Advertisement
ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ಬಿಜೆಪಿಯ 216ನೇ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಮುಂದೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ, ನಮ್ಮ ಅವಧಿಯಲ್ಲಿ ನೀರಾವರಿ ಯೋಜನೆಗೆ ಒಂದು ಲಕ್ಷ ಕೋಟಿ ಅನುದಾನ ಮೀಸಲಿಡುತ್ತೇನೆ, ನಿಮ್ಮ ಬೆಂಬಲ ನಮ್ಮ ಪಕ್ಷದ ಮೇಲೆ ಅಚಲವಾಗಿರಲಿ,
Related Articles
Advertisement
ಬಿಜೆಪಿಯಿಂದ ದೇವರಾಜು ಆಡಳಿತ: ಸಂಸದ ಪ್ರತಾಪ ಸಿಂಹ ಮಾತನಾಡಿ, ನಿದ್ರೆ ಮಾಡುವ ಸಿದ್ದರಾಮಯ್ಯ ಜಾತ್ರೆ ಮೈಸೂರಿನಲ್ಲಿ ಮುಗಿದ ಅಧ್ಯಾಯ, ರಾಜ್ಯಕ್ಕೆ ತಟ್ಟಿರುವ ಶಾಪ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಮೂಲಕ ವಿಮೋಚನೆಗೊಳ್ಳಲಿದೆ, ಎಲ್ಲರನ್ನೂ ಏಕ ವಚನದಲ್ಲೇ ಸಂಬೋಧಿಸುವ ಮುಖ್ಯಮಂತ್ರಿಗಳು ಯಾರಿಗಾದರೂ ಮರ್ಯಾದೆಕೊಟ್ಟಿರುವ ಒಂದೇ ಒಂದು ಸಾಕ್ಷಿ ಇದ್ದರೆ ತೋರಿಸಲೆಂದು ಸವಾಲು ಹಾಕಿ, ಮುಂದೆ ದೇವರಾಜ ಅರಸರು ನಡೆಸುತ್ತಿದ್ದ ಆಡಳಿತ ಮತ್ತೆ ನಮ್ಮ ಮೂಲಕ ಮರುಕಳಿಸಲಿದೆ.
ಎಸ್.ಪಿ.ವಿರುದ್ಧ ಆಕ್ರೋಶ: ಸಂಸದ ಪ್ರತಾಪಸಿಂಹ ಈದ್ ಮಿಲಾದನ್ನು ಯಶಸ್ವಿಯಾಗಿ ಆಚರಿಸಲು ಅವಕಾಶ ಕೊಡುವ ಎಸ್‌ಪಿ ಅವರು 2500 ಪೊಲೀಸರನ್ನು ನಿಯೋಜಿಸಿ ಹಿಂದೂಗಳ ಹನುಮ ಜಯಂತಿ ಮೆರವಣಿಗೆಗೆ ಅವಕಾಶ ನೀಡಬಹುದಾಗಿತ್ತಾದರೂ ಅವಕಾಶಕೊಡದೇ ವಿನಾಕಾರಣ ಬಂಧಿಸಿ ಕಿರುಕುಳ ನೀಡಿದ್ದಲ್ಲದೆ, ತಮ್ಮ ಹತಾಶೆ ಪ್ರದರ್ಶಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ನಿಷ್ಕ್ರಿಯತೆಯನ್ನು ಖಂಡಿಸಿದರು. 27 ರಂದು ನಡೆಯುವ ಹನುಮ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರೆಂದು ಇದೇ ವೇಳೆ ಕೋರಿದರು.
ಕಾರ್ಯಕ್ರಮದಲ್ಲಿ ಮಾಜಿ ಮಂತ್ರಿ ಬಿ.ಜೆ.ಪುಟ್ಟಸ್ವಾಮಿ, ಮಾಜಿ ಸಂಸದೆ ತೇಜಸ್ವಿನಿ, ಜಿಲ್ಲಾಧ್ಯಕ್ಷ ಕೋಟೆಶಿವಣ್ಣ, ತಾಲೂಕು ಅಧ್ಯಕ್ಷ ಯೋಗಾನಂದಕುಮಾರ್, ಮುಖಂಡರಾದ ಅಪ್ಪಣ್ಣ, ರಘು, ರಮೇಶಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಮಂತ್ರಿ ಸುರೇಶ ಕುಮಾರ್, ರೀನಾಪ್ರಕಾಶ್, ನಾಗರಾಜಮಲ್ಲಾಡಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮಹದೇವಸ್ವಾಮಿ, ವಸಂತಕುಮಾರಗೌಡ, ಹನಗೋಡುಮಂಜುನಾಥ್, ರಾಜೇಂದ್ರ, ಚಂದ್ರಶೇಖರ್, ಸುಬ್ಬರಾವ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಪೂರ್ಣಕುಂಭ ಸ್ವಾಗತ: ಹುಣಸೂರಿಗಾಗಮಿಸಿದ ಯಡಿಯೂರಪ್ಪ ನೇತೃತ್ವದ ಪರಿವರ್ತನಾ ರ್ಯಾಲಿಯನ್ನು ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಸ್ವಾಗತ ಹಾಗೂ ನೂರಾರು ಕಾರ್ಯಕರ್ತರು ಘೋಷಣೆ ಕೂಗುತ್ತಾ ವೇದಿಕೆಗೆ ಕರೆತಂದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರು.