Advertisement

ಸರಕಾರಿ ಹಾಸ್ಟೆಲ್‌ಗ‌ಳಿಗೂ ನೀರಿನ ಕೊರತೆ ಆತಂಕ

04:27 PM May 27, 2023 | Team Udayavani |

ಉಡುಪಿ: ನಗರದಲ್ಲಿ ಸರಕಾರಿ ಹಾಸ್ಟೆಲ್‌ಗ‌ಳಿಗೂ ನೀರಿನ ಕೊರತೆಯ ಆತಂಕ ಎದುರಾಗಿದೆ. ಸದ್ಯ ನೀರಿನ ಸಮಸ್ಯೆ ಗಂಭೀರ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಪರಿಸ್ಥಿತಿ ಕಷ್ಟಕರವಾಗಲಿದೆ.

Advertisement

ಉಡುಪಿ, ಮಣಿಪಾಲ ನಗರ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಎಂ), ಸಮಾಜ ಕಲ್ಯಾಣ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ)ಯ ಹಾಸ್ಟೆಲ್‌ಗ‌ಳಿವೆ. ಈ ಹಾಸ್ಟೆಲ್‌ಗ‌ಳಲ್ಲಿ ಜಿಲ್ಲೆಯ ಹೊರ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ನೆಲೆಸಿದ್ದಾರೆ. ಪೋಸ್ಟ್‌ ಮೆಟ್ರಿಕ್‌, ಪ್ರೀ ಮೆಟ್ರಿಕ್‌ ಹಾಸ್ಟೆಲ್‌ಗ‌ಳಿವೆ. ಪ್ರತೀ ವರ್ಷ ಬೇಸಗೆಯಲ್ಲಿ ನೀರಿನ ಗಂಭೀರ ಸಮಸ್ಯೆ ಎದುರಾಗಿಲ್ಲ. ಆದರೆ ಈ ವರ್ಷ ಕೆಲವು ಹಾಸ್ಟೆಲ್‌ಗ‌ಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಎಲ್ಲ ಹಾಸ್ಟೆಲ್‌ಗ‌ಳಲ್ಲಿ ಬಾವಿ, ಬೋರ್‌ವೆಲ್‌ ಸ್ವಂತ ನೀರಿನ ಮೂಲ ಹೊಂದಿದೆ. ಕೆಲವು ಕಡೆಗಳಲ್ಲಿ ಜಲಮೂಲ ಬತ್ತಿದ್ದು, ಟ್ಯಾಂಕರ್‌ ನೀರಿಗೆ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಮಣಿಪಾಲ ಹಾಸ್ಟೆಲ್‌ನಲ್ಲಿ
ನೀರಿನ ಸಮಸ್ಯೆ
ಬನ್ನಂಜೆ, ದೊಡ್ಡಣಗುಡ್ಡೆ, ಆದಿ ಉಡುಪಿ, ಉಪ್ಪೂರಿನಲ್ಲಿ ಐಟಿಡಿಪಿ 4 ಹಾಸ್ಟೆಲ್‌ಗ‌ಳಿವೆ. ಸಮಾಜ ಕಲ್ಯಾಣ ಇಲಾಖೆಯ ಬನ್ನಂಜೆಯಲ್ಲಿ 2, ಇಂದಿರ ನಗರ 1, ಕುಂಜಿಬೆಟ್ಟು 1 ಹಾಸ್ಟೆಲ್‌ ಇದೆ. ಬಿಸಿಎಂ ಉಡುಪಿ, ಮಣಿಪಾಲದಲ್ಲಿ ಹೆಚ್ಚು ಹಾಸ್ಟೆಲ್‌ಗ‌ಳಿದ್ದು, ಮಣಿಪಾಲದಲ್ಲಿರುವ ಹಾಸ್ಟೆಲ್‌ಗೆ ನೀರಿನ ಸಮಸ್ಯೆ ಎದುರಾಗಿದೆ. ದಿನಕ್ಕೆ 2 ಟ್ಯಾಂಕ್‌ ನೀರು ಪೂರೈಕೆಯಾಗುತ್ತಿದೆ. ನಗರದಲ್ಲಿರುವ ಕೆಲವು ಹಾಸ್ಟೆಲ್‌ಗ‌ಳಿಗೆ ನೀರಿನ ಸಮಸ್ಯೆ ಇರುವುದರಿಂದ ಮಿತವಾಗಿ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ರಜೆ
ಪ್ರೀ ಮೆಟ್ರಿಕ್‌ ವಿದ್ಯಾರ್ಥಿಗಳಿಗೆ ರಜೆ ಇರುವುದರಿಂದ ಹಾಸ್ಟೆಲ್‌ಗ‌ಳಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದಲ್ಲಿ ನೀರಿನ ಬಳಕೆ ಹೆಚ್ಚಾಗುತ್ತಿತ್ತು. ರಜೆ ಇರುವುದರಿಂದ ಬಹುತೇಕ ಹಾಸ್ಟೆಲ್‌ಗ‌ಳಲ್ಲಿ ನೀರಿನ ಬಳಕೆ ಪ್ರಮಾಣ ಕಡಿಮೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಹಾಸ್ಟೆಲ್‌ಗೆ ಮಾತ್ರ ನೀರಿನ ಸಮಸ್ಯೆ ಇದ್ದು, ಇದಕ್ಕೆ ಪರ್ಯಾಯವಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದ ಹಾಸ್ಟೆಲ್‌ಗ‌ಳಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ. ಈ ಬಗ್ಗೆ ನಿರಂತರ ಪರಿಶೀಲನೆ ನಡೆಸಲಾಗುತ್ತಿದೆ.
– ಸಚಿನ್‌, ಜಿಲ್ಲಾ ಅಧಿಕಾರಿ, ಹಿಂದುಳಿದ
ವರ್ಗಗಳ ಕಲ್ಯಾಣ ಇಲಾಖೆ.

Advertisement

ಹಾಸ್ಟೆಲ್‌ಗ‌ಳಲ್ಲಿ ನೀರಿನ ಸಮಸ್ಯೆಇಲ್ಲ. ಎಲ್ಲ ಹಾಸ್ಟೆಲ್‌ಗ‌ಳು ಸ್ವಂತ ನೀರಿನ ಮೂಲವನ್ನು ಹೊಂದಿದ್ದು, ಇದರಲ್ಲಿ ನೀರು ಲಭ್ಯವಿದೆ. ನೀರಿನ ಸಮಸ್ಯೆ ಉದ್ಬವಿಸಿದಲ್ಲಿ ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳಲು ಅವಕಾಶವಿದೆ.
– ಅನಿತಾ ಮಡೂÉರು, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ.

ಸ್ವಂತ ಮತ್ತು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಸ್ಟೆಲ್‌ಗ‌ಳಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ . ಪ್ರೀ ಮೆಟ್ರಿಕ್‌ ವಿದ್ಯಾರ್ಥಿಗಳಿಗೆ ರಜೆ ಇರುವುದರಿಂದ ನೀರಿನ ಬಳಕೆ ಕಡಿಮೆಯಾಗಿದ್ದು, ನೀರಿನ ಮಿತ ಬಳಕೆ ಬಗ್ಗೆ ಎಲ್ಲ ಸಿಬಂದಿ, ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
-ದೂದ್‌ಪಿರ್‌ ಪಿ., ಯೋಜನಾ ಸಮನ್ವಯ
ಅಧಿಕಾರಿ, ಐಟಿಡಿಪಿ

 

Advertisement

Udayavani is now on Telegram. Click here to join our channel and stay updated with the latest news.

Next