Advertisement

ಕೆರೆ ಒತ್ತುವರಿ ಆಗಿದ್ರೆ ಕೂಡಲೇ ತೆರವುಗೊಳಿಸಿ

02:34 PM Apr 11, 2021 | Team Udayavani |

ದೇವನಹಳ್ಳಿ: ಜಿಲ್ಲೆಯ ಕೆರೆಗಳು ಒತ್ತುವರಿಯಾಗಿದ್ದರೆ, ಕೂಡಲೇ ತೆರವುಗೊಳಿಸುವ ಕಾರ್ಯಕ್ಕೆ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ತಿಳಿಸಿದರು.

Advertisement

ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ಕೆರೆಅಭಿವೃದ್ಧಿ ಸಮಿತಿಯಿಂದ “ನಮ್ಮೂರ-ನಮ್ಮ ಕೆರೆ ಕಾರ್ಯಕ್ರಮದಲ್ಲಿ ಪುನಶ್ಚೇತನಗೊಂಡ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆರೆಗಳನ್ನು ಹೂಳೆತ್ತುವುದರಿಂದ ನೀರಿನ ಸಂಗ್ರಹ ಹೆಚ್ಚಾಗುತ್ತದೆ, ಗ್ರಾಮದ ಸುತ್ತಮುತ್ತಲಿನ ಕೊಳವೆಬಾವಿಗಳಅಂತರ್ಜಲ ಮರುಪೂರಣಗೊಂಡು ಹೆಚ್ಚು ನೀರುಸಿಗುವುದರಿಂದ ಕೃಷಿ, ಪ್ರಾಣಿ, ಪಕ್ಷಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಕೆ.ಸಿ.ವ್ಯಾಲಿ, ಎತ್ತಿನಹೊಳೆ ಯೋಜನೆ ಅಡಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಕ್ಯಾಚ್‌-ದಿ-ರೈನ್‌ ಯೋಜನೆಯ ಮುಖ್ಯ ಉದ್ದೇಶ ಅಂತರ್ಜಲ ಮರುಪೂರಣಗೊಳಿಸುವುದೇ ಆಗಿದ್ದು,ಮುಂದಿನ ದಿನಗಳಲ್ಲಿಯೂ ಹಲವು ಸಂಘ ಸಂಸ್ಥೆಗಳು ಕೆರೆಅಭಿವೃದ್ಧಿಪಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಮುಂದಿನ ಪೀಳಿಗೆಗೆ ಉಳಿಸಿ: ಅಪರ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ.ನಾಯಕ ಮಾತನಾಡಿ, ಕೆರೆಗಳಲ್ಲಿಹೂಳೆತ್ತುವ ಕಾರ್ಯವನ್ನು ಕೇವಲ ಹಣದಿಂದಅಳೆಯಲು ಸಾಧ್ಯವಿಲ್ಲ, ನಮ್ಮ ಪೂರ್ವಜರು ರಕ್ಷಿಸಿ, ಹೋದಂತಹ ಕೆರೆಗಳನ್ನು ಅಭಿವೃದ್ಧಿಪಡಿಸಿ, ಸಂರಕ್ಷಿಸಿನಮ್ಮ ಮುಂದಿನ ಪೀಳಿಗೆಗಾಗಿ ಉಳಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

Advertisement

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್‌ ಮಾತನಾಡಿ, ಕೆರೆಗಳನ್ನು ಅಭಿವೃದ್ಧಿ ಪಡಿಸುತ್ತಿರುವುದರಿಂದಅಂತರ್ಜಲದ ಮರುಪೂರಣಕ್ಕೆ ಸಹಕಾರಿ ಆಗಲಿದ್ದು,ಕೆರೆಗಳಿಗೆ ನೀರು ಪೂರೈಸುವ ರಾಜಕಾಲುವೆಗಳ ಒತ್ತುವರಿತೆರವುಗೊಳಿಸಬೇಕೆಂದು ಡೀಸಿ ಗಮನಕ್ಕೆ ತಂದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ, ಸತತ 38ವರ್ಷಗಳಿಂದ ಸಂಘವು ರಾಜ್ಯಾದ್ಯಂತ ಸಮಾಜದ ಅಭಿವೃದ್ಧಿಗೆ ದುಡಿಯುತ್ತಿದ್ದು, 6.50 ಲಕ್ಷ ಸ್ವಸಹಾಯ ಸಂಘಗಳಿದ್ದು, 50 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಹಣಕಾಸಿನ ನೆರವು ಪಡೆದುಕೊಂಡಿದ್ದಾರೆ ಎಂದರು.

ಈ ವೇಳೆಯಲ್ಲಿ ತಾಪಂ ಸದಸ್ಯೆ ಶೆ„ಲಜಾ ಜಗದೀಶ್‌,ಗ್ರಾಪಂ ಅಧ್ಯಕ್ಷೆ ಮಂಗಳಾ ನಾರಾಯಣಸ್ವಾಮಿ, ಉಪಾಧ್ಯಕ್ಷ ವಿನಯ್‌ ಕುಮಾರ್‌, ಕರ್ನಾಟಕ ಜನ ಜಾಗೃತಿವೇದಿಕೆ ಅಧ್ಯಕ್ಷ ವಿ.ರಾಮಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ವಿಶ್ವನಾಥಪುರ ಕೆರೆ ಸಮಿತಿ ಅಧ್ಯಕ್ಷ ಚಂದ್ರಶೇಖರ್‌, ಉಪ ತಹಶೀಲ್ದಾರ್‌ ಚೆ„ತ್ರಾ,ಆರ್‌ಎಚ್‌ಎಂ ಗಂಗಾಧರಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್‌ನಾಯಕ್‌, ತಾಲೂಕು ಯೋಜನಾ—ಕಾರಿ ಅಕ್ಷತಾರೈ,ಮೇಲ್ವಿಚಾರಕ ವಿಶ್ವನಾಥ್‌, ಗ್ರಾಪಂ ಪಿಡಿಒ ಗಂಗರಾಜು, ಸದಸ್ಯರು, ಗ್ರಾಮಸ್ಥರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next