Advertisement

ಗಣೇಶೋತ್ಸವ ಆರಂಭದ ಪಾದಪೂಜೆ

01:22 PM Aug 11, 2021 | Team Udayavani |

ಮುಂಬಯಿ: ಪ್ರತಿಷ್ಠಿತ ಲಾಲ್‌ಬಾಗ್‌ ಚ ರಾಜಾ ಗಣೇಶೋತ್ಸವ ಮಂಡಳಿಯು ಮಂಗಳವಾರ ಬೆಳಗ್ಗೆ ಗಣೇಶೋತ್ಸವದ ಆರಂಭದಲ್ಲಿ ಪಾದ ಪೂಜಾ ಸಮಾರಂಭವನ್ನು ನೆರವೇರಿಸಿತು. ಲಾಲ್‌ಬಾಗ್‌ ಚ ರಾಜ ಗಣೇಶೋತ್ಸವ ಮಂಡಲದ 88ನೇ ವರ್ಷದ ಗಣೇಶೋತ್ಸವ ಇದಾಗಿದೆ.

Advertisement

ಮಂಡಳಿಯ ಪ್ರಕಾರ ಲಾಲ್‌ಬಾಗ್‌ ಚ ರಾಜಾನ ಗಣೇಶ ಮುಹೂರ್ತ ಪೂಜೆಯನ್ನು ಪಾದಪೂಜೆಯೊಂದಿಗೆ ಆಯೋಜಿಸಲಾಗಿತ್ತು. ವಿಗ್ರಹದ ಎತ್ತರವನ್ನು ನಾಲ್ಕು ಅಡಿಗಳಿಗೆ ನಿರ್ಬಂಧಿಸಲಾಗಿದೆ. ಈ ವರ್ಷ ಲಾಲ್‌ಬಾಗ್‌ ಗಣೇಶೋತ್ಸವವನ್ನು ಮಂಡಳಿಯು ಸೆ. 10ರಿಂದ 19ರ ವರೆಗೆ ಆಯೋಜಿಸಲಿದೆ. ಕೋವಿಡ್‌ ಸಾಂಕ್ರಾಮಿಕದ ಮಧ್ಯೆ ಗಣೇಶೋತ್ಸವ ಮಂಡಳವು ಸಾಂಪ್ರದಾಯಿಕ
ರೀತಿಯಲ್ಲಿ ಗಣೇಶ ಉತ್ಸವವನ್ನು ಆಚರಿಸಲಿದೆ.

ಕಳೆದ ವರ್ಷ ಲಾಲ್‌ ಬಾಗ್‌ ಚ ರಾಜ ಗಣೇಶೋತ್ಸವ ಮಂಡಳಿಯು ಇತಿಹಾಸದಲ್ಲಿ ಮೊದಲ ಬಾರಿಗೆ ಉತ್ಸವ ನಡೆಸುವುದನ್ನು ನಿಲ್ಲಿಸಿತು. ಬದಲಾಗಿ ರಕ್ತ ಮತ್ತು ಪ್ಲಾಸ್ಮಾ ದಾನ ಶಿಬಿರವನ್ನು ಆಯೋಜಿಸಿತ್ತು. ಮಹಾರಾಷ್ಟ್ರ ಸರಕಾರ ಈ ಹಿಂದೆ ಗಣೇಶ ಮೂರ್ತಿಗಳ ಎತ್ತರವನ್ನು ನಾಲ್ಕು ಅಡಿಗಳವರೆಗೆ ನಿರ್ಬಂಧಿಸಲು ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಸಾರ್ವಜನಿಕ ಆಚರಣೆಗಳಲ್ಲಿ ಮೂರ್ತಿಗಳ ಎತ್ತರವನ್ನು ನಾಲ್ಕು ಅಡಿಗಳಿಗೆ ನಿರ್ಬಂಧಿಸಲಾಗಿದೆ. ಸಾಂಕ್ರಾಮಿಕ ಪರಿಸ್ಥಿತಿಯನ್ನು
ಗಮನದಲ್ಲಿಟ್ಟುಕೊಂಡು ಜನರು ಕೋವಿಡ್‌ ನಿಯಮಗಳನ್ನು ಅನುಸರಿಸಿ ಮತ್ತು ಜನಸಂದಣಿ ತಪ್ಪಿಸುವ ಮೂಲಕ ಹಬ್ಬಗಳನ್ನು ನಡೆಸುವಂತೆ ಸರಕಾರ ಜನರನ್ನು ಒತ್ತಾಯಿಸಿದೆ.

ಗಣೇಶೋತ್ಸವ ಮಂಡಳಕ್ಕೆ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಲು ಸರಕಾರ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next