Advertisement

ಹೂಳೆತ್ತಿದ ಕೆರೆಗಳಿಗೆ ಬಂತು ಮರುಜೀವ

04:49 PM Oct 28, 2020 | Suhan S |

ಕೂಡ್ಲಿಗಿ: ಮಳೆಗಾಲದಲ್ಲಿ ನೀರು ಸಂಗ್ರಹವಾಗದೆ ಪಾಳು ಬಿದ್ದಂತಾಗಿದ್ದ ಕೆರೆಗೆ ಲಾಕ್‌ಡೌನ್‌ ಅವ ಧಿಯಲ್ಲಿ ಹೂಳೆತ್ತಿಸಿದ ಪರಿಣಾಮ ಜೀವಸೆಲೆ ಬಂದಿದೆ.

Advertisement

ತಾಲೂಕಿನ ಹೋಬಳಿಯ ಅಡಿಯಲ್ಲಿ ಗುಡೇಕೋಟೆ ಮತ್ತು ರಾಮದುರ್ಗಾ ಕೆರೆಗಳು ತುಂಬಿ ಹರಿಯುತ್ತಿರುವುದರಿಂದಜೀವರಾಶಿಗಳ ಸಂಕುಲಕ್ಕೆಮರುಜೀವ ಬಂದಾತಾಗಿದೆ. ಕೆರೆ ತುಂಬಿರುವುದರಿಂದ ನೂರಾರುಹೆಕ್ಟೇರ್‌ ಪ್ರದೇಶ ಹಸನಾಗಲುಸಾಧ್ಯವಾಗುತ್ತಿದೆ. ಸುಮಾರು 10ವರ್ಷಗಳಿಂದ ಕೆರೆಗೆ ನೀರೆ ಇಲ್ಲದೇ ಬರಡು ಭೂಮಿಯಂತೆ ಕಾಣುತ್ತಿದ್ದ ಕೆರೆ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ ಜೀವ ಸೆಲೆ ಸೆಳೆದಂತಾಗಿದೆ.

ಬಹುತೇಕ ಹಳ್ಳಿಗಳಲ್ಲಿ ಮಳೆ ಇಲ್ಲದೇ ಪರದಾಡುವ ಪರಿಸ್ಥಿತಿನಿರ್ಮಾಣವಾಗಿತ್ತು. ಆದರೆ ಕಳೆದ ಸುಮಾರು ಆರು ತಿಂಗಳು ಕಳೆದುವಲಸೆ ಹೋದ ಜನರು ಮರಳಿಗೂಡಿನತ್ತ ದಾಪುಗಾಲು ಹಾಕಿದ್ದರು. ಕೆಲಸವಿಲ್ಲವೆಂದು ಸುಮ್ಮನೆ ಕೂಡದೆ ಕೆರೆ ಅಭಿವೃದ್ಧಿಗೆ ಕೈಹಾಕಿ ಹೂಳು ತೆಗೆದರು.

ಉದ್ಯೋಗ ಖಾತ್ರಿ ಆಸರೆ: ಗುಡೇಕೊಟೆ ಹೋಬಳಿ ಕೆರೆ ಹೂಳೆತ್ತುವ ಉದ್ದೇಶದಿಂದ ಅಂದಾಜು 60 ಲಕ್ಷ ರೂ. ಮೊತ್ತದಲ್ಲಿ 1300 ಜನರಿಗೆ ಕೆಲಸ ನೀಡಿದ್ದರಿಂದ ಬತ್ತಿದ ಕೆರೆಯಲ್ಲಿ ನೀರು ಸಂಗ್ರಹಣೆಯಾಗಿ ಕೋಡಿ ಬಿದ್ದಿದೆ.

ಕೆರೆಯಿಂದ ಲಾಭ: ಗುಡೇಕೊಟೆ ಹೋಬಳಿ ಕೆರೆ ತುಂಬಿರುವುದಕ್ಕೆ ರೈತರು ಖುಷಿ ಆಗಿದ್ದಾರೆ. ಕೆರೆ ಕೆಳಭಾಗದಲ್ಲಿ ಅಚ್ಚುಕಟ್ಟುದಾರರಿಗೆ ನೀರು ಕೋಡುತ್ತೇವೆ. ಶೇ. 50ರಿಂದ60% ನೀರು ಚೆಕ್‌ ಡ್ಯಾಂನಲ್ಲಿ ಸಂಗ್ರಹಣೆಯಾಗಿದೆ. ಜಿಲ್ಲಾ ಪಂಚಾಯತ ಅಡಿಯಲ್ಲಿ 21 ಕೆರೆಗಳುಇದ್ದರೆ ಅವುಗಳಲ್ಲಿ ರಾಮದುರ್ಗಾ ಕೆರೆ ಭರ್ತಿಯಾಗಿದ್ದು, 9 ಕೆರೆಗಳು ಭಾಗಶಃ ಶೇ. 40ರಷ್ಟು ತುಂಬಿವೆ. ಇನ್ನುಳಿದ 11 ಕೆರೆಗಳು ಅಲ್ಪಸ್ವಲ್ಪ ತುಂಬಿವೆ.

Advertisement

ಹೂಳೆತ್ತುವ ಮೂಲಕ ಕೆರೆಯಲ್ಲಿ ನೀರಿನ ಸಾಮರ್ಥ್ಯ ಹೆಚ್ಚಾಗಿದೆ. ಕೆರೆಯಲ್ಲಿ ನೀರು ನಿಲುಗಡೆಯಿಂದ ಅಂತರ್ಜಲ ಮಟ್ಟ ಹೆಚ್ಚುವುದರಿಂದಈ ಭಾಗದ ರೈತರ ಬೋರವೆಲ್‌ಗ‌ಳುಅಂತರ್ಜಲ ನೀರಿನ ಮಟ್ಟ ಹೆಚ್ಚುಇರುವುದರಿಂದ ತುಂಬ ಖುಷಿಯಿಂದ ರೈತರು ಕೃಷಿ ಚಟುವಟಿಕೆಯಲ್ಲಿತೊಡಗಿದ್ದಾರೆ. – ಜಿ. ಬಸಣ್ಣ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೂಡ್ಲಿಗಿ

ಕೆರೆಯೊಳಗೆ ಹೂಳು ತುಂಬಿದಾಗ ದನಕರುಗಳಿಗೂ ಕುಡಿಯಲು ನೀರು ಇಲ್ಲದಂತಾಗಿತ್ತು. ಆದರೆ ಇತ್ತೀಚಿಗೆ ಪಂಚಾಯಿತಿಯವರುಈ ಸಲ ಕೆರೆ ಹೂಳೆತ್ತಿಸಿದ್ದರು. ಉತ್ತಮ ಮಳೆ ಬಂದು ಕೆರೆ ಭರ್ತಿಯಾಗಿದೆ. ಅಂರ್ತಜಲ ಮಟ್ಟವೂ ಹೆಚ್ಚಾಗಿದೆ. ವ್ಯವಸಾಯ ಮಾಡಲು ಧೈರ್ಯ ಬಂದೈ. –ಹನುಮಂತಪ್ಪ ಗುಡೇಕೊಟೆ, ರೈತ

 

ಕೆ. ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next