Advertisement

ವಿಶ್ವ ಇಲೆವೆನ್‌ ತಂಡದಲ್ಲಿ  ಸಂದೀಪ್‌ ಲಮಿಚಾನೆ

06:00 AM May 17, 2018 | Team Udayavani |

ಲಂಡನ್‌: ವೆಸ್ಟ್‌ ಇಂಡೀಸ್‌ ವಿರುದ್ಧ ಆಡಲಾಗುವ ಏಕೈಕ ಸಹಾಯಾರ್ಥ ಟಿ20 ಪಂದ್ಯದಲ್ಲಿ ನೇಪಾಲದ “ಬೌಲಿಂಗ್‌ ಹೀರೋ’ ಸಂದೀಪ್‌ ಲಮಿಚಾನೆ ಅವರನ್ನು ಐಸಿಸಿ ವಿಶ್ವ ಇಲೆವೆನ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ವೈಯಕ್ತಿಕ ಕಾರಣಗಳಿಂದ ಹೊರಗುಳಿಯಲು ನಿರ್ಧರಿಸಿದ್ದರಿಂದ ಲಮಿಚಾನೆಗೆ ಬಾಗಿಲು ತೆರೆಯಿತು. ಈ ಬದಲಾವಣೆಯನ್ನು ಐಸಿಸಿ ಅಧಿಕೃತವಾಗಿ ಪ್ರಕಟಿಸಿದೆ.

Advertisement

“ಐಸಿಸಿ ವಿಶ್ವ ಇಲೆವೆನ್‌ ತಂಡದಲ್ಲಿ ಸ್ಥಾನ ಸಂಪಾದಿಸಿದ್ದು ನನ್ನ ಪಾಲಿನ ಮಹಾನ್‌ ಗೌರವ ಎಂದು ಭಾವಿಸಿ ದ್ದೇನೆ. ವಿಶ್ವದ ಖ್ಯಾತನಾಮ ಆಟಗಾರರೊಂದಿಗೆ ಅಭ್ಯಾಸ ನಡೆಸುವುದು, ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಳ್ಳುವುದೆಲ್ಲ ನನಗೊಂದು ವಿಶೇಷ ಹಾಗೂ ಸ್ಮರಣೀಯ ಅನುಭವವಾಗಲಿದೆ. ಈ ಅವಕಾಶವನ್ನು ನಾನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲಿದ್ದೇನೆ’ ಎಂದು ಸಂದೀಪ್‌ ಲಮಿಚಾನೆ ಹೇಳಿದ್ದಾರೆ.

ಈ ಪಂದ್ಯ ಮೇ 31ರಂದು ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next