Advertisement
ಸ್ಥಾಪನೆಯ ಉದ್ದೇಶವೇನಿತ್ತು?1926ರಲ್ಲಿ ತಮಿಳುನಾಡಿನ ಕರೂರಿನ 7 ಉದ್ಯಮಿಗಳು ಲಕ್ಷ್ಮೀ ವಿಲಾಸ್ ವಿತ್ತ ಸಂಸ್ಥೆಯನ್ನು ಸ್ಥಾಪಿಸಿದರು. ಕರೂರ್ ಸುತ್ತಮುತ್ತಲಿನ ರೈತರು, ಚಿಕ್ಕಪುಟ್ಟ ವ್ಯಾಪಾರಿಗಳ ಅಗತ್ಯಗಳನ್ನು ಈಡೇರಿಸುವುದೇ ಮೂಲ ಉದ್ದೇಶವಾಗಿತ್ತು. 1958ರಲ್ಲಿ ಈ ಸಂಸ್ಥೆಗೆ ಬ್ಯಾಂಕಿಂಗ್ ಲೈಸೆನ್ಸ್ ದೊರೆಯಿತು. 2019ರ ವೇಳೆಗೆ ಲಕ್ಷ್ಮೀ ವಿಲಾಸ್ ಬ್ಯಾಂಕ್ 19 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 566 ಶಾಖೆಗಳು ಮತ್ತು 918 ಎಟಿಎಂಗಳನ್ನು ಹೊಂದಿತ್ತು.
ಲಕ್ಷ್ಮೀ ವಿಲಾಸ್‌ಬ್ಯಾಂಕ್ ಪಿಸಿಎ ಚೌಕಟ್ಟಿನಡಿ ಬಂದ ಒಂದು ತಿಂಗಳ ನಂತರ, ಬುಲ್ಸ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ಲೀನವಾಗುವುದಕ್ಕೆ ಅನುಮತಿ ಕೋರಿತಾದರೂ ಆರ್‌ಬಿಐ ಅನುಮತಿ ನೀಡಲಿಲ್ಲ. ಮುಂದೆ ತಾನು ಕ್ಲಿಕ್ಸ್ ಕ್ಯಾಪಿಟಲ್‌ನೊಂದಿಗೆ ವಿಲೀನದ ಮಾತುಕತೆ ನಡೆಸುತ್ತಿರುವುದಾಗಿ ಘೋಷಿಸಿತು. ಆದರೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಎಷ್ಟೊಂದು ಜಟಿಲತೆಯಲ್ಲಿ ಸಿಲುಕಿದೆ ಎನ್ನುವುದು ಅರಿವಾದದ್ದೇ ಹಿಂದೆ ಸರಿಯಿತು ಕ್ಲಿಕ್ಸ್ ಕ್ಯಾಪಿಟಲ್. ಮೊರಟೋರಿಯಂ ಹಾಗೂ ವಿಲೀನ
ಇದೇ ನವೆಂಬರ್ 17ರಂದು ಕೇಂದ್ರ ಸರಕಾರ ಆರ್‌ಬಿಐ ಶಿಫಾರಸಿನ ಮೇರೆಗೆ ಲಕ್ಷಿ$¾à ವಿಲಾಸ್‌ಬ್ಯಾಂಕ್ ಲಿಮಿಟೆಡ್ ಅನ್ನು ಮೊರಟೋರಿಯಂಗೆ ಒಳಪಡಿದೆ. ಇದರನ್ವಯ ಈ ಬ್ಯಾಂಕಿನ ಗ್ರಾಹಕರು ಡಿಸೆಂಬರ್ 16ರವರೆಗೆ ಕೇವಲ 25 ಸಾವಿರ ರೂಪಾಯಿ ವಿತ್‌ಡ್ರಾ ಮಾಡಿಕೊಳ್ಳಲು ಅವಕಾಶವಿದೆ. ಹೆಚ್ಚಿನ ಹಣದ ಅಗತ್ಯವಿದ್ದವರು, ಆರ್‌ಬಿಐಗೆ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಹಕರ ಠೇವಣಿ ಮೊತ್ತ ಸುರಕ್ಷಿತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿತ್ತು. ಈಗ ಕೇಂದ್ರ ಸಚಿವ ಸಂಪುಟವು ಲಕ್ಷ್ಮೀ ವಿಲಾಸ್ ಬ್ಯಾಂಕ್ ಅನ್ನು ಡಿಬಿಎಸ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಅನುಮೋದನೆ ನೀಡಿದ್ದು, ಕೇಂದ್ರದ ಈ ನಿರ್ಧಾರದಿಂದ 20 ಲಕ್ಷ ಠೇವಣಿದಾರರು ಮತ್ತು ನಾಲ್ಕು ಸಾವಿರ ಉದ್ಯೋಗಿಗಳಿಗೆ ಭದ್ರತೆ ಸಿಗಲಿದೆ ಎನ್ನಲಾಗಿದೆ.
Related Articles
ಚಿಕ್ಕ ಉದ್ದಿಮೆಗಳ ಆರ್ಥಿಕ ಅಗತ್ಯಗಳನ್ನು ಪೂರೈಸುತ್ತಾ ಸುಸ್ಥಿತಿಯಲ್ಲೇ ಸಾಗಿದ್ದ ಬ್ಯಾಂಕ್ ತನ್ನ ಗಮನವನ್ನು ಬೃಹತ್ ಉದ್ದಿಮೆಗಳತ್ತ ಹರಿಸಲು ನಿರ್ಧರಿಸಿದಾಗಲೇ ಸಮಸ್ಯೆ ಆರಂಭವಾಯಿತು. 2016-2017 ರಲ್ಲಿ ಲಕ್ಷ್ಮೀ ವಿಲಾಸ್‌ಬ್ಯಾಂಕ್ ರ್ಯಾನ್ ಬ್ಯಾಕ್ಸಿ ಮತ್ತು ಫೋರ್ಟಿಸ್ ಹೆಲ್ತ್‌ಕೇರ್‌ನ ಅಂದಿನ ಪ್ರಮೋಟರ್‌ಗಳಾದ ಮಲ್ವಿಂದರ್ ಸಿಂಗ್ ಮತ್ತು ಶಿವಿಂದರ್ ಸಿಂಗ್‌ಗೆ 794 ಕೋಟಿ ರೂಪಾಯಿಗಳ ಸಾಲ ನೀಡಿತು. ಆದರೆ, ಆ ಸಾಲ ಅದಕ್ಕೆ ಹಿಂದಿರುಗಲೇ ಇಲ್ಲ. ಪರಿಣಾಮವಾಗಿ ಅದು ಕೆಟ್ಟ ಸಾಲವಾಗಿ ಬದಲಾಯಿತು. ಇದನ್ನು ಸರಿದೂಗಿಸುವ ಭರದಲ್ಲಿ ಬ್ಯಾಂಕ್ ತನ್ನ ಖಜಾನೆಯಲ್ಲಿದ್ದ ರೆಲಿಗೇರ್ ಫಿನ್ವೆಸ್ಟ್ ಸಂಸ್ಥೆಯ ಸ್ಥಿರ ಠೇವಣಿಯ ಹಣವನ್ನೇ ಒತ್ತೆ ಹಾಕಿಕೊಂಡಿತ್ತು. ಇದರ ಅರಿವಾಗಿ ರೆಲಿಗೇರ್ ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿರುದ್ಧ ಪ್ರಕರಣ ದಾಖಸಿಲಿತು. ಪ್ರಕರಣ ದಾಖಲಾಗುತ್ತಿದ್ದಂತೆಯೇ, ಆರ್‌ಬಿಐ ಮಧ್ಯಪ್ರವೇಶಿಸಿತು. 2019ರಲ್ಲಿ ಆರ್‌ಬಿಐ “”ಹೊಸ ಸಾಲಗಳನ್ನು ನೀಡಬಾರದು ಮತ್ತು ಎಲ್ಲಿಯೂ ಶಾಖೆಗಳನ್ನು ತೆರೆಯಬಾರದೆಂದು” ಆದೇಶಿಸಿ ಪ್ರಾಂಪ್ಟ್ ಕರೆಕ್ಟಿವ್ ಆ್ಯಕ್ಷನ್
(ಪಿಸಿಎ) ಜಾರಿಮಾಡಿತು.
Advertisement