Advertisement

ಅಂಗಾರಕನಲ್ಲಿವೆ ಸರೋವರಗಳು; ಇಟಲಿಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಉಲ್ಲೇಖ

12:07 PM Nov 03, 2015 | mahesh |

ಲಂಡನ್‌: ಮಂಗಳ ಗ್ರಹದ ದಕ್ಷಿಣ ಧ್ರುವದ ಹಿಮಚಾದರದ ಕೆಳಗೆ ಸರೋವರವೊಂದು ಇರಬಹುದು ಎಂದು 2018ರಲ್ಲಿ ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ, ಪೂರಕ ದತ್ತಾಂಶಗಳ ಕೊರತೆಯಿಂದಾಗಿ ಈ ವಿಚಾರ ಅಸ್ಪಷ್ಟವಾಗಿಯೇ ಉಳಿದಿತ್ತು. ಈಗ ಇಟಲಿಯ ಸಂಶೋಧನ ವರದಿಯೊಂದು ಆ ಕೆಂಪುಗ್ರಹದಲ್ಲಿ ಬೃಹತ್‌ ಸರೋವರವಿದೆ ಎನ್ನುವುದಕ್ಕೆ ಪೂರಕ ಅಂಶಗಳನ್ನು ವೈಜ್ಞಾನಿಕ ವಲಯದೆದುರು ತೆರೆದಿಟ್ಟಿದೆ. ಅಷ್ಟೇ ಅಲ್ಲದೇ, ಆ ಸರೋವರದ ಸನಿಹದಲ್ಲೇ ಉಪ್ಪುನೀರಿನ ಮೂರು ಚಿಕ್ಕ ಕೊಳಗಳೂ ಇವೆ ಎನ್ನುತ್ತಿದೆ ಈ ವರದಿ.

Advertisement

ಮಂಗಳ ಗ್ರಹವು ಮಾನವನಿಗೆ ವಾಸ ಯೋಗ್ಯವೇ ಎನ್ನುವ ಕುರಿತು ದಶಕಗಳಿಂದ ವೈಜ್ಞಾನಿಕ ವಲಯ ಸಂಶೋಧನೆಯಲ್ಲಿ ತೊಡಗಿದ್ದು, ಈ ಕಾರಣದಿಂದಾಗಿಯೇ ಜಲಮೂಲಗಳನ್ನು ಪತ್ತೆ ಮಾಡುವುದು ಮಹತ್ವ ಪಡೆದಿದೆ. ಈಗಿನ ಸಂಶೋಧನಾ ವರದಿಯು ಇನ್ನು ಮುಂದೆ ವೈಜ್ಞಾನಿಕ ವಲಯವು ಮಂಗಳನ ದಕ್ಷಿಣ ಧ್ರುವದತ್ತ ದೃಷ್ಟಿ ಹರಿಸುವಂತೆ ಮಾಡಲಿದೆ.

ಮಂಗಳ ಗ್ರಹದ ದಕ್ಷಿಣ ಧ್ರುವವು ಅತ್ಯಂತ ಶೀತಲವಾಗಿರುವ ಕಾರಣ, ಹಿಮಚಾದರದ ಅಡಿಯಲ್ಲಿ ಮಡುಗಟ್ಟಿದ ನೀರು ಇರಲು ಸಾಧ್ಯವೇ ಎನ್ನುವ ಪ್ರಶ್ನೆ ಈ ಹಿಂದೆ ಉದ್ಭವವಾಗಿತ್ತು. ಈಗಿನ ಸಂಶೋಧನ ವರದಿಯು 2012-2019ರವರೆಗಿನ ದಕ್ಷಿಣ ಧ್ರುವದ ಮೇಲಿನ 134 ಅವಲೋಕನಗಳ ಬೃಹತ್‌ ದತ್ತಾಂಶವನ್ನು ಬಳಸಿ ಈ ನಿರ್ಣಯಕ್ಕೆ ಬಂದಿದೆ. 2018ರ ಅಧ್ಯಯನವು ಕೇವಲ 29 ಆಬ್ಸರ್ವೇಷನ್‌ಗಳನ್ನಷ್ಟೇ ಅವ ಲಂಬಿಸಿದ್ದ ಕಾರಣ, ಸ್ಪಷ್ಟತೆ ಮೂಡಿರಲಿಲ್ಲ.

2018ರಲ್ಲಿ ಈ ಬಗ್ಗೆ ಸಂದೇಹ ಇದ್ದರೂ ದಾಖಲೆಗಳಿರಲಿಲ್ಲ
ಜಲ ಮೂಲದ ಪತ್ತೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವದ್ದು
2012-2019ರ ವರೆಗಿನ ಮಾಹಿತಿಗಳ ಸತತ ಅಧ್ಯಯನ

Advertisement

Udayavani is now on Telegram. Click here to join our channel and stay updated with the latest news.

Next