Advertisement
ಉತ್ಸವದಲ್ಲಿ ಮುಂದಾಳತ್ವ ವಹಿಸಿದ್ದ ಆನೆ ಮತ್ತು ಬಸವ ಎಲ್ಲರ ಕಣ್ಮನ ಸೆಳೆಯಿತು. ಜೊತೆಗೆ ಉತ್ಸವದ ಸಮಯದಲ್ಲಿ ಅವುಗಳ ಪ್ರತಿಕ್ರಿಯೆಯನ್ನು ನೋಡಿ ಪ್ರತಿಯೊಬ್ಬರು ಮಂತ್ರಮುಗ್ಧರಾಗಿದ್ದರು.ಕೇವಲ ಉತ್ಸವಕ್ಕೆ ಆನೆ ಮತ್ತು ಬಸವ ಬಂದಿರುವುದನ್ನು ಜನರು ಕಾಣಬಹುದು. ಆದರೆ ಅದರ ಹಿಂದೆ ಪ್ರಾಣಿಗಳನ್ನು ಯಾವ ರೀತಿಯಾಗಿ ತಯಾರು ಮಾಡುತ್ತಾರೆ ಹಾಗೂ ಉತ್ಸವಕ್ಕೆ ಬರುವ ಮೊದಲು ಹೇಗೆ ಸಿದ್ಧಗೊಳಿಸುತ್ತಾರೆ ಎಂಬುದನ್ನು ತಿಳಿದಿರುವುದಿಲ್ಲ.ಇದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದಾಗ ನನಗೆ ಹಲವಾರು ಸಂಗತಿಗಳು ನನಗೆ ದೊರೆಯಿತು, ಜೊತೆಗೆ ಆಶ್ಚರ್ಯಚಕಿತಳಾದೆ.
Related Articles
Advertisement
ಬಸವ: ಬಸವನ ಹೆಸರು ‘ ಗಿರೀಶ ‘. ಇದು ಧರ್ಮಸ್ಥಳದ ಗೋಶಾಲೆಯಲ್ಲಿರುವ ಬಸವ. ಪ್ರತಿಯೊಂದು ಉತ್ಸವಕ್ಕೂ ಇವನೇ ಮುಖ್ಯ ಪಾತ್ರವನ್ನುವಹಿಸುತ್ತಾನೆ. ಅತೀ ಸಾಧು ಈ ಬಸವ. ಗಿರೀಶನನ್ನು ವೀಕ್ಷಣೆ ಮಾಡಲು ಬಂದವರೆಲ್ಲರನ್ನೂ ಕೂಡ ಪ್ರೀತಿಯಿಂದ ಕಾಣುತ್ತಾನೆ. ಜೊತೆಗೆ ಖಾವಂದರ ಮನೆತನದವರು ಯಾರು ಕೂಡ ಕರೆಯನ್ನು ಮಾಡಿದಾಗ ಮೊಬೈಲಿಂದ ಮಾತನಾಡುವಾಗಲೂ ಗಿರೀಶ ‘ ಅಂಬಾ ಅಂಬಾ ‘ ಎಂದು ಸಂಬೋಧಿಸುತ್ತಾನೆ. ಜೊತೆಗೆ ಇದನ್ನು ನೋಡಿಕೊಳ್ಳುವವರು ಕೂಡ ಇದಕ್ಕೆ ಗುಟ್ಟನ್ನು ಹೇಳುತ್ತಾರೆ ಅದನ್ನು ಕೇಳಿದಾಗ ಇದು ಹೌದು ಹೌದು ಎಂದು ತಲೆ ಆಡಿಸುತ್ತದೆ. ಉತ್ಸವಕ್ಕೆ ಹೋಗುವ ಸಮಯದಲ್ಲಿ ಇದಕ್ಕೆ ತೊಡಿಸುವ ಬಟ್ಟೆಯಿಂದಲೇ ತಿಳಿಯುತ್ತದೆ ತಾನು ಸಂಭ್ರಮಕ್ಕೆ ತೆರಳುತ್ತಿದ್ದೇನೆ ಎಂದು. ಆನೆ ‘ ಲತಾ ‘ ಹೋಗುತ್ತಿದ್ದರೆ ಅದರ ಪಕ್ಕದಲ್ಲೇ ಗಿರೀಶ ನು ಕೂಡ ದೇವಸ್ಥಾನದ ಆವರಣಕ್ಕೆ ಸಂಭ್ರಮದಿಂದ ಬರುತ್ತಾನೆ. ಭಕ್ತಾದಿಗಳು ಫೋಟೋ ಬಂದು ತೆಗೆಯುವ ಸಮಯದಲ್ಲಿ ಕೂಡ ಯಾರಿಗೂ ಹಾನಿಯನ್ನು ಮಾಡದೆ ಅತಿ ಸೌಮ್ಯತೆಯಿಂದ ನಿಂತಿರುತ್ತದೆ.
ಒಟ್ಟಿನಲ್ಲಿ’ ಲತಾ ‘ಮತ್ತು ‘ ಗಿರೀಶ ‘ಉತ್ಸವದ ಮೆರಗು ಹೆಚ್ಚಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ.
ಹರ್ಷಿತಾ ಹೆಬ್ಬಾರ್
ಅಂತಿಮ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿನಿ.
ಎಸ್ ಡಿ ಎಂ ಕಾಲೇಜು ಉಜಿರೆ