ಮೈಸೂರು: ದೇಶ ವಿದೇಶಗಳಿಂದ ಪಕ್ಷಿಗಳನ್ನು ಆಕರ್ಷಿಸುವ ನಂಜನಗೂಡು ತಾಲೂಕು ವರುಣಾ ಕ್ಷೇತ್ರ ವ್ಯಾಪ್ತಿಯ ಹದಿನಾರು ಗ್ರಾಮದಕೆರೆಗೆ ಗುರುವಾರ ವಿಶೇಷ ದಿನ. ಗ್ರಾಮಸ್ಥರೇ ಖುದ್ದು ನಿಂತು ಕೆರೆ ಸ್ವತ್ಛತೆಗೆ ಮುಂದಾದ ಸಂತಸ ಸನ್ನಿವೇಶ. ಒಂದೇ ದಿನ ಕೆರೆಯಿಂದ 5 ಟನ್‌ಗೂ ಹೆಚ್ಚು ತ್ಯಾಜ್ಯ ಹೊರ ತೆಗೆಸಿದರು. ಇನ್ನೂ 15 ಟನ್‌ಗೂ ಹೆಚ್ಚು ತ್ಯಾಜ್ಯ ಕೆರೆಯ 4-5 ಕಡೆ ಇದ್ದು ಕೆಲವೇ ದಿನಗಳಲ್ಲಿ ತೆಗೆಸಿ ಕೆರೆಯನ್ನು ಮಲಿನ ಮುಕ್ತ ಮಾಡುವ ನಿರ್ಧಾರ ಮಾಡಿದರು.
ಮೈಸೂರಿನ ಸೌತ್ ವೆಸ್ಟ್ ರೋಟರಿ ಕ್ಲಬ್, ಇನ್ನರ್ ವ್ಹೀಲ್, ರೋಟರಾಕ್ಟ್, ಹದಿನಾರು ಗ್ರಾಮದ ರೋಟರಿ ದಳ ಹಾಗೂ ಹದಿನಾರು ಗ್ರಾಪಂ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಕೆರೆ ಸ್ವಚ್ಛತಾ ಕಾಯಕ್ರಮ ಯಶಸ್ವಿಯಾಗಿ ನಡೆಯಿತು. ಅಷ್ಟೇ ಅಲ್ಲದೇ ನಮ್ಮೂರ ಕೆರೆ ಸಂರಕ್ಷಿಸಿಕೊಳ್ಳಬೇ ಕು ಎನ್ನುವ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯೂ ಆಯಿತು.
ಗ್ರಾಪಂ ಅಧ್ಯಕ್ಷ ಅಭಿ ಮಾತನಾಡಿ, ನಮ್ಮ ಊರಿನ ಕೆರೆ ಅತ್ಯಂತ ಸುಂದರ ವಾತಾವರಣದಿಂದ ಕೂಡಿದ್ದು, ಈ ಕೆರೆ ಅಭಿವೃದ್ಧಿಗೆ ಎಚ್.ಸಿ.ಮಹ ದೇವಪ್ಪ ಅವರು ಸಚಿವರಾಗಿದ್ದ ಸಮಯದಲ್ಲಿ ವಿಶೇಷ ಅನುದಾನದಡಿ 3.5 ಕೋಟಿ ರೂ. ಗೂ ಹೆಚ್ಚು ಹಣ ನೀಡಿ ಗ್ರಾಮದ ಕೆರೆ, ರಸ್ತೆ ಸೇರಿ ಹಲವಾರು ಅಭಿವೃದ್ಧಿ ಕಾಮಗಾರಿ ಮಾಡಲು ಕಾರಣಕರ್ತರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದು, ಇಂದು ಅಭಿವೃದ್ಧಿ ಹೊಂದಿದ ಗ್ರಾಮಗಳಲ್ಲಿ ನಮ್ಮ ಹದಿನಾರು ದೇಶದÇÉೇ 15ನೇ ಸ್ಥಾನದಲ್ಲಿದೆ ಎಂದರು.
ಜೊಂಡು ತೆಗೆಯಬೇಡಿ: ನಂತರ ಗ್ರಾಮದಸಮುದಾಯ ಭವನದಲ್ಲಿ ನಡೆದ ವೇದಿಕೆಕಾರ್ಯಕ್ರಮದಲ್ಲಿ ಮೈಸೂರಿನ ಪಕ್ಷಿ ತಜ್ಞ ಡಾ. ಎಪಿಸಿ ಅಭಿಜಿತ್ ಮಾತನಾಡಿ, ಕೆರೆಯ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ತ್ಯಾಜ್ಯ ಹಾಕಬಾರದು. ಸ್ವಚ್ಛತೆ ನೆಪದಲ್ಲಿ ಜೊಂಡು ತೆಗೆಯಬೇಡಿ. ಅಲ್ಲಿಯೇ ಹಕ್ಕಿಗಳು ಬದುಕು ಕಟ್ಟಿಕೊಳ್ಳುವುದು. ಕೆರೆ ಸಮೃದ್ಧವಾಗಿದ್ದರೆ ಹಕ್ಕಿಗಳು ಬರುತ್ತವೆ. ಇದರಿಂದ ಊರಲ್ಲೂ ಸಮೃದ್ಧತೆ ಇರುತ್ತದೆ ಎಂದು ಹೇಳಿದರು.
ಶಾಲಾ ಮಕ್ಕಳು ಜಾಥಾ ನಡೆಸಿ ಕೆರೆ ಸಂರಕ್ಷಣೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಬಾಲಸುಬ್ರಹ್ಮಣ್ಯಂ, ಜಿಪಂ ಮಾಜಿ ಸದಸ್ಯ ಎಚ್. ಎನ್.ನಂಜಪ್ಪ, ಸತೀಶ್, ಗೌಡರ ಸೋಮಣ್ಣ, ಡಾ.ರವೀಂದ್ರ, ಶಿಕ್ಷಕ ರವೀಶ್, ರೋಟರಿ ಅಧ್ಯಕ್ಷ ಎಂ.ರಾಜೀವ್‌ಗೌಡ, ರವೀಂದ್ರ, ರಮೇಶ್‌ರಾವ್, ಮುರಳೀಧರ್, ನಾಗರಾಜ, ಇತರಿದ್ದರು.
ಪ್ರವಾಸಿ ತಾಣವನ್ನಾಗಿಸಲು ಶ್ರಮ :
ಹದಿನಾರು ಗ್ರಾಮದ ಕೆರೆ ತಾಲೂಕಿನಲ್ಲೇ ಅತ್ಯಂತ ಉತ್ತಮ ಹಾಗೂ ಸುಂದರವಾದ ಕೆರೆ. ಈ ಕೆರೆಗೆ ದೇಶ ವಿದೇಶಗಳಿಂದ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಆಗಮಿಸುತ್ತಿದ್ದು, ಪಕ್ಷಿಧಾಮವಾಗಿ ಮಾರ್ಪಾಡಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯಲ್ಲಿ ತುಂಬಿಕೊಂಡಿರುವ ಕಲುಷಿತ ಹಾಗೂ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಪದಾರ್ಥ ತೆಗೆಯಲಾಗುತ್ತಿದೆ. ಇದನ್ನು ಹೀಗೆಯೇ ಬಿಟ್ಟರೆ ತ್ಯಾಜ್ಯಗಳು ತುಂಬಿಕೊಂಡಿರುವುದರಿಂದ ಜಲಚರ, ಪ್ರಾಣಿಪಕ್ಷಿಗಳ ಜೀವಕ್ಕೆ ಮಾರಕವಾಗಲಿದೆ. ಹೀಗಾಗಿಗ್ರಾಮಸ್ಥರು ಇಲ್ಲಿನ ಪರಿಸರವನ್ನು ಶುಚಿಯಾಗಿಡುವತ್ತ ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಈ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಲು ತಾಲೂಕು ಆಡಳಿತ ಶ್ರಮಿಸಲಿದೆ ಎಂದು ನೇತೃತ್ವ ವಹಿಸಿಕೊಂಡ ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ ತಿಳಿಸಿದರು.