Advertisement

Legends T20 World Championship; ಕುಂಟುವ ವೀಡಿಯೋ: ಯುವಿ, ಭಜ್ಜಿ, ರೈನಾ ವಿರುದ್ಧ ದೂರು

11:01 PM Jul 16, 2024 | Team Udayavani |

ಹೊಸದಿಲ್ಲಿ: ಲೆಜೆಂಡ್ಸ್‌ ಟಿ20 ವಿಶ್ವ ಚಾಂಪಿಯನ್‌ಶಿಪ್‌ ವಿಜೇತ ಭಾರತೀಯ ಆಟಗಾರರ ವಿರುದ್ಧ ಹೊಸದಿಲ್ಲಿಯಲ್ಲಿ ದೂರು ದಾಖಲಾಗಿದೆ.

Advertisement

ಪಾಕಿಸ್ಥಾನ ವಿರುದ್ಧದ ಫೈನಲ್‌ ಪಂದ್ಯ ಮುಗಿದ ಬಳಿಕ ತಮಗಾಗಿರುವ ಸುಸ್ತನ್ನು ತೋರಿಸಲು ಹರ್ಭಜನ್‌ ಸಿಂಗ್‌, ಯುವರಾಜ್‌ ಸಿಂಗ್‌, ಸುರೇಶ್‌ ರೈನಾ ಕುಂಟಿಕೊಂಡು ಬರುತ್ತಿರುವ ರೀಲ್ಸ್‌ ಮಾಡಿ ಪೋಸ್ಟ್‌ ಮಾಡಿದ್ದರು. ಇದು ಅಂಗವಿಕಲರಿಗೆ ಮಾಡಿದ ಅವಮಾನ ಎಂದು ಪ್ಯಾರಾ ಬ್ಯಾಡ್ಮಿಂಟನ್‌ ಆಟಗಾರ್ತಿ ಮಾನ್ಸಿ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ವಿರುದ್ಧ ದೂರು ದಾಖಲಿಸಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಹರ್ಭಜನ್‌ ಸಿಂಗ್‌ ವೀಡಿಯೋವನ್ನು ಅಳಿಸಿ, ಯಾರನ್ನೂ ನೋಯಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಇದನ್ನು ಇಲ್ಲಿಗೇ ಬಿಟ್ಟುಬಿಡಿ, ಇಷ್ಟಾದ ಮೇಲೂ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದರು. ಆದರೂ ಕ್ರಿಕೆಟಿಗರ ವಿರುದ್ಧ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next