Advertisement
ಲಂಬಾಣಿ ಸಮುದಾಯ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸದ ಜತೆಗೇ ಲಂಬಾಣಿ ಸಮುದಾಯವನ್ನು ಮೀಸಲಾತಿಯಿಂದ ಹೊರಗಿಡುವ ಪ್ರಯತ್ನಗಳೂ ನಡೆಯುತ್ತಿವೆ. ಇದನ್ನು ಎದುರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಳ್ಳಬೇಕು. ಅದರಲ್ಲೂ ಸಮುದಾಯದ ಮಹಿಳೆಯರಿಗೆ ಶಿಕ್ಷಣ ಕಡ್ಡಾಯ ಮಾಡಬೇಕು ಎಂದರು.
Related Articles
Advertisement
ಉದ್ಘಾಟನ ಸಮಾರಂಭದ ಬಳಿಕ ಲಂಬಾಣಿ ಮಹಿಳೆಯರಿಂದ ಬಂಜಾರ ನೃತ್ಯ ಹಾಗೂ ಬಂಜಾರ ಹಾಡು ಪ್ರದರ್ಶನಗೊಂಡಿತು. ಜಿಲ್ಲಾ ಮಟ್ಟದ ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕಿನ ಉನ್ನತ ಹುದ್ದೆಯಲ್ಲಿರುವ ಗದಗ, ಶಿವಮೊಗ್ಗ ಭಾಗದ ಸಮುದಾಯದ ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿದರು.
2017-18ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಅತ್ಯ ಧಿಕ ಅಂಕ ಪಡೆದ ಪೂಜಾ ಎಂ. ನಾಯ್ಕ, ಶುಭಾ ಟಿ., ಪವನ್, ಲಿಖಿತಾ ಎಸ್., ಅಶ್ವಿನಿ ಎನ್., ಗೌತಮ್, ಮಂಜು ಬಲಾಜಿ ಎಂ.ಪಿ., ಹೇಮಂತ್, ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಶ್ರೇಯಾ ಬಿ. ನಾಯ್ಕ, ಚೇತನ್, ಪೃಥ್ವಿರಾಜ್, ಶ್ರೀಕಾಂತ್ ಲಮಾಣಿ, ಪ್ರೇಮಾ ಜಾಧವ್, ಶ್ರುತಿ ಜಾಧವ್, ಲತಾ, ವಿಜಯಲಕ್ಷ್ಮೀ, ನವೀನ್, ಮದನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಜಯಪ್ಪ ಲಂಬಾಣಿ ಹಾಗೂ ಕೆಇಎಸ್ ಉತ್ತೀರ್ಣರಾದ ಸಂತೋಷ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.
ಲಂಬಾಣಿ ಸಮುದಾಯದ ಜಾಗದೇಶದ ಪಾರ್ಲಿಮೆಂಟ್ ಕಟ್ಟಲು ನೀಡಿರುವ ಜಾಗ ಲಂಬಾಣಿ ಸಮುದಾಯದ ಕೊಡುಗೆ. ಮೂಲತಃ ವ್ಯಾಪಾರಿಗಳಾದ್ದ ಲಂಬಾಣಿ ಜನಾಂಗದವರು ಲಮಾಣಿ ಮಾರ್ಗಗಳನ್ನು ಬಳಸಿಕೊಂಡು ರೈಲ್ವೇ ಹಳಿಗಳನ್ನು ಕಟ್ಟುತ್ತಿದ್ದರು. 1923ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು ಲಂಬಾಣಿ ಸಮುದಾಯವನ್ನು ಶೋಷಿತ ಜನಾಂಗದ ಪಟ್ಟಿಗೆ ಸೇರಿಸಿದ್ದರು.
– ಅನಂತ ನಾಯ್ಕ,
ಹೈಕೋರ್ಟ್ ವಕೀಲ