Advertisement

ಕೆರೆಯಲ್ಲಿ ತಲೆಬುರುಡೆ, ಎಲುಬುಗಳು ಪತ್ತೆ

03:35 AM Feb 16, 2017 | |

ಕಾರ್ಕಳ/ಉಡುಪಿ: ಬೆಳ್ಮಣ್‌ನ ಕೆದಿಂಜೆ ಸಮೀಪದ ಮುಜಲೊಟ್ಟುವಿನ ಕೆರೆಯ‌ಲ್ಲಿ ಬುಧವಾರ ಅಪರಿಚಿತ ವ್ಯಕ್ತಿಯ ತಲೆ ಬುರುಡೆ ಹಾಗೂ ಎಲುಬುಗಳು ಪತ್ತೆಯಾಗಿದ್ದು, ಇದನ್ನು ಈ ಹಿಂದೆ ಸುದ್ದಿಯಾಗಿದ್ದ ಅನಿವಾಸಿ ಭಾರತೀಯ ಉದ್ಯಮಿ ಉಡುಪಿಯ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸ್ಥಳೀಯರು ತಳುಕು ಹಾಕಿದ್ದಾರೆ.

Advertisement

ವಿಷಯ ತಿಳಿದ ಗ್ರಾಮಸ್ಥರು ಕೆರೆಯ ಸುತ್ತ ಜಮಾಯಿಸಿದ್ದರು. ಜನರು ಮೂಳೆಯನ್ನು ನೋಡಿ ಭಾಸ್ಕರ್‌ ಶೆಟ್ಟಿ ಸಾವಿನ  ಪ್ರಕರಣವನ್ನು ನೆನೆಸಿ ಕೊಳ್ಳಲು ಕಾರಣವೇನೆಂದರೆ ಶೆಟ್ಟಿ ಕೊಲೆ ರೂವಾರಿಯಾಗಿದ್ದ ಸ್ವಯಂಘೋಷಿತ ಜೋತಿಷಿ ನಂದಳಿಕೆಯ ನಿರಂಜನ ಭಟ್ಟನು ಈ ಕೆರೆಯ ಪಕ್ಕವೇ ಇರುವ ದೇಗುಲವೊಂದರಲ್ಲಿ ಅರ್ಚಕ ನಾಗಿದ್ದ. ಮಾತ್ರವಲ್ಲದೆ ನಿರಂಜನನು ಆಗಾಗ ಈ ಕೆರೆಯತ್ತ¤ ಬಂದು ಹೋಗುತ್ತಿದ್ದ. ಈ ಎಲ್ಲ ವಿಚಾರವನ್ನು ಮೆಲುಕು ಹಾಕಿಕೊಂಡ ಸ್ಥಳೀ ಯರ ಮನಸ್ಸಿನಲ್ಲಿ ಕಲ್ಪನೆಗಳು ಮೂಡಿ ಕೊಂಡು ಬಾಯಿಂದ ಬಾಯಿಗೆ ಭಾಸ್ಕರ್‌ ಶೆಟ್ಟಿಯವರ ಹೆಸರೇ ಸಾಗಿತ್ತು.

“ವಿಧಿ ವಿಜ್ಞಾನ ತಂಡದಿಂದ ಪರಿಶೀಲನೆ’
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಕಾರ್ಕಳ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಕೆರೆಯಲ್ಲಿದ್ದ ಮಾನವನ ತಲೆ ಬುರುಡೆ, ಮೂಳೆಗಳು ಹಾಗೂ ಕೆಲವೊಂದು ಅವಶೇಷಗಳು, ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿಯಲು ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವನ್ನು ಸ್ಥಳಕ್ಕೆ ಕರೆಯಿಸಿ ಪರಿಶೀಲನೆ ನಡೆಸಲಾಗಿದೆ. ಅವರು ಮೂಳೆಗಳನ್ನು ಪರಿಶೀಲನೆಗೆ ಕೊಂಡೊಯ್ದಿದ್ದಾರೆ.

ಅಕ್ಟೋಬರ್‌ ತಿಂಗಳಲ್ಲಿ ಬೇಲಾಡಿಯ ವ್ಯಕ್ತಿ ಯೊಬ್ಬರು ನಾಪತ್ತೆಯಾಗಿದ್ದು, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ವ್ಯಕ್ತಿ ಕಾಣೆಯಾಗಿದ್ದಾಗ ಅವರು ಬಿಳಿ ಬಟ್ಟೆ ತೊಟ್ಟಿದ್ದರಂತೆ. ಕೆರೆಯಲ್ಲಿಯೂ ಬಿಳಿ ಬಟ್ಟೆ ಪತ್ತೆಯಾಗಿದೆ. ಮೂಳೆಗಳು ಅವರದ್ದೇ ಇ ‌ಬಹುದೇ ಎನ್ನುವ ಕುರಿತೂ ತನಿಖೆ ನಡೆಯು ತ್ತಿದೆ. ಹೆಚ್ಚಿನ ಮಾಹಿತಿ ವಿಧಿ ವಿಜ್ಞಾನ ವರದಿಯ ಬಳಿಕವಷ್ಟೇ ತಿಳಿಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next