Advertisement

ನಟನೆಯಿಂದ ಮೇಕಪ್ ನತ್ತ ಬಂದ ಲಕ್ಷ್ಮೀ ಶೆಟ್ಟಿ

06:01 PM Dec 12, 2022 | Team Udayavani |

ಚಿತ್ರರಂಗದ ಒಂದು ವಿಭಾಗದಲ್ಲಿ ಬಿಝಿಯಾಗಿರುವವರಿಗೆ ಮತ್ತೂಂದು ವಿಭಾಗದಲ್ಲೂ ಅವಕಾಶ ಸಿಗುತ್ತದೆ. ನಿರ್ದೇಶಕನಾಗಲು ಬಂದವರು, ನಾಯಕರಾಗಿದ್ದಾರೆ. ನಾಯಕನಾಗಲು ಬಂದವರು ನಿರ್ಮಾಪಕರಾಗಿದ್ದಾರೆ. ಈ ತರಹದ ಸಾಕಷ್ಟು ಉದಾಹರಣೆ ಇದೆ. ಈಗ ನವನಟಿಯೊಬ್ಬರು ನಟನೆ ಜೊತೆಗೆ ಮೇಕಪ್‌ ಕಲಾವಿದೆಯಾಗಿಯೂ ಬಿಝಿಯಾಗುತ್ತಿದ್ದಾರೆ. ಆಕೆ ಲಕ್ಷ್ಮೀ ಶೆಟ್ಟಿ.

Advertisement

ಈಗಾಗಲೇ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡಿರುವ ನಟಿ ಲಕ್ಷ್ಮೀ ಶೆಟ್ಟಿ ಅವರಿಗೆ ಸಿನಿಮಾ, ಧಾರಾವಾಹಿಗಳಿಂದ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ಆದರೆ, ಲಕ್ಷ್ಮೀ ಮೇಕಪ್‌ ಕಲಾವಿದೆಯಾಗಿಯೂ ಬಿಝಿಯಾಗಿದ್ದಾರೆ.

ಈಕೆ ಮೊದಲ ಬಾರಿಗೆ ಕಲಾವಿದೆಯಾಗಿ ಬಣ್ಣಹಚ್ಚಿದ್ದು ಪುನರ್‌ವಿವಾಹದಲ್ಲಿ. ಆನಂತರ ಕಾರಂಜಿ, ಲವಲವಿಕೆ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಲಕ್ಷ್ಮೀ ಶೂಟಿಂಗ್‌ ಸೆಟ್‌ನಲ್ಲಿ ಮೇಕಪ್‌ ಕಲಾವಿದರನ್ನು ಗಮನಿಸುತ್ತಾ ಆ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಂಡ ಪರಿಣಾಮ ಈಗ ಅಲ್ಲೂ ಬಿಝಿಯಾಗಿದ್ದಾರೆ.

ಮೇಕಪ್‌ ವಿಭಾಗದಲ್ಲಿ ಡಿಪ್ಲೊಮಾ ಇನ್‌ ಮೇಕಪ್‌ ಆರ್ಟ್‌ ಎಂಬ ಕೋರ್ಸ್‌ ಮಾಡಿಕೊಂಡು ನಂತರ ಚೆನ್ನೈ, ದೆಹಲಿಯಲ್ಲಿ ಪೂರ್ಣಪ್ರಮಾಣದ ತರಬೇತಿ ಪಡೆದುಕೊಂಡಿದ್ದಾರೆ ಕೂಡಾ. ತಾನು ಈಗಾಗಲೇ ಶಾನ್ವಿ ಶ್ರೀವಾತ್ಸವ್‌, ಅನುಪಮಾ ಗೌಡ, ಆಶಿಕಾ ರಂಗನಾಥ್‌, ರಚಿತಾರಾಮ್, ಕಾರುಣ್ಯ ರಾಮ್, ಮಾನ್ವಿತಾ ಹರೀಶ್‌ ಸೇರಿದಂತೆ ಸಾಕಷ್ಟು ನಟಿಯರನ್ನು ಮೇಕಪ್‌ ಮಾಡಿದ್ದೇನೆ ಎನ್ನುತ್ತಾರೆ ಲಕ್ಷ್ಮೀ.

Advertisement

Udayavani is now on Telegram. Click here to join our channel and stay updated with the latest news.

Next