Advertisement

ಪ್ರತಿ ಸಲ ನಾಮಪತ್ರ ಸಲ್ಲಿಸುವಾಗಲೂ ತಾಯಿ ಕೊಟ್ಟ ‘ಹಸಿರು ಸೀರೆ’ಯಲ್ಲೇ ಮಿಂಚುವ ಹೆಬ್ಬಾಳಕರ್

10:24 AM Apr 19, 2023 | Team Udayavani |

ಬೆಳಗಾವಿ: 2018ರ ವಿಧಾನಸಭೆ ಚುನಾವಣೆ, ಸಹೋದರ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಾಗ ಲಕ್ಷ್ಮೀ ಹೆಬ್ಬಾಳಕರ್ ಹಸಿರು ಸೀರೆ ಧರಿಸಿದ್ದರು. ಈಗ ತಮ್ಮ ನಾಮಪತ್ರ ಸಲ್ಲಿಸುವಾಗಲೂ ಅದೇ ಹಸಿರು ಸೀರೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮಿಂಚಿದ್ದು ವಿಶೇಷವಾಗಿತ್ತು.

Advertisement

ಈ ಹಸಿರು ಸೀರೆಯನ್ನು ಅವರ ತಾಯಿ ಗಿರಿಜಾ ಅವರು ನೀಡಿದ್ದಾರೆ. ಈ ಸೀರೆ ಶುಭ ಸಂಕೇತವಾಗಿರುವುದರಿದ ಹೆಬ್ಬಾಳಕರ್ ಅವರು ಇದನ್ನೇ ಧರಿಸಿ ನಾಮಪತ್ರ ಸಲ್ಲಿಸಿದರು.

ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ನೀಡಿದ ಆಶೀರ್ವಾದ ಹೂ ಸಹಿತ ಡಬ್ಬಿಯಲ್ಲಿ ತಂದಿದ್ದರು. ಈ ಡಬ್ಬಿಯನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಪ್ರತಿ ನಾಮಪತ್ರ ಸಲ್ಲಿಸುವಾಗಲೂ ಹೆಬ್ಬಾಳಕರ್ ದೇವಿಯ ಹೂ ತರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next