Advertisement

Kantara Chapter 1: 4ನೇ ಶೆಡ್ಯೂಲ್‌ನಲ್ಲಿ ಭರಪೂರ ಆ್ಯಕ್ಷನ್ ಸೀನ್ಸ್..‌ ಯಾವಾಗ ಶೂಟ್ ಆರಂಭ?

01:02 PM Aug 21, 2024 | Team Udayavani |

ಬೆಂಗಳೂರು: ನಟ – ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ‘ಕಾಂತಾರ’ (Kantara) ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಬೆನ್ನಲ್ಲೇ ಅವರು ಭಾರತೀಯ ಸಿನಿಮಾರಂಗದಲ್ಲಿ ಮತ್ತೆ ಸುದ್ದಿಗೆ ಬಂದಿದ್ದಾರೆ.

Advertisement

ಅಂದಾಜು 20 ಕೋಟಿ ಬಜೆಟ್‌ ನಲ್ಲಿ ನಿರ್ಮಾಣವಾದ ʼಕಾಂತಾರʼ ವರ್ಲ್ಡ್‌ ವೈಡ್‌ 400 ಕೋಟಿ ಗಳಿಕೆ ಕಾಣುವ ಮೂಲಕ ಕನ್ನಡ ಚಿತ್ರರಂಗದಲ್ಲಿ ʼಕೆಜಿಎಫ್‌ʼ(KGF) ಬಳಿಕ ಪ್ಯಾನ್‌ ಇಂಡಿಯಾದಲ್ಲಿ ಸದ್ದು ಮಾಡಿದ ಮತ್ತೊಂದು ಚಿತ್ರವಾಗಿ ಹೊರಹೊಮ್ಮಿತ್ತು.

ಸದ್ಯ ರಿಷಬ್‌ ʼಕಾಂತಾರ ಪ್ರೀಕ್ವೆಲ್‌ʼ (Kantara Prequel) ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಅನೌನ್ಸ್‌ ಆದ ದಿನದಿಂದ ಸುದ್ದಿಯಲ್ಲಿದ್ದು ಚಿತ್ರೀಕರಣದಲ್ಲಿ ನಿರತವಾಗಿದೆ. ‘ಕಾಂತಾರ ಚಾಪ್ಟರ್‌ -1ʼ ಬಗ್ಗೆ  ನಿರೀಕ್ಷೆಗಳು ಹೆಚ್ಚಾಗಿವೆ. ಈಗಾಗಲೇ ಸಿನಿಮಾದ ಚಿತ್ರೀಕರಣಕ್ಕೆ ಸಾಕಷ್ಟು ತಯಾರಿ ನಡೆಸಲಾಗಿದ್ದು, ಕುಂದಾಪುರದ ಹಳ್ಳಿಯೊಂದರಲ್ಲಿ ದೊಡ್ಡ ಸೆಟ್‌ ಗಳನ್ನು ಹಾಕಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು.

content-img

ಇದೀಗ ʼಕಾಂತಾರ ಚಾಪ್ಟರ್‌ -1ʼ(Kantara Chapter-1) ಬಗ್ಗೆ ಮತ್ತೊಂದು ಬಿಗ್‌ ಅಪ್ಡೇಟ್‌ ಹೊರಬಿದ್ದಿದೆ.  ಸಿನಿಮಾದ 4ನೇ ಹಂತದ ಚಿತ್ರೀಕರಣ ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದ್ದು, ಈ ಕುರಿತು ʼಪಿಂಕ್‌ ವಿಲ್ಲಾʼ ಎಕ್ಸ್‌ ಕ್ಲೂಸಿವ್‌ ಮಾಹಿತಿಯನ್ನು ನೀಡಿದೆ.

Advertisement

ಇದನ್ನೂ ಓದಿ: National Award; ಗೆದ್ದ ಬೆನ್ನಲ್ಲೇ ಬಾಲಿವುಡ್ ಭಾರತವನ್ನು ಕೆಟ್ಟದಾಗಿ ತೋರಿಸಿದೆ ಎಂದ ರಿಷಬ್

ಆಗಸ್ಟ್‌ ಕೊನೆಯ ವಾರ ಅಂದರೆ ಮುಂದಿನ ವಾರದಿಂದ 4ನೇ ಹಂತದ ಚಿತ್ರೀಕರಣದ ಶೆಡ್ಯೂಲ್  ಆರಂಭಗೊಳ್ಳಲಿದೆ. ಈ ಶೆಡ್ಯೂಲ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಆ್ಯಕ್ಷನ್ ದೃಶ್ಯಾವಳಿಗಳ ಶೂಟ್‌ ಆಗಲಿದೆ. ಕೊನೆ ಹಂತದ ಚಿತ್ರೀಕರಣಕ್ಕೆ ಇನ್ನಷ್ಟು ತಯಾರಿಯಲ್ಲಿ ಚಿತ್ರತಂಡ ನಿರತವಾಗಿದೆ ಎಂದು ʼಪಿಂಕ್‌ ವಿಲ್ಲಾʼ ವರದಿ ತಿಳಿಸಿದೆ.

ಈಗಾಗಲೇ ʼಕಾಂತಾರ ಪ್ರೀಕ್ವೆಲ್‌ʼ ಸಿನಿಮಾದ ಡಿಜಿಟಲ್‌ ಸ್ಟ್ರೀಮ್‌ ಬಗ್ಗೆ ಸುದ್ದಿಯಾಗಿದೆ. ಅಮೇಜಾನ್‌ ಪ್ರೈಮ್‌ ಸಿನಿಮಾದ ಡಿಜಿಟಲ್‌ ರೈಟ್ಸ್‌ ನ್ನು ಖರೀದಿಸಿದೆ. ಇದೇ ವರ್ಷದ ಆರಂಭದಲ್ಲಿ ಅಮೇಜಾನ್‌ ಪ್ರೈಮ್‌ ʼಕಾಂತಾರ ಚಾಪ್ಟರ್‌ -1ʼ ಘೋಷಿಸಿತ್ತು. ‘ಕಾಂತಾರ ಪ್ರೀಕ್ವೆಲ್‌ʼ ಸಿನಿಮಾದ ಪೋಸ್ಟ್ ಥಿಯೇಟ್ರಿಕಲ್ ಡಿಜಿಟಲ್ ರೈಟ್ಸ್‌  ಬರೋಬ್ಬರಿ 125 ಕೋಟಿ ರೂಪಾಯಿಗೆ ಪ್ರೈಮ್‌ಗೆ ಮಾರಾಟವಾಗಿದ ಎಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ʼಕಾಂತಾರ ಚಾಪ್ಟರ್‌ -1ʼ ತೆರೆಗೆ ಬರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.