Advertisement

ಲಲಿತ ಕಲಾ ಅಕಾಡೆಮಿ: ಜಿಲ್ಲಾ ಪ್ರತಿನಿಧಿಯಿಲ್ಲ; ಕಲೆಗೆ ಬೇಕಿದೆ ಪ್ರೋತ್ಸಾಹದ ಬೆಲೆ

08:59 PM Oct 05, 2021 | Team Udayavani |

ಉಡುಪಿ: ಕಲಾ ಚಟುವಟಿಕೆಯಲ್ಲಿ ಶ್ರೀಮಂತಿಕೆ ಮೆರೆದಿರುವ ಉಡುಪಿ ಜಿಲ್ಲೆ ಲಲಿತ ಕಲಾ ಅಕಾಡೆಮಿಯಿಂದ ನಿರ್ಲಕ್ಷ್ಯಕ್ಕೊಳಗಾಗಿದೆ. ಕಳೆದ 6 ವರ್ಷಗಳಿಂದ ಲಲಿತ ಕಲಾ ಅಕಾಡೆಮಿಗೆ ಜಿಲ್ಲೆಯಿಂದ ಪ್ರತಿನಿಧಿಗಳ ನೇಮಕವೇ ನಡೆದಿಲ್ಲ.

Advertisement

ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರತಿನಿಧಿಗಳ ನೇಮಕ ಕಷ್ಟವಾದರೂ ಲಲಿತಕಲೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಉಡುಪಿ ಜಿಲ್ಲೆಯನ್ನು 6 ವರ್ಷಗಳಿಂದಲೂ ಅವಗಣಿಸುತ್ತಿರುವುದು ಯಾಕೆಂಬುದು ಪ್ರಶ್ನಾರ್ಥಕವಾಗಿ ಉಳಿದಿದೆ.

ಹಲವು ವರ್ಷದ ಹಿಂದೆ ಬ್ರಹ್ಮಾವರದ ಪೀಟರ್‌ ಲೂವಿಸ್‌ ಅವರು ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದರು.ಜಿಲ್ಲೆಯ ಹಲವಾರು ಮಂದಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿ ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದರು. ಕಲಾವಿದರಾದ ಭಾಸ್ಕರ ರಾವ್‌, ಚಂದ್ರನಾಥ ಆಚಾರ್ಯ, ಪೀಟರ್‌ ಲೂವಿಸ್‌, ಜಿ.ಎಸ್‌.ಶೆಣೈಯಂತಹ ಕಲಾವಿದರು ವೆಂಕಟಪ್ಪ ಪ್ರಶಸ್ತಿಗೂ ಭಾಜನರಾಗಿದ್ದರು.

ದಿನಾಚರಣೆಗೂ ಪ್ರೋತ್ಸಾಹವಿಲ್ಲ
ಪ್ರತೀ ವರ್ಷ ಎ.15ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಆದರೆ ಉಡುಪಿ ಜಿಲ್ಲೆಯಲ್ಲಿ ತಮ್ಮ ಸ್ವ ಆಸಕ್ತಿಯಿಂದ ಈ ದಿನವ ನ್ನು ಆಚರಿಸುವವರಿಗೂ ಅಕಾಡೆಮಿ ಯಾವ ಪ್ರೋತ್ಸಾಹವನ್ನೂ ನೀಡುತ್ತಿಲ್ಲ.

ಪ್ರೋತ್ಸಾಹ ಅಗತ್ಯಲಲಿತ ಕಲೆಗಳು ಮುಖ್ಯವಾಗಿ ಬಣ್ಣಗಳು ಮತ್ತು ಚಿತ್ರಗಳಿಂದ ನಮ್ಮ ಕಲ್ಪನೆಗೆ ಹತ್ತಿರವಾಗಿರುತ್ತದೆ. ಸ್ವತ್ಛ ನಗರಗಳ ಅಂದ ಹೆಚ್ಚಿಸಲು ಅಭಿವೃದ್ಧಿ ಚಟುವಟಿಕೆ ಜತೆಗೆ ಕಲಾನೈಪುಣ್ಯದ ಮೂಲಕ ಮತ್ತಷ್ಟು ಶ್ರೀಮಂತಗೊಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಅಕಾಡೆಮಿಗಳು ಕಲಾವಿದರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡ ಬೇಕು ಎನ್ನುತ್ತಾರೆ ಜಿಲ್ಲೆಯ ಹಿರಿಯ ಚಿತ್ರಕಲಾವಿದರು. ರಾಜ್ಯದಲ್ಲಿ ಉಡುಪಿಯ ಆರ್ಟಿಸ್ಟ್‌ ಫಾರಂ ಹಾಗೂ ಧಾರವಾಡದ ಕಲಾಸಂಗಮ ಕೇಂದ್ರವನ್ನು ಕೇಂದ್ರ ಲಲಿತ ಕಲಾ ಅಕಾಡೆಮಿ ಗುರುತಿಸಿದ್ದರೂ ಜಿಲ್ಲೆಯ ಪ್ರತಿನಿಧಿ ನೇಮಕದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂಜಿಲ್ಲೆಯವರೇ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನಿಲ್‌ ಕುಮಾರ್‌ ಅವರು ಗಮನಹರಿಸುವ ಅಗತ್ಯ ಇದೆ.

Advertisement

ಇದನ್ನೂ ಓದಿ:ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ, ಪ್ರತಿಭಟನಾ ಸಭೆ

ಕಲೆ, ಕಲಾಭಿಮಾನ ಉಳಿಯಲಿ
ಪ್ರತೀ ಶಾಲೆಗಳಲ್ಲಿ ಚಿತ್ರಕಲೆಯನ್ನು ಕಡ್ಡಾಯ ಮಾಡಬೇಕು. ಈಗಾಗಲೇ ಹಲವೆಡೆ ಚಿತ್ರಕಲೆಗೆ ಸಂಬಂಧಿಸಿದಂತೆ ಪದವಿ ತರಗತಿಗಳಿದ್ದು, ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವ ಕೆಲಸವೂ ಆಗಬೇಕಿದೆ. ಇಂತಹ ಪ್ರೋತ್ಸಾಹ ಅಕಾಡೆಮಿಯಿಂದ ಲಭಿಸಿದರಷ್ಟೇ ಕಲಾ ಚಟುವಟಿಕೆ ಉಳಿದು ಮತ್ತಷ್ಟು ಬೆಳೆಯಲು ಸಾಧ್ಯವಿದೆ.

ಜಿಲ್ಲೆಯವರಿಗೆ ಅವಕಾಶ ನೀಡಲಿ
ಜಿಲ್ಲೆಯಲ್ಲಿ ಆರ್ಟಿಸ್ಟ್‌ ಫಾರಂ ಮೂಲಕ ಹಲವಾರು ಕಲಾಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದಕ್ಕೆ ಪೂರಕವಾಗಿ ಅಕಾಡೆಮಿ ಜಿಲ್ಲೆಯ ಚಿತ್ರಕಲಾವಿದರನ್ನು ಅಕಾಡೆಮಿ ಸದಸ್ಯರನ್ನಾಗಿಸಿದರೆ ಮತ್ತಷ್ಟು ಕಲಾ ಚಟುವಟಿಕೆ ನಡೆಸಲು ಪೂರಕವಾಗಲಿದೆ.
-ಯು.ರಮೇಶ್‌ ರಾವ್‌,
ಅಧ್ಯಕ್ಷರು, ಆರ್ಟಿಸ್ಟ್‌ ಫಾರಂ ಉಡುಪಿ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next