Advertisement
ಒಳ್ಳೆಯ ಆದಾಯಮೂರು ವರ್ಷಗಳ ಹಿಂದೆ ಖಾಲಿಯಾದ ಸಿಮೆಂಟ್ ಚೀಲಗಳನ್ನು ತಂದು ಅದಕ್ಕೆ ಮಣ್ಣು, ಗೊಬ್ಬರ ತುಂಬಿಸಿ ಬೆಂಡೆ ಬೀಜ ಬಿತ್ತನೆ ಮಾಡಿದರು. ಅದು ನಿರೀಕ್ಷೆಗೂ ಮೀರಿ ಇಳುವರಿ ಕೊಟ್ಟಿತು. ಇದರಿಂದ ಪ್ರೇರಿತರಾದ ಅವರು 2014ರಲ್ಲಿ ಬೇಡವೆಂದು ಬಿಸಾಡಿದ 250 ಚೀಲಗಳನ್ನು ಸಂಗ್ರಹಿಸಿ ಮನೆಯ ಅಂಗಳದಲ್ಲಿ ಬೆಂಡೆ ಬೇಸಾಯ ಮಾಡಿ, ಒಳ್ಳೆಯ ಆದಾಯ ಪಡೆದರು. ಹೀಗೆ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಚೀಲಗಳಲ್ಲಿ ಸ್ಥಳೀಯ ಜಾತಿಯ ಬೆಂಡೆ ಬೇಸಾಯ ಮಾಡುತ್ತಾ ಬಂದಿದ್ದಾರೆ. ಈ ವರ್ಷ 400ರಷ್ಟು ಚೀಲಗಳಲ್ಲಿ ಬೆಂಡೆ ಬೇಸಾಯ ಮಾಡಿರುವುದು ಇವರ ಕೃಷಿ ಮೇಲಿನ ಆಸಕ್ತಿಗೆ ಉದಾಹರಣೆಯಾಗಿದೆ.
ಮಳೆಗಾಲದ ತರಕಾರಿ ರಾಜ ಎಂದೇ ಕರೆಯಲ್ಪಡುವ ಬೆಂಡೆಯನ್ನು ಸಿದ್ಧ ಚೀಲಗಳ ಮಾದರಿಯಲ್ಲಿ ಯಶಸ್ವಿಯಾಗಿ ಬೆಳೆದಿರುವ ಇವರ ಮನೆಯಂಗಳದ ಬೆಂಡೆ ವೈಭವ ಆಕರ್ಷಣೀಯ ಹಾಗೂ ಅನನ್ಯ.ಸುಮಾರು 400 ಸಿಮೆಂಟ್ ಚೀಲದಲ್ಲಿ ಇವರು ಬೆಂಡೆ ಬೇಸಾಯ ಮಾಡಿದ್ದು, ಹಸನಾಗಿ ಬೆಳೆದ ಬೆಂಡೆ ಈಗ ಫಲಭರಿತವಾಗಿದೆ. ಸ್ಥಳೀಯ ಸಾಂಪ್ರದಾಯಿಕ ತಳಿ ಹಾಗೂ ಸುಧಾರಿತ ಹಾಲು ಬೆಂಡೆಯನ್ನು ನಾಟಿ ಮಾಡಿರುವ ಇವರ ಕೃಷಿ ಖುಷಿಯ ಶ್ರಮ ಈಗ ಸಾರ್ಥಕತೆಯನ್ನು ಮೂಡಿಸುತ್ತಿದೆ ಎನ್ನುವುದು ಅವರ ಅಭಿಪ್ರಾಯ. ನೇರ ಭೂಮಿಯಲ್ಲಿ ಕೃಷಿ ಮಾಡುವುದಕ್ಕೂ ಪ್ಲಾಸ್ಟಿಕ್ ಚೀಲ ವಿಧಾನಕ್ಕೂ ಅಜಗಜಾಂತರ ವಿದೆ. ನೇರವಾಗಿ ನೆಲದಲ್ಲಿ ಕೃಷಿ ಮಾಡುವುದಕ್ಕಿಂತ ಇದು ಲಾಭದಾಯಕ ಹಾಗೂ ಮಿತ ವ್ಯಯಿ ಎನ್ನುವುದನ್ನು ನಿರೂಪಿಸುವ ಇವರು ಕೃಷಿಯಲ್ಲಿ ಖುಷಿ ಕಾಣುತ್ತಾರೆ.
Related Articles
Advertisement
ಎಲ್ಲಾ ಕೊಯ್ಲಿನ ಕೊನೆಗೆ ಚೀಲದಲ್ಲಿ ಸಾರಭರಿತ ಮಣ್ಣು 30ರಿಂದ 35 ಕೆ.ಜಿ. ಇರುತ್ತದೆ. ಎಲ್ಲಾ ಚೀಲದಲ್ಲಿನ ಮಣ್ಣನ್ನು ಒಂದೆಡೆ ಕಲೆ ಹಾಕಿ ಇಡಲಾಗುತ್ತದೆ. ಮುಂದಿನ ವರ್ಷ ಆ ಮಣ್ಣನ್ನು ಬಳಕೆ ಮಾಡುತ್ತಾರೆ. ಈ ಮಣ್ಣಿನಲ್ಲಿ ಪೋಷಕಾಂಶ ಹೇರಳವಾಗಿರುತ್ತದೆ. ಪೋಷಕಾಂಶಗಳು ಭೂಮಿಯಲ್ಲಿ ಕೊಚ್ಚಿ ಹೋಗುವುದಿಲ್ಲ. ಹಳದಿ ರೋಗ ಸಂಪೂರ್ಣ ನಿಯಂತ್ರಿಸಲ್ಪಡುತ್ತದೆ. ಗಿಡಕ್ಕೆ ಟಿಸಿಲು ಬಿಡಲು ಸಾಕಷ್ಟು ಸ್ವಾತಂತ್ರವಿರುತ್ತದೆ. ಪದೇ ಪದೇ ಮಣ್ಣು ಏರಿಸುವ ಕೆಲಸ ಇರದು. ನೇರವಾದ, ಸುಂದರವಾದ ಕಾಯಿಗಳು ಲಭಿಸುತ್ತವೆೆ. ಮಣ್ಣು ಮತ್ತೆ ಪುನಃಬಳಕೆಗೆ ಬರುತ್ತದೆ. ಖರ್ಚು ಕಡಿಮೆ. ಭೂಮಿ ಕಡಿಮೆ ಇರುವುದರಿಂದ ಮಣ್ಣನ್ನು ರಿಸೆ„ಕಲ್ ಮಾಡುವುದು ಅನಿವಾರ್ಯ.– ರಾಜು ಗಾಣಿಗ – ಉದಯ ಆಚಾರ್ ಸಾಸ್ತಾನ