ರಾಮ ಪಂಚಾಯ್ತಿಯಿಂದ ಸುಮಾರು 32 ನಿವೇಶನಗಳಾಗಿ ವಿಂಗಡಿಸಿ 9.11 ಖಾತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
2.5 ಕೋಟಿ ರೂ.ದುರ್ಬಳಕೆ: ಸದರಿ ಜಾಗ ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧಿನವಾಗಿದ್ದು, ಅದರಿಂದ ಬಂದ2.5ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಜತೆಗೆ ಪಕ್ಕದಲ್ಲಿರುವ ಸುಮಾರು 7 ಎಕರೆ ಸರ್ಕಾರಿ ಗುಂಡು ತೋಪಿನಿಂದಲೂ ರಸ್ತೆಅಗಲೀಕರಣಕ್ಕೆ ಭೂಸ್ವಾಧೀನವಾಗಿದ್ದು, ಅದರಿಂದಲೂ ಸುಮಾರು 50 ಲಕ್ಷ ರೂ. ಪಡೆದು ವಂಚಿಸಲಾಗಿದೆ ಎಂದು2ಪ್ರತ್ಯೇಕ ದೂರುಗಳು ತಾಲೂಕು ಆಡಳಿತಕ್ಕೆ ಸಲ್ಲಿಕೆಯಾಗಿವೆ.
ದೂರು ಪರಿಗಣಿಸಿರುವ ತಹಶೀಲ್ದಾರ್ ವರ್ಷಾ ಒಡೆಯರ್ ಕಂದಾಯ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಸದರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ 2 ಕೆರೆ ಮತ್ತು ಗುಂಡುತೋಪಿನ ಸರ್ವೆ ನಡೆಸಿ ಗಡಿ ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ವೇಳೆ ತಾಲೂಕು ಕಂದಾಯ ಅಧಿಕಾರಿ ಶಿವರುದ್ರಯ್ಯ, ಸರ್ವೆ ಇಲಾಖೆಯ ಪವನ್, ಚಂದ್ರೇಗೌಡ, ಸಿಬ್ಬಂದಿ ಲೋಕೇಶ್, ಗ್ರಾಮ ಸಹಾಯಕ ರಾಘವೇಂದ್ರ ಸ್ಥಳದಲ್ಲಿದ್ದರು.
ತಾಲೂಕು ಆಡಳಿತ ಕಂದಾಯ ಜಾಗವನ್ನು ಆಶ್ರಯಕ್ಕೆ ಮಂಜೂರು ಮಾಡಿಖಾತೆ ಮಾಡಿಕೊಟ್ಟಿದ್ದರೆ, ಮಾತ್ರಹೆದ್ದಾರಿ ಪ್ರಾಧಿಕಾರಹಣಬಿಡುಗಡೆಮಾಡಲು ಸಾಧ್ಯಜತೆಗೆಯಾವುದೇ ನಿವೇಶನಹಂಚಿಕೆಯಾಗಲಿ ಖಾತೆಯಾಗಲಿ ಮಾಡಿಕೊಟ್ಟಿಲ್ಲ.
–ಶಿವರಾಮು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ