Advertisement
ಆರೋಪಿ ನಗ್ಮಾ ಬಂಧನನಿಂದ ಐದು ಕಳವು ಪ್ರಕರಣಗಳು ಪತ್ತೆಯಾಗಿದ್ದು 6.46 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
Related Articles
Advertisement
ಕಳ್ಳತನವೇ ಕಸುಬು! ಆನೆಪಾಳ್ಯ ನಿವಾಸಿಯಾದ ನಗ್ಮಾ ಹಲವು ವರ್ಷಗಳಿಂದ ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದಾಳೆ. ಆರೋಪಿಗಳಾದ ನಯಾಜ್ ಹಾಗೂ ಅಪ್ಸರ್ ಖಾನ್ ಜತೆ ಸೇರಿ ಕಳವು ಕೃತ್ಯಗಳನ್ನು ಮಾಡುತ್ತಿದ್ದಳು. ಆರೋಪಿಗಳ ಹೆಂಡತಿಯಂತೆ ನಟಿಸುತ್ತಾ ನಗರದ ಹಲವು ಬಡಾವಣೆಗಳಲ್ಲಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ಸುತ್ತಾಡುತ್ತಿದ್ದಳು. ಹೊರಗಡೆಯಿಂದ ಬಾಗಿಲು ಬಡಿಯುತ್ತಿದ್ದರು ಈ ವೇಳೆ ಮನೆಯಲ್ಲಿ ಯಾರಾದರೂ ಇರುವುದು ಕಂಡು ಬಂದತೆ ನಮ್ಮದು ಕುಟುಂಬ ಮನೆ ಬಾಡಿಗೆ ಬೇಕಿದೆ ಎಂದು ಹೇಳಿ ಸಬೂಬು ಹೇಳಿ ಅಲ್ಲಿಂದ ತೆರಳುತ್ತಿದ್ದರು. ಬೀಗ ಹಾಕಿದ ಮನೆಗಳು ಕಂಡು ಬಂದರೆ ಬೀಗ ಒಡೆದು ಒಳನುಗ್ಗಿ ಕಳವು ಮಾಡುತ್ತಿದ್ದರು. ಈ ವೇಳೆ ನಗ್ಮಾ ಹೊರಗಡೆ ನಿಂತು ಯಾರಾದರೂ ಬಂದರೆ ಮಾಹಿತಿ ನೀಡುತ್ತಿದ್ದಳು. ಕಳವು ಮಾಡಿದ ಆಭರಣಗಳಲ್ಲಿ ಎಲ್ಲರೂ ಹಂಚಿಕೊಳ್ಳುತ್ತಿದ್ದರು.
ಆರೋಪಿ ನಗ್ಮಾ ಈ ಹಿಂದೆಯೂ ಎಚ್‌ಎಎಲ್ ಹಾಗೂ ಬನಶಂಕರಿ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿ ಬಂಧಿತಳಾಗಿದ್ದಳು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು .