Advertisement

ಸಿಎಂ ಮಾಡ್ತೀನಿ ಅಂದ್ರೂ ಬಿಜೆಪಿಗೆ ಹೋಗಲ್ಲ !:ಲಖನ್‌ ಜಾರಕಿಹೋಳಿ 

04:18 PM Apr 04, 2018 | Team Udayavani |

ಗೋಕಾಕ್‌:ತೀವ್ರ ಕುತೂಹಲ ಕೆರಳಿಸಿದ್ದ ಲಖನ್‌ ಜಾರಕಿಹೋಳಿ ಅವರು  ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Advertisement

ಮಂಗಳವಾರ ಗೋಕಾಕ್‌ನಲ್ಲಿ  ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಲಖನ್‌ ‘ಸಿಎಂ ಮಾಡ್ತೇವೆ ಅಂದ್ರೂ ನಾನು ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ’ ಎಂದಿದ್ದಾರೆ.  

ನಾನು ಪಕ್ಷ ಬಿಡುವುದಿಲ್ಲ. ಸಹೋದರ ರಮೇಶ್‌ನನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ಕಾಂಗ್ರೆಸ್‌ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು. 

ಕಳೆದ ಕೆಲ ದಿನಗಳಿಂದ ಲಖನ್‌ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿತ್ತು ಮಾತ್ರವಲ್ಲದೆ  ಯಮಕನಮರಡಿಯಲ್ಲಿ ಸಹೋದರ,ಸಚಿವ ರಮೇಶ್‌ ಜಾರಕಿಹೋಳಿ ವಿರುದ್ಧ ಕಣಕ್ಕಿಳಿಯು ತ್ತಾರೆ ಎಂದು ಭಾರೀ ಲೆಕ್ಕಾಚಾರಗಳನ್ನು ಹಾಕಲಾಗಿತ್ತು. 

ಐವರು ಜಾರಕಿಹೋಳಿ ಸಹೋದರರ ಪೈಕಿ ಸತೀಶ್‌,ರಮೇಶ್‌ ಮತ್ತು ಲಖನ್‌ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲಚಂದ್ರ ಜಾರಕಿಹೋಳಿ ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next