Advertisement
ಈ ನಿಟ್ಟಿನಲ್ಲಿ ಹಿಂದಿನಂತೆಯೇ ನಗರದ ಹಳೆ ಬಂದರಿನ ಮೂಲಕ ತಮ್ಮ ವ್ಯವಹಾರಗಳನ್ನು ಪುನರ್ ಸ್ಥಾಪಿಸುವನಿಟ್ಟಿನಲ್ಲಿ ಶಾಸಕ ಜೆ.ಆರ್.ಲೋಬೋ ಅವರ ನಿಯೋಗ ಅ. 30ರಂದು ಲಕ್ಷದ್ವೀಪಕ್ಕೆ ತೆರಳಿ ಮಾತುಕತೆ ನಡೆಸಲಿದೆ. ಮಂಗಳೂರಿನ ಜತೆಗಿನ ಸಂಪರ್ಕವನ್ನು ಹಿಂದಿನ ಸ್ಥಿತಿಗೆ ತರಲು ಏನು ಮಾಡಬಹುದು ಎಂಬ ಕುರಿತು ನಿಯೋಗ ಅಲ್ಲಿನ ಪ್ರಮುಖರೊಂದಿಗೆ ಚರ್ಚಿಸಲಿದೆ.
ಒಂದು ಕಾಲದಲ್ಲಿ ಲಕ್ಷದ್ವೀಪಕ್ಕೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಮಂಗಳೂರು ಹಳೆ ಬಂದರು ನಿಧಾನಗತಿಯಲ್ಲಿ ತನ್ನ ಹಿಂದಿನ ಸಂಪರ್ಕ ಕೊಂಡಿಯನ್ನು ಕಳಚಿಕೊಂಡಿತು. ಸುಮಾರು 25 ವರ್ಷಗಳಿಂದ ವ್ಯವಹಾರ
ಸಂಪೂರ್ಣ ನಿಂತು ಹೋದ ಸ್ಥಿತಿಯಿದೆ. ಹಿಂದೆ ಅಲ್ಲಿನ ಜನತೆ ಪ್ರತಿಯೊಂದಕ್ಕೂ ಮಂಗಳೂರಿನ್ನೇ ಆಶ್ರಯಿಸಿದ್ದರು. ಇದು ನಗರದ ಆರ್ಥಿಕತೆಗೂ ದೊಡ್ಡ ಕೊಡುಗೆ ನೀಡಿತ್ತು. ಪ್ರಸ್ತುತ ಅದು ಕೇರಳದ ಪಾಲಾಗಿರುವುದರಿಂದ ಇಲ್ಲಿನ ಆರ್ಥಿಕತೆ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಅದು ಪುನರ್ ಸ್ಥಾಪನೆಗೊಂಡರೆ ಇಲ್ಲಿನ ವ್ಯಾಪಾರ ಉದ್ಯಮಕ್ಕೆ ದೊಡ್ಡ ಕೊಡುಗೆಯಾದೀತು.
Related Articles
ಅ.30ರಂದು ಲಕ್ಷದ್ವೀಪಕ್ಕೆ ತೆರಳುವ ಶಾಸಕ ಜೆ.ಆರ್.ಲೋಬೋ ನೇತೃತ್ವದ ನಿಯೋಗದಲ್ಲಿ ಲೋಕೋಪಯೋಗಿ ಇಲಾಖಾಧಿಕಾರಿಗಳು, ಬಂದರು ಮಂಡಳಿ ನಿರ್ದೇಶಕರು, ಬೆಂಗಳೂರು ಪಿಡಬ್ಲ್ಯುಡಿ ಅಧಿಕಾರಿಗಳು ಇರುತ್ತಾರೆ. ಇವರು ಅಲ್ಲಿನ ಆಡಳಿತಾಧಿಕಾರಿ ಸಹಿತ ಇತರ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ. ಲಕ್ಷದ್ವೀಪದ ಸಂಸದರ ಜತೆಗೂ ಶಾಸಕ ಲೋಬೋ ಅವರು ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Advertisement
ಪುನರ್ ಸ್ಥಾಪನೆಗೆ ಪ್ರಯತ್ನಮಂಗಳೂರಿನೊಂದಿಗೆ ಲಕ್ಷದ್ವೀಪದ ವ್ಯವಹಾರವನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕದ ನಿಯೋಗ ಅಲ್ಲಿನ ಪ್ರಮುಖರೊಂದಿಗೆ ಚರ್ಚೆ ನಡೆಸಲಿದೆ. ಇದು ನಗರದ ವ್ಯಾಪಾರದ ವೃದ್ಧಿಗೂ ಅನುಕೂಲವನ್ನು ಸೃಷ್ಟಿಸುವ
ಹಿನ್ನೆಲೆಯಲ್ಲಿ ಅದಕ್ಕೆ ಪ್ರಯತ್ನಿಸಲಾಗುವುದು. ಅವರು ವ್ಯವಹಾರವನ್ನು ಕಡಿತಗೊಳಿಸಲು ಕಾರಣಗಳೇನು ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ.
– ಜೆ.ಆರ್.ಲೋಬೋ,
ಶಾಸಕರು, ಮಂಗಳೂರು ನಗರ ದಕ್ಷಿಣ ಜೆಟ್ಟಿ ನಿರ್ಮಾಣಕ್ಕೆ ನಿರಾಸಕ್ತಿ.?
ಕೆಲವು ವರ್ಷಗಳ ಹಿಂದೆ ಸುಮಾರು 70 ಕೋ.ರೂ.ವೆಚ್ಚದಲ್ಲಿ ನಗರದ ಹಳೆಬಂದರಿನಲ್ಲಿ ಲಕ್ಷದ್ವೀಪದ ಜೆಟ್ಟಿಯೊಂದು ನಿರ್ಮಾಣವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಲಕ್ಷದ್ವೀಪದ ಸರಕುಗಳಿಗೆ ಗೋದಾಮು ಸಹಿತ ಇತರ ಅನುಕೂಲಗಳಿಗೆ ಜೆಟ್ಟಿ ನಿರ್ಮಾಣಕ್ಕೆ ಅಲ್ಲಿನ ಆಡಳಿತ ಮುಂದಾಗಿತ್ತು. ಇದಕ್ಕೆ ಇಲ್ಲಿನ ಆಡಳಿತ ವರ್ಗ ಒಪ್ಪಿಗೆ ಸೂಚಿಸುವ ಜತೆಗೆ ಸ್ಥಳವನ್ನೂ ನೀಡುವ ಭರವಸೆ ನೀಡಲಾಗಿತ್ತು. ಆದರೆ ಪ್ರಸ್ತುತ ಜೆಟ್ಟಿ ನಿರ್ಮಾಣಕ್ಕೂ ಲಕ್ಷದ್ವೀಪದ ಆಡಳಿತ ನಿರಾಸಕ್ತಿ ತೋರಿದೆ. ಕಿರಣ್ ಸರಪಾಡಿ