Advertisement
ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ನಿಧಿಯ ನೆರವಿನೊಂದಿಗೆ ನಿರ್ಮಾಣಗೊಳ್ಳುತ್ತಿರುವ 5 ಅಂತಸ್ತುಗಳ ಕಟ್ಟಡದ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಅವರು, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ, ಎಂಆರ್‌ಪಿಎಲ್ ಅಧಿಕಾರಿಗಳು ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಡರೋಗಿಗಳ ಪಾಲಿಗೆ ಆಶಾದಾಯಕವಾಗಿರುವ ಲೇಡಿಗೋ ಶನ್ ಆಸ್ಪತ್ರೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಆಗ ಶಾಸಕರಾಗಿದ್ದ ಎನ್. ಯೋಗೀಶ್ ಭಟ್ ಅವರು ಯೋಜನೆ ರೂಪಿಸಿದ್ದರು. ಎಂಆರ್‌ಪಿಎಲ್ ಸಂಸ್ಥೆಯ 21.7 ಕೋ.ರೂ. ನೆರವಿನೊಂದಿಗೆ ಯೋಜನೆ ಆರಂಭಗೊಂಡಿತ್ತು. ಕೇಂದ್ರ ಸಚಿವರಾ ಗಿದ್ದ ಡಾ| ಎಂ. ವೀರಪ್ಪ ಮೊಲಿ ಸಹಕಾರ ನೀಡಿದ್ದರು. ಕೇಂದ್ರದಿಂದ ಈಗ ಹೆಚ್ಚುವರಿಯಾಗಿ 10 ಕೋ.ರೂ. ಬಿಡುಗಡೆಗೊಂಡಿದ್ದು ಒಟ್ಟು 31.7 ಕೋ.ರೂ. ಮೊತ್ತ ಲಭಿಸಿದೆ ಎಂದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ ಅವರು ಕಾಮಗಾರಿಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿ ಜುಲೈ ತಿಂಗಳಿನ ರೋಗಿಗಳ ಸೇವೆಗೆ ಅರ್ಪಣೆಯಾಗುವ ಗುರಿ ಇರಿಸಿಕೊಳ್ಳಲಾ ಗಿದೆ ಎಂದರು. ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಚ್. ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ, ಡಾ| ದುರ್ಗಾ ಪ್ರಸಾದ್, ನಿರ್ಮಿತಿ ಕೇಂದ್ರದ ಡಾ| ರಾಜೇಂದ್ರ ಕಲಾºವಿ, ಮಾಜಿ ಶಾಸಕ ಎನ್. ಯೋಗೀಶ್ ಭಟ್, ಬಿಜೆಪಿ ಮುಖಂಡ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.
Related Articles
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಲೇಡಿಗೋಶನ್ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದರು. ಟೆಂಡರ್ ಸಮಸ್ಯೆ ಸಹಿಧಿತ ಕೆಲವು ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ರೋಗಿಗಳ ಸೇವೆಗೆ ಒದಗಿಸುವ ನಿಟ್ಟಿನಲ್ಲಿ ಸಚಿವ ಧಮೇಂದ್ರ ಪ್ರಧಾನ್ ವಿಶೇಷ ಆಸಕ್ತಿ ವಹಿಸಿದ್ದಾರೆ. ಕಾಮಗಾರಿಯ ಪ್ರಗತಿಯನ್ನು ಅವರ ಗಮನಕ್ಕೆ ತರಲಾಗುವುದು. ಕೇಂದ್ರ ಸಚಿವರಾದ ಧಮೇಂದ್ರ ಪ್ರಧಾನ್, ಆರೋಗ್ಯ ಸಚಿವ ಜೆ.ಪಿ.ನಡ್ಡಾ, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರ ಉಪಸ್ಥಿತಿಯೊಂದಿಗೆ ಹೊಸ ಕಟ್ಟಡ ಉದ್ಘಾಟನೆಗೊಳ್ಳುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯಲಿವೆ. ನಳಿನ್ ಕುಮಾರ್ ಕಟೀಲು, ಸಂಸದರು.
Advertisement