Advertisement

24ರಂದು ಬೆಂಗಳೂರು ಚಲೋ

11:17 AM Feb 03, 2019 | |

ಲಕ್ಷ್ಮೇಶ್ವರ: ಬೇಡ ಜಂಗಮ ಸಮಾಜವು ಬಹು ಹಿಂದಿನಿಂದಲೂ ಇರುವ ಜಾತಿ ವ್ಯವಸ್ಥೆಯಾಗಿದ್ದರೂ ಸಮಾಜಕ್ಕೆ ಸಾಂವಿಧಾನಿಕವಾಗಿ ದೊರಕಬೇಕಾದ ಸೌಲಭ್ಯ ಸಿಕ್ಕಿಲ್ಲ. ಸಮಾಜದ ಪ್ರತಿಯೊಬ್ಬರೂ ಸಂಘಟಿತರಾಗಿ ಸರಕಾರದ ಎದುರು ನಮ್ಮ ಹಕ್ಕು ಮಂಡಿಸುವ ನಿಟ್ಟಿನಲ್ಲಿ ಫೆ. 24ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬೇಡ ಜಂಗಮ ಸಮಾಜ ರಾಜ್ಯಾಧ್ಯಕ್ಷ ವೀರೇಂದ್ರ ಪಾಟೀಲ ಹೇಳಿದರು.

Advertisement

ಪಟ್ಟಣದ ಗಡ್ಡದೇವರಮಠದ ಆವರಣದಲ್ಲಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಜಂಗಮ ಸಮಾಜ ಸಭೆಯಲ್ಲಿ ಅವರು ಮಾತನಾಡಿದರು. ಬೇಡ ಜಂಗಮ ಮೊದಲಿನಿಂದಲೂ ಇರುವ ವ್ಯವಸ್ಥೆಯಾಗಿದೆ. ಆದರೆ ಅದರ ಬಗ್ಗೆ ಸಮಾಜದಲ್ಲಿ ತಿಳಿವಳಿಕೆ ಬರುವುದು ಅವಶ್ಯವಾಗಿದೆ. ಬೇಡ ಜಂಗಮ ಸಮಾಜಕ್ಕೆ ಸರಕಾರದಿಂದ ದೊರೆಯಬೇಕಾದ ಅನೇಕ ಸೌಲಭ್ಯಗಳಿಂದ ಜಂಗಮ ಸಮಾಜ ವಂಚಿತವಾಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಬೇಡ ಜಂಗಮ ಸಮಾಜದ ಮಹತ್ವ ಮತ್ತು ಅದರ ಮೂಲವನ್ನು ತಿಳಿದುಕೊಳ್ಳುವ ಮೂಲಕ ಸಂಘಟಿತರಾಗಿ ಎಂದು ಕರೆ ನೀಡಿದ ಅವರು, ಜಂಗಮ ಸಮಾಜ ಬಾಂಧವರು ಒಗ್ಗಟ್ಟಾಗಿ ಇದೇ ತಿಂಗಳು 24ರಂದು ಬೆಂಗಳೂರು ಚಲೋ ಕಾರ್ಯಕ್ರಮ ಸಂಘಟಿಸಲಾಗಿದ್ದು, ಸಮಾಜದ ಪ್ರತಿಯೊಬ್ಬರೂ ಇಚ್ಛಾಶಕ್ತಿಯಿಂದ ಪಾಲ್ಗೊಂಡು ನಮ್ಮ ಹಕ್ಕುಗಳಿಗಾಗಿ ಬೇಡಿಕೆ ಮಂಡಿಸೋಣ ಎಂದು ಮನವಿ ಮಾಡಿದರು.

ಸಭೆ ಅಧ್ಯಕ್ಷತೆಯನ್ನು ಗಂಗಾಧರಯ್ಯ ಹಾಲೇವಾಡಿಮಠ ವಹಿಸಿದ್ದರು. ರುದ್ರಯ್ಯ ಹಿರೇಮಠ(ಬಟ್ಟೂರ), ಚನ್ನಬಸಯ್ಯ ಗಡ್ಡಿಮಠ (ಸೂರಣಗಿ), ಪ್ರವೀಣ ಕುಲಕರ್ಣಿ, ಎಂ. ಸಿದ್ಧಲಿಂಗಯ್ಯ, ಸಿದ್ಧಯ್ಯ ಬಾಳಿಹಳ್ಳಿಮಠ, ಸಿ.ಆರ್‌. ಲಕ್ಕುಂಡಿಮಠ, ಚರಂತಯ್ಯ ಬಾಳಿಹಳ್ಳಿಮಠ, ಗುರುಶಾಂತಯ್ಯ ಬಾಳಿಹಳ್ಳಿಮಠ, ಶಿವಯೋಗಿ ಗಡ್ಡದೇವರಮಠ, ರವಿ ಪುರಾಣಿಕಮಠ, ರುದ್ರಯ್ಯ ಘಂಟಾಮಠ, ಬಿ.ಟಿ. ಪಾಟೀಲ, ಮಹೇಶ್ವರಯ್ಯ ಹಿರೇಮಠ ಸೇರಿದಂತೆ ಬಟ್ಟೂರು, ಶಿಗ್ಲಿ, ಸೂರಣಗಿ, ಯಳವತ್ತಿ, ಮಾಗಡಿ, ಅಡರಕಟ್ಟಿ ಮತ್ತಿತರ ಗ್ರಾಮಗಳಿಂದ ಸಮಾಜದ ಅನೇಕ ಹಿರಿಯರು, ಯುವಕರು ಇದ್ದರು. ವಿಜಯ ಹೊಳ್ಳಿಯವರಮಠ ನಿರೂಪಿಸಿದರು. ಪಂಚಯ್ಯ ಸಾಲಿಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next