ಬೆಂಗಳೂರು : ಉತ್ತರಪ್ರದೇಶದ ಲಖಿಂಪುರದಲ್ಲಿ ನಡೆದ ಹಿಂಸಾಚಾರ ಘಟನೆ ಖಂಡಿಸಿ, ಕೇಂದ್ರ ಸಚಿವರನ್ನು ವಜಾ ಗೊಳಿಸುವಂತೆ ಮತ್ತು ಈ ಹತ್ಯಾಕಾಂಡ ನಡೆಸಿದ ಎಲ್ಲಾ ಅಪರಾಧಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ, ಕೆಪಿಸಿಸಿ ವತಿಯಿಂದ ನಾಳೆ ನಾಳೆ ಅಕ್ಟೋಬರ್ 1ರಂದು ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯ ಗಾಂಧಿ ಪ್ರತಿಮೆಯ ಮುಂದೆ ‘ಮೌನ ವ್ರತ’ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 11 ಗಂಟೆಯಿಂದ ಆರಂಭವಾಗುವ ಈ ‘ಮೌನ ವ್ರತ’ ಸತ್ಯಾಗ್ರಹದಲ್ಲಿ ಪಕ್ಷದ ಎಲ್ಲಾ ನಾಯಕರು, ಶಾಸಕರು, ಮಾಜಿ ಸಚಿವರು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ, ಕೇಂದ್ರ ಬಿಜೆಪಿ ಸರಕಾರ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರಕಾರ ರೈತರ ಹತ್ಯಾಕಾಂಡ ನಡೆಸಿದವರ ರಕ್ಷಣೆಗೆ ನಿಂತಿರುವುದನ್ನು ಖಂಡಿಸಬೇಕೆಂದು ಕೋರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ಸಂಭವನೀಯ ರೈತರ ನರಮೇಧಕ್ಕೆ ಮುನ್ನುಡಿಯಂತಿರುವ ಲಖಿಂಪುರ ಘಟನೆ ಕೃಷಿಕ ವರ್ಗ ಅಷ್ಟೇಅಲ್ಲ ಶ್ರೀ ಸಾಮಾನ್ಯರ ಎದೆಯಲ್ಲೂ ನಡುಕ ಹುಟ್ಟಿಸಿದೆ. ಈ ಅನ್ಯಾಯವನ್ನು ಖಂಡಿಸಿ ಕೆಪಿಸಿಸಿ ವತಿಯಿಂದ ಮೌನ ಪ್ರತಿಭಟನೆ ಕೈಗೊಳ್ಳಲಾಗುತ್ತಿದೆ. ಕಾರ್ಯಕರ್ತರು, ನಾಯಕರು ಈ ಹೋರಾಟಕ್ಕೆ ಕೈ ಜೋಡಿಸುತ್ತೀರಿ ಎಂದು ನಂಬಿದ್ದೇನೆ.
-ಎಲ್ಲರೂ ಸಂಘಟಿತರಾಗೋಣ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.