Advertisement

ಭಾರತದಲ್ಲಿ ಕೋವಿಡ್ 19 ವೈರಸ್ ಪತ್ತೆಯಾಗದ ಒಂದೇ ಒಂದು ಪ್ರದೇಶ “ಲಕ್ಷದ್ವೀಪ”

05:21 PM May 25, 2020 | Nagendra Trasi |

ನವದೆಹಲಿ: ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್ 19 ವೈರಸ್ ಭರ್ಜರಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರಕೃತಿ ಸೌಂದರ್ಯದ ಲಕ್ಷದ್ವೀಪದಲ್ಲಿ ಈವರೆಗೂ ಒಂದೇ ಒಂದು ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.

Advertisement

ಭಾರತದಲ್ಲಿ ಈವರೆಗೆ ಬರೋಬ್ಬರಿ 1.3 ಲಕ್ಷ ಮಂದಿಗೆ ಕೋವಿಡ್ 19 ಸೋಂಕು ತಗುಲಿದೆ. ಜಾಗತಿಕವಾಗಿ ಐದು ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದಾರೆ. ಪ್ರಾಕೃತಿಕ ಸೌಂದರ್ಯದ 36 ಪುಟ್ಟ ದ್ವೀಪಪ್ರದೇಶ ಹೊಂದಿರುವ ಲಕ್ಷದ್ವೀಪ 64 ಸಾವಿರ ಜನಸಂಖ್ಯೆಯನ್ನು ಹೊಂದಿದೆ.

ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪ ಕೇರಳ ಕರಾವಳಿ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಈ ದ್ವೀಪ ಬಹುತೇಕ ಅಗತ್ಯ ವಸ್ತುಗಳಿಗೆ ದಕ್ಷಿಣದ ರಾಜ್ಯಗಳನ್ನೇ ನೆಚ್ಚಿಕೊಂಡಿದೆ. ಸದ್ಯದ ಅಂಕಿಅಂಶದ ಪ್ರಕಾರ ಈವರೆಗೆ ಈಶಾನ್ಯದ ನಾಗಲ್ಯಾಂಡ್ ರಾಜ್ಯ ಕೂಡಾ ಕೋವಿಡ್ 19 ಮುಕ್ತ ರಾಜ್ಯವಾಗಿತ್ತು. ಆದರೆ ಸೋಮವಾರ ಮೂರು ಕೋವಿಡ್ 19 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಚೆನ್ನೈನಿಂದ ಶ್ರಮಿಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಆಗಮಿಸಿದ್ದ ಮೂವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ.

ಶನಿವಾರ ಸಿಕ್ಕಿಂನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ದೆಹಲಿಯಿಂದ ವಾಪಸ್ ಆಗಿದ್ದ 25 ವರ್ಷದ ವಿದ್ಯಾರ್ಥಿಗೆ ಕೋವಿಡ್ 19 ವೈರಸ್ ಇದ್ದಿರುವುದು ಖಚಿತವಾಗಿದೆ. ಈತನ ಜತೆ 17 ಮಂದಿ ಸಂಪರ್ಕದಲ್ಲಿದ್ದರು. ಆದರೆ ಅವರೆಲ್ಲರ ವರದಿ ನೆಗೆಟಿವ್ ಆಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next