Advertisement

ಸೀತೆಯಲ್ಲಿ ರಾವಣನಾಗಿ ಅಬ್ಬರಿಸಿದ್ದ ಲಂಬೂ ನಾಗೇಶ್‌ ಇನ್ನಿಲ್ಲ 

11:31 AM Sep 02, 2017 | |

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪೋಷಕ ನಟ ಲಂಬೂ ನಾಗೇಶ್‌ ಅವರು ಶನಿವಾರ ನಗರದ ಎಂ.ಎಸ್‌.ರಾಮಯ್ಯ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು. 

Advertisement

ಹಲವು ಧಾರಾವಾಹಿಗಳಲ್ಲಿ ಖಳ ಛಾಯೆಯ ಪಾತ್ರಗಳಲ್ಲಿ ಮಿಂಚಿದ್ದ ನಾಗೇಶ್‌ ಅವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸೀತೆ ಧಾರಾವಾಹಿಯಲ್ಲಿ ರಾವಣನಾಗಿ ಕಾಣಿಸಿಕೊಂಡು ಅಪಾರ ಮೆಚ್ಚುಗೆ ಗಳಿಸಿದ್ದರು. 

ಪೊಲೀಸ್‌ ಸ್ಟೋರಿ, ನೀಲಕಂಠ, ನಾಗ ಮುಂತಾದ ಚಿತ್ರಗಳಲ್ಲಿ  ವಿಭಿನ್ನ ಪಾತ್ರಗಳಲ್ಲಿ ತಮ್ಮ ಕಂಚಿನ ಕಂಠದಿಂದ ಗಮನ ಸೆಳೆದಿದ್ದರು. 

ಶ್ರೀನಿವಾಸ ಪುರದ ಮಾರುತಿ ನಗರದಲ್ಲಿ ಅಂತಿಮ ದರ್ಶನದ ಬಳಿಕ ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ. 

ನಾಗೇಶ್‌ ನಿಧನಕ್ಕೆ ಚಿತ್ರರಂಗದ ಮತ್ತು ಕಿರತೆರೆಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next