Advertisement

ಲಾಲು ಜೈಲು ಶಿಕ್ಷೆಯಿಂದ ಆಘಾತ: ಮರುದಿನವೇ ಸಹೋದರಿ ಸಾವು

11:56 AM Jan 08, 2018 | udayavani editorial |

ಪಟ್ನಾ : ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ಗೆ ಕಳೆದ ಶನಿವಾರ ಬಹುಕೋಟಿ ಮೇವು ಹಗರಣದಲ್ಲಿ ಮೂರೂವರೆ ವರ್ಷಗಳ ಜೈಲು ಶಿಕ್ಷೆಯಾದುದನ್ನು ಕೇಳಿ ತೀವ್ರ ಆಘಾತಗೊಂಡ ಅವರ ಹಿರಿಯ ಸಹೋದರಿ ಗಂಗೋತ್ರಿ ದೇವಿ ಅವರು ಮರುದಿನವೇ (ಭಾನುವಾರ) ನಿಧನ ಹೊಂದಿದ ದುರದೃಷ್ಟಕಾರಿ ಘಟನೆ ವರದಿಯಾಗಿದೆ.

Advertisement

ಲಾಲು ಅವರ ಪತ್ನಿ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರು “ಗಂಗೋತ್ರಿ ದೇವಿ ಅವರು ಕಳೆದ ಶನಿವಾರ ಲಾಲುಗೆ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸುವಂದು ಇಡಿಯ ದಿನ ಲಾಲುಗೆ ಬಿಡುಗಡೆಯಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಆದರೆ ಲಾಲುಗೆ ದೀರ್ಘಾವಧಿಯ ಜೈಲು ಶಿಕ್ಷೆ ಆದುದನ್ನು ಕೇಳಿ ತೀವ್ರ ದುಃಖೀತಳಾದ ಆಕೆ ಮರುದಿನವೇ ನಿಧನ ಹೊಂದಿದರು’ ಎಂದು ಹೇಳಿದರು.

ಗಂಗೋತ್ರಿ ದೇವಿ ಅವರು ಲಾಲು ಅವರಿಗೆ ನಾಲ್ಕು ವರ್ಷ ದೊಡ್ಡವರು ಮತ್ತು ಕಳೆದ ಕೆಲ ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು. 

ಗಂಗೋತ್ರಿ ದೇವಿಯ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸುವುದಕ್ಕಾಗಿ ಲಾಲುಗೆ ಪೆರೋಲ್‌ ದೊರಕಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ; ಆದರೆ ನ್ಯಾಯಾಂಗದ ಪ್ರಕ್ರಿಯೆಗಳಿಗೆ ಸಮಯ ತಗಲುವುದರಿಂದ ಪೆರೋಲ್‌ ಸಿಗುವುದು ಸಂದೇಹ ಎಂದು ಲಾಲು ಪುತ್ರಿ ತೇಜಸ್ವಿ ಯಾದವ್‌ ಹೇಳಿದರು.

ಹಾಗಿದ್ದರೂ ನಾವು ಗಂಗೋತ್ರಿ ದೇವಿ ನಿಧನ ಹೊಂದಿದ ಸುದ್ದಿಯನ್ನು ರಾಂಚಿಯಲ್ಲಿನ ಜೈಲು ಅಧಿಕಾರಿಗಳ ಮೂಲಕ ಲಾಲುಗೆ ತಿಳಿಸಲು ಯತ್ನಿಸಿದ್ದೇವೆ ಎಂದು ತೇಜಸ್ವಿ ಹೇಳಿದರು.

Advertisement

ಈ ನಡುವೆ ಗಂಗೋತ್ರಿ ದೇವಿ ಅವರ ಪಾರ್ಥಿವ ಶರೀರವನ್ನು ಆಕೆಯ ಹುಟ್ಟೂರಿಗೆ ಅಂತ್ಯಕ್ರಿಯೆಗಾಗಿ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ತೇಜಸ್ವಿ ಹೇಳಿದರು. 

ದೇವಗಢ ಸರಕಾರಿ ಖಜಾನೆಯಿಂದ 21 ವರ್ಷಗಳ ಹಿಂದೆ 89.27 ಲಕ್ಷ ರೂ.ಗಳನ್ನು ಅಕ್ರಮವಾಗಿ ಪಡೆದುಕೊಂಡ ಲಾಲು ಪ್ರಸಾದ್‌ ಯಾದವ್‌ಗೆ ಕಳೆದ ಶನಿವಾರ ವಿಶೇಷ ಸಿಬಿಐ ನ್ಯಾಯಾಲಯ ಮೂರೂವರೆ ವರ್ಷಗಳ ಜೈಲು ಮತ್ತು 10 ಲಕ್ಷ ರೂ. ದಂಡ ವಿಧಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next