Advertisement
ಸೂಕ್ತ ನೆಲೆ ಸಿಕ್ಕದೆ ನಗರಗಳ ಬೀದಿಗಳ ಫುಟ್‌ಪಾತ್, ಬಸ್‌ಸ್ಟಾಂಡ್‌ಗಳಲ್ಲಿ ಭಿಕ್ಷೆ ಬೇಡಿ ಬದುಕುವ ವೃದ್ಧರ ಸಂಖ್ಯೆ ಲೆಕ್ಕಕ್ಕೆ ಸಿಗದು. ಮಾನಸಿಕ ಅಸ್ವಸ್ಥರು, ಕಾಯಿಲೆ ಗೊಳಗಾದವರು, ಮನೆಯಿಂದ ಹೊರ ಹಾಕಲ್ಪಟ್ಟವರು ಇದರಲ್ಲಿ ಸೇರಿದ್ದಾರೆ. ಇಂತವವರನ್ನು ಸಮಾಜ ಸೇವಕರು, ಪೊಲೀಸರು ರಕ್ಷಿಸಿ, ವೃದ್ಧಾಶ್ರಮಕ್ಕೋ, ಚಿಕಿತ್ಸೆಗಾಗಿ ಆಸ್ಪತ್ರೆಗೋ ದಾಖಲಿಸಿ ಮಾನವೀಯತೆ ತೋರುವ ಪ್ರಯತ್ನ ನಡೆಸುತ್ತಾರೆ. ಆದರೆ ಉಚಿತ ವೃದ್ಧಾಶ್ರಮಗಳು ಇಲ್ಲದ ಕಾರಣ ಸಂದಿಗ್ಧತೆಗೆ ಸಿಲುಕುವಂತಾಗಿದೆ.
Related Articles
Advertisement
ಒಬ್ಬೊಬ್ಬರದು ಒಂದೊಂದು ಕಥೆ :
ಪೋಷಕರನ್ನು ಸಾಕಲಾಗದೆ ಆಸ್ಪತ್ರೆಗೂ ಅಥವಾ ಇನ್ನೆಲ್ಲಿಗೋ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಅನಂತರ ಅವರನ್ನು ದಿಕ್ಕು ತಪ್ಪಿಸಿ ನಗರದ ಯಾವುದಾದರೊಂದು ಪ್ರದೇಶದಲ್ಲಿ ಬಿಟ್ಟು ಹೋಗಿ ರುವ ಅನೇಕ ಉದಾಹರಣೆ ಗಳಿವೆ. ಮೃತಪಟ್ಟಂತ ಸಂದರ್ಭ ಬಂದು ನೋಡದವರೂ ಇ¨ªಾರೆ. ಒಬ್ಬೊಬ್ಬರದು ಮನಕಲಕುವ ಕಥೆಗಳಾಗಿರುತ್ತವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
2014ರಲ್ಲಿ ಜಿಲ್ಲೆಯಲ್ಲಿ ತೆರೆದ ಹಿರಿಯ ನಾಗರಿಕರ ಸಹಾಯವಾಣಿಗೆ ಇದುವರೆಗೆ 12,093 ಕರೆಗಳು ಬಂದಿವೆ. ತಿಂಗಳಿಗೆ 150ರಿಂದ 200 ಕರೆಗಳು ಬರುತ್ತವೆ ಎನ್ನುತ್ತಾರೆ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಅಧಿಕಾರಿಗಳು.
ಆಸ್ಪತ್ರೆಯಲ್ಲೇ ಬಾಕಿ :
ಅಸ್ವಸ್ಥರನ್ನು ಸರಕಾರಿ ಆಸ್ಪತ್ರೆಗಳಿಗೆ ಸೇರಿಸಿ, ಅನಂತರದಲ್ಲಿ ಅವರು ಬಿಡುಗಡೆಗೊಂಡರೂ ಎಲ್ಲಿಗೂ ಹೋಗಲಾಗದೆ ಆಸ್ಪತ್ರೆಗಳ ಬೆಡ್‌ಗಳಲ್ಲೇ ಉಳಿಯುತ್ತಿದ್ದಾರೆ. ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ 12 ಮಂದಿ ವಾರಸುದಾರರಿಲ್ಲದ ವೃದ್ಧರು ಬೆಡ್‌ಗಳಲ್ಲೆ ಬಾಕಿ ಉಳಿದಿದ್ದಾರೆ.
ಇನ್ನೊಂದು ವೃದ್ಧಾಶ್ರಮ ತೆರೆಯುವ ಅಗತ್ಯವಿಲ್ಲ. ವೃದ್ಧರನ್ನು ಬೀದಿಗೆ ತಳ್ಳುವವರನ್ನು ಅಪರಾಧಿಗಳನ್ನಾಗಿಸುವ ಕಾನೂನುಗಳು ಜಾರಿಗೆ ಬರಬೇಕು ಎಂದು ಸಮಾಜ ಸೇವಕಿ ರಮಿತಾ ಶೈಲೇಂದ್ರ ಅಭಿಪ್ರಾಯಪಡುತ್ತಾರೆ.
3-4 ವರ್ಷಗಳ ಹಿಂದೆ ಸರಕಾರದ ಅನುದಾನ ಬರುತ್ತಿತ್ತು. ಅನಂತರದಲ್ಲಿ ಬರುತ್ತಿಲ್ಲ. ಬೀದಿಯಲ್ಲಿ ಅನಾಥರಾಗಿ ವೃದ್ಧರು ಕಂಡುಬಂದಾಗ ನಮ್ಮ ಸಹಾಯವಾಣಿಗೆ ಕರೆಗಳು ಬರುತ್ತವೆ.-ಗಣೇಶ್, ಯೋಜನಾ ಸಂಯೋಜಕ, ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರ ಉಡುಪಿ