ಹೊಸದಿಲ್ಲಿ: ಕೆನಡಾದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಮಲೇಶ್ಯದ ಐದಿಲ್ ಶೊಲೇಹ್ ಸಾದಿಕಿನ್ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಲಕ್ಷ್ಯ ಸೇನ್ 21-8, 21-18 ಗೇಮ್‌ಗಳಿಂದ ಐದಿಲ್ ಅವರನ್ನು ಸೋಲಿಸಿದರು. ಮೊದಲ ಗೇಮ್ ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡ ಸೇನ್ ಪ್ರತಿಸ್ಪರ್ಧಿಗೆ ಹೆಚ್ಚಿನ ಅವಕಾಶ ನೀಡದೆ 13 ಅಂಕಗಳ ಅಂತರದಿಂದ ಜಯ ತಮ್ಮದಾಗಿಸಿಕೊಂಡರು.
2ನೇ ಗೇಮ್‌ನಲ್ಲಿ ಐದಿಲ್ ಅಲ್ಪ ಪೈಪೋಟಿ ನೀಡಿದರಾದರೂ ಅಂತಿಮವಾಗಿ ಸೇನ್ 21-18 ಅಂಕಗಳ ಮುನ್ನಡೆಯಿಂದ ಗೆದ್ದು ಸೆಮಿಫೈನಲ್ ಕಾಲಿಟ್ಟರು. ಸೆಮಿಫೈನಲ್‌ನಲ್ಲಿ ಸೇನ್ ಥಾಯ್ಲೆಂಡ್‌ನ ಕುನಾÉವುತ್ ವಿತಿದ್‌ಸರ್ನ್ ಅವರನ್ನು ಎದುರಿಸಲಿದ್ದಾರೆ.
“ಕುನಾÉವುತ್ ಉತ್ತಮ ಆಟಗಾರ. ಅವರನ್ನು ಸೋಲಿಸಲು ನಾನು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಈ ಸವಾಲು ಸ್ವೀಕರಿಸಲು ಸಿದ್ದನಿದ್ದೇನೆ’ ಎಂದು ಲಕ್ಷ್ಯ ಸೇನ್ ವಿಶ್ವಾಸ ವ್ಯಕ್ತಪಡಿಸಿದರು.
ಡಬಲ್ಸ್‌ನಲ್ಲಿ ಸೋಲು
ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ವಿಷ್ಣುವರ್ಧನ್-ಶ್ರೀಕೃಷ್ಣ ಸಾಯಿ 11-21, 8-21 ನೇರ ಗೇಮ್‌ಗಳಿಂದ ಕೊರಿಯದ ತೈ ಯಾಂಗ್ ಶಿನ್-ಚಾನ್ ವಾಂಗ್ ವಿರುದ್ಧ ಸೋತರು.