ಮಣಿಪಾಲ: ಉಪಶಾ ಮಕ ಔಷಧ ಮತ್ತು ಕ್ಯಾನ್ಸರ್‌ಕೇರ್ ಕ್ಷೇತ್ರದ ಸಾಧಕ ಡಾ| ನವೀನ್ ಸಾಲಿನ್ಸ್ ಲ್ಯಾನ್ಸೆಟ್ ಆಯೋಗದ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ನವೀನ್ ಅವರು ಅತ್ಯಂತ ಕಡಿಮೆ ಸಂಪನ್ಮೂಲ ಲಭ್ಯ ಪ್ರದೇಶ ಗಳಲ್ಲಿ ಕ್ಯಾನ್ಸರ್‌ನ ಮಾನವೀಯ ಬಿಕ್ಕಟ್ಟನ್ನು ಪರಿಹರಿಸುವ ಸಮಗ್ರ ಅಧ್ಯಯನವನ್ನು ಮುನ್ನಡೆಸುವರು.
ಮುಂದಿನ 2 ವರ್ಷ ಗಳಲ್ಲಿ (2023- 2025) ಡಾ| ಸಾಲಿನ್ಸ್ ನೇತೃತ್ವದ ತಂಡವು ಕ್ಯಾನ್ಸರ್ ಆರೈಕೆಯ ವೈಜ್ಞಾನಿಕ ಮತ್ತು ಮಾನವೀಯ ಅಂಶಗಳ ನಡುವಿನ ಅಸಮಾನತೆಗೆ ಕಾರಣ ವಾದ ಅಂಶಗಳನ್ನು ವಿಶ್ಲೇಷಿಸಲಿದೆ.
ಮಣಿಪಾಲದ ಕಸ್ತೂರ್ಬಾ ವೈದ್ಯ ಕಾಲೇಜಿ ನಲ್ಲಿ ಉಪಶಾಮಕ ಔಷಧ ವಿಭಾಗದ ಮುಖ್ಯಸ್ಥರಾಗಿ, ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕರಾಗಿ ಮತ್ತು ಸಂಶೋ ಧನೆ ವಿಭಾಗದ ಸಹಾಯಕ ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ| ನವೀನ್ ಅವರ ಸಾಧನೆಯನ್ನು ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಸಹ ಕುಲಪತಿ ಡಾ| ಶರತ್ ಕುಮಾರ್ ರಾವ್, ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ ಶ್ಲಾಘಿಸಿದ್ದಾರೆ.