Advertisement

ಕರುನಾಡಿನಲ್ಲಿ ಮೊಳಗಿದ ‘ಲಕ್ಷ ಕಂಠ ಗಾಯನ’

01:01 PM Oct 28, 2021 | Team Udayavani |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿರುವ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಗುರುವಾರ ನಾಡಿನಾದ್ಯಂತ ಲಕ್ಷಾಂತರ ಜನರು ಏಕಕಾಲಕ್ಕೆ ಕನ್ನಡ ಗೀತಾ ಗಾಯನದಲ್ಲಿ ಪಾಲ್ಗೊಂಡು ಹಾಡಿದರು.

Advertisement

ಈ ಕಾರ್ಯಕ್ರಮದಲ್ಲಿ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರವಲ್ಲದೇ, ಕನ್ನಡ ನಾಡಿನ ಎಲ್ಲ ವರ್ಗದ ಜನರೂ ಭಾವಹಿಸಿದ್ದಾರೆ. ದೇಶದ ಇತರ ರಾಜ್ಯಗಳು ಮತ್ತು ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಕೂಟಗಳು ಸಹ ಕನ್ನಡ ಗೀತೆಗಳನ್ನು ಹಾಡಿದ್ದಾರೆ. ಇವರಿಗಾಗಿ ಒದಗಿಸಿರುವ ನಿರ್ದಿಷ್ಟ ಜಾಲತಾಣ ಸಂಪರ್ಕದ ಮೂಲಕ ಒಟ್ಟಿಗೆ ಹಾಡುವ ತಾಂತ್ರಿಕ ಸಂಯೋಜನೆ ರೂಪಿಸಲಾಗಿತ್ತು

ನಾಡಿನ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳ ಆವರಣ, ವಿಶ್ವವಿದ್ಯಾಲಯಗಳ ಆವರಣ, ತಾಂತ್ರಿಕ ಮತ್ತು ವೈದ್ಯಕೀಯ ವಿಶ್ವವಿದ್ಯಾಲಯಗಳ ಆವರಣ, ಮೈಸೂರು ಅರಮನೆ ಮುಂಭಾಗ, ಹಂಪಿಯ ಕಲ್ಲಿನ ರಥ, ಮಹಾನವಮಿ ದಿಬ್ಬ ಸೇರಿ ವಿವಿಧ ಜಿಲ್ಲೆಗಳ ಪ್ರಸಿದ್ಧ ಸ್ಮಾರಕಗಳ ಮುಂದೆ ಒಟ್ಟಿಗೆ ನಿಂತು ಹಾಡಲಾಗಿದೆ.

ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ ವಿಶೇಷ – ಕನ್ನಡ ಗೀತ ಗಾಯನ

ಎಲ್ಲೆಲ್ಲಿ ಗಾಯನ

Advertisement

* ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳು

* ಬೆಂಗಳೂರು ಮೆಟ್ರೊದ ಎಲ್ಲ ರೈಲುಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಸುಗಮ ಸಂಗೀತ ಗಾಯನ ತಂಡಗಳು ಮೂರು ಗೀತೆಗಳನ್ನು ಹಾಡಲಾಗಿದೆ. ಮೆಟ್ರೊದ ಎಲ್ಲ 51 ನಿಲ್ದಾಣಗಳಲ್ಲಿ ಕನ್ನಡ ಗೀತೆಗಳ ಗಾಯನ ಧ್ವನಿ ವರ್ಧಕಗಳ ಮೂಲಕ ಪ್ರಸಾರವಾಗಲಿದೆ. ಅಲ್ಲದೆ, ಅತ್ಯಂತ ಜನನಿಬಿಡ 5 ಮೆಟ್ರೊ ನಿಲ್ದಾಣಗಳಲ್ಲಿ   ಗಾಯನ ನಡೆಸಲಾಗಿದೆ.

* ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿ, ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಸಚಿವ ವಿ.ಸುನಿಲ್‌ ಕುಮಾರ್‌, ಅಧಿಕಾರಿಗಳು, ಸಿಬ್ಬಂದಿ ಸೇರಿ 3 ಸಾವಿರ ಮಂದಿ ಭಾಗವಹಿಸಿದ್ದರು.

* ಜೋಗ ಜಲಪಾತದ ಮುಂದೆ, ಕುಪ್ಪಳಿಯ ಕವಿಶೈಲ, ಚಿತ್ರದುರ್ಗದ ಕೋಟೆ, ಮಂಗಳೂರಿನ ಕಡಲ ಕಿನಾರೆ, ಉಡುಪಿಯ ಶ್ರೀಕೃಷ್ಣ ದೇಗುಲ, ಮೂಡಬಿದಿರೆಯ ಸಾವಿರ ಕಂಬದ ಬಸದಿ, ಮಂಗಳೂರು ಬಂದರಿನ ಮೀನುಗಾರರ ಮಧ್ಯೆ

* ಸಿದ್ಧಗಂಗಾ ಮಠದ ಆವರಣ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇಗುಲ, ಭಾಗಮಂಡಲ, ಬೀದರ್‌ನ ಗೋಳ ಗುಮ್ಮಟ, ಬೇಲೂರು, ಹಳೇ
ಬೀಡು, ಶ್ರವಣಬೆಳಗೊಳ, ಕನ್ನಡದ ಮೊದಲ ಶಾಸನ ದೊರೆತ ಹಲ್ಮಿಡಿ ಗ್ರಾಮ ಮುಂತಾದ ಸ್ಥಳಗಳಲ್ಲಿ ಹಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ’ಲಕ್ಷ ಕಂಠಗಳ ಗೀತಗಾಯನ’ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಸೇರಿದಂತೆ ಹಲವರು ಕೂ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next