Advertisement

ಲಾಲ್‌ಬಾಗ್‌ ಚಾ ರಾಜಾನಿಗೆ ಕಾಣಿಕೆಗಳ ಮಹಾಪೂರ

12:26 PM Sep 08, 2017 | Team Udayavani |

ಮುಂಬಯಿ: ಮಳೆ ಹಾಗೂ ನೆರೆಯಿಂದ ಉತ್ಸವದ ಆಚರಣೆಗೆ ಕೊಂಚ ಅಡ್ಡಿಯಾದರೂ ಲಾಲ್‌ಬಾಗ್‌ ಚಾ ರಾಜಾ ಗಣೇಶೋತ್ಸವ ಮಂಡಲಕ್ಕೆ ಭಕ್ತರಿಂದ ಕಾಣಿಕೆಗಳ ಮಹಾಪೂರವೇ ಹರಿದು ಬಂದಿದೆ.

Advertisement

ಮೊದಲ ಆರು ದಿನ ಪೆಂಡಾಲ್‌ಗೆ ಬರಲಾರದ ಭಕ್ತರು ವಾರಾಂತ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿ, ಗಣೇಶನಿಗೆ ತಮ್ಮ ಸೇವೆ, ಕಾಣಿಕೆಗಳನ್ನು ಸಮರ್ಪಿಸಿದರು. ಜನರ ಪ್ರೀತಿ ಹಾಗೂ ಭಕ್ತಿಗೆ ಪಾರವೇ ಇರಲಿಲ್ಲ. 

ಗಣಪತಿಗೆ ಅವರು ಒಂದು ಕೆಜಿ ಚಿನ್ನ ಹಾಗೂ 5 ಕೋಟಿ ರೂ. ಕಾಣಿಕೆ ಸಮರ್ಪಿಸಿದ್ದಾರೆ. ಅಲ್ಲದೆ, ಲಕ್ಷ್ಮೀ ಹಾಗೂ ಗಣಪತಿಯ  ಚಿನ್ನದ ಜೋಡಿ ವಿಗ್ರಹ ಅರ್ಪಿಸಿದ್ದು, ಅದರ ಭಾರವೂ ಒಂದು ಕೆಜಿ ಇದೆ. 250 ಗ್ರಾಂ ತೂಕದ ಚಿನ್ನದ ಮೋದಕವನ್ನೂ ಭಕ್ತರು ಸಲ್ಲಿಸಿದ್ದಾರೆ. ಚಿನ್ನ-ಬೆಳ್ಳಿಯ ಇತರ ವಸ್ತುಗಳೂ ಭಾರಿ ಪ್ರಮಾಣದಲ್ಲಿವೆ ಎಂದು ಮಂಡಲದ ನಿಕಟಪೂರ್ವ ಅಧ್ಯಕ್ಷ ಅಶೋಕ್‌ ಪವಾರ್‌ ಹೇಳಿದರು.

ಕಳೆದ ವರ್ಷದ ಸಂಗ್ರಹ ಸುಮಾರು 9 ಕೋಟಿ ರೂ. ಆಗಿತ್ತು. ಇದರಲ್ಲಿ 6.6 ಕೋಟಿ ನಗದು ಹಾಗೂ ಗಣಪತಿಗೆ ಅರ್ಪಿಸಿದ ವಸ್ತುಗಳ ಹರಾಜಿನಿಂದ 2.2 ಕೋಟಿ ರೂ. ಬಂದಿತ್ತು. ಈ ವರ್ಷದ ಹರಾಜು ಪ್ರಕ್ರಿಯೆ ಶನಿವಾರ ನಡೆಯಲಿದೆ. ಅನಂತ ಚತುರ್ದಶಿ ಬಳಿಕ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ “ರಾಜಾ’ನ ಮೂರ್ತಿ ವಿಸರ್ಜನೆ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next