Advertisement
1. ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಲಾಲ್ ಬಹಾದೂರ್ ಶಾಸ್ತ್ರಿಯವರ ಮೂಲ ಹೆಸರು ಲಾಲ್ ಬಹಾದೂರ್ ವರ್ಮಾ.2. ಅವರು ವಾರಣಾಸಿಯ ಕಾಶಿ ವಿದ್ಯಾಪೀಠದಿಂದ ಪದವೀಧರರಾದ ಸಂದರ್ಭದಲ್ಲಿ “ಶಾಸ್ತ್ರಿ’ ಎಂಬ ಬಿರುದನ್ನು ನೀಡಲಾಯಿತು.
3. ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯನ್ನು ಹಮ್ಮಿಕೊಂಡಾಗ ಅದರಲ್ಲಿ ಪಾಲ್ಗೊಂಡು ಜೈಲಿಗೆ ಹೋಗಿಬಂದಿದ್ದರು. ಆಗ ಅವರ ವಯಸ್ಸು 17.
4. ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು 2 ವರ್ಷ ಜೈಲು ಶಿಕ್ಷೆಯನ್ನೂ ಶಾಸ್ತ್ರಿಯವರು ಅನುಭವಿಸಿದರು.
5. ಭಾರತದಲ್ಲಿ ಆಹಾರ ಉತ್ಪಾನೆಗೆ ಕಾರಣವಾದ “ಹಸಿರು ಕ್ರಾಂತಿ’ಗೆ ಪ್ರೋತ್ಸಾಹ ನೀಡಿದವರು ಅವರೇ.
6. ಅವರದೂ ಗಾಂಧೀಜಿಯವರ ಜನ್ಮದಿನವೂ ಒಂದೇ ದಿನ ಬರುತ್ತದೆ. ಅಕ್ಟೋಬರ್ 2.
7. ಅವರು ಆಗಿನ ಕಾಲದಲ್ಲೇ ವರದಕ್ಷಿಣೆ ಪದ್ಧತಿಯ ವಿರುದ್ಧ ದನಿ ಎತ್ತಿದ್ದರು.
8. ಶಾಸ್ತ್ರಿಯವರು ತಮಗೆ ಬರುತ್ತಿದ್ದ ಪೆನ್ಷನ್ ಹಣವನ್ನು ಮನವಿ ಸಲ್ಲಿಸಿ ಇಳಿಸಿಕೊಂಡಿದ್ದರು
9. ಲಾಲ್ ಬಹಾದೂರ್ ಶಾಸ್ತ್ರಿಯವರು 1951ರಲ್ಲಿ ಭಾರತದ ಮೊದಲನೇ ರೈಲ್ವೇ ಸಚಿವರಾಗಿಯೂ. 1964ರಲ್ಲಿ ಎರಡನೇ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದರು.
10. 1965ರಲ್ಲಿ ಇಂಡೋ ಪಾಕ್ ಯುದ್ಧದ ಸಂದರ್ಭದಲ್ಲಿ ಅವರ ಘೋಷ ವಾಕ್ಯ “ಜೈ ಜವಾನ್ ಜೈ ಕಿಸಾನ್’ ದೇಶದೆಲ್ಲೆಡೆ ಮೊಳಗಿತು.