Advertisement

ಸಾವಿರ ಅಡಿ ಕೊರೆದರೂ ಬರೀ ಧೂಳು!

04:09 PM Apr 05, 2021 | Team Udayavani |

ತುಮಕೂರು: ಅಂತರ್ಜಲ ಬತ್ತಿ ಹೋಗುತ್ತಿದೆ. ಸಾವಿರ ಅಡಿವರೆಗೆ ಭೂಮಿ ಕೊರೆದರೂ ಬರೀ ಧೂಳೇ, ಧೂಳುಬರುತ್ತಿದೆ. ಮಳೆಗಾಲ ಆರಂಭವಾದರೂ ಒಂದು ಹನಿಮಳೆ ಬಿದ್ದಿಲ್ಲ. ಬಿಸಿಲಿನ ತಾಪಮಾನ ದಿನೇ ದಿನೆತೀವ್ರಗೊಳ್ಳುತ್ತಿದ್ದು, ಶೈಕ್ಷಣಿಕ, ಧಾರ್ಮಿಕ ನಾಡು ತುಮಕೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತಿದೆ.

Advertisement

ತಾಲೂಕಿನ ಕೆಲವು ಗ್ರಾಮಗಳಲ್ಲಿ ಹಾಕಿದ ಬೋರ್‌ ವೆಲ್‌ಗ‌ಳಲ್ಲಿ ಅಂತರ್ಜಲ ಮಟ್ಟದಲ್ಲಿ ಕುಸಿತ ಉಂಟಾಗಿದೆ.ನೀರು ಸಮರ್ಪಕವಾಗಿ ಬರದೇ ಕೆಲವು ಹಳ್ಳಿಗಳಲ್ಲಿ ಬೋರ್‌ವೆಲ್‌ ನಿಂತು ಹೋಗಿವೆ. ಕೆಲವು ಗ್ರಾಮಗಳಲ್ಲಿ ಬೋರ್‌ವೆಲ್‌ನಲ್ಲಿ ನೀರು ಇದ್ದರೂ ವಿದ್ಯುತ್‌ತೊಂದರೆಯಿಂದ ನಿರಂತರವಾಗಿ ನೀರು ಕೊಡಲು ಸಾಧ್ಯವಾಗದೇಕುಡಿವ ನೀರಿನ ಸಮಸ್ಯೆ ಹಲವು ಗ್ರಾಮಗಳಲ್ಲಿ ಕಂಡುಬರುತ್ತಿದೆ.

ಬರೀ ಗ್ರಾಮಗಳಲ್ಲಿ ಅಲ್ಲ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೂ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ತುಮಕೂರು, ತಿಪಟೂರು, ಶಿರಾ ನಗರಗಳಲ್ಲಿ, ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ, ಕುಣಿಗಲ್‌, ಕೊರಟಗೆರೆ, ಗುಬ್ಬಿ, ತುರುವೇಕೆರೆ ಪಟ್ಟಣಗಳಲ್ಲಿ ನೀರಿನ ಸಮಸ್ಯೆ ಈಗ ಪ್ರಾರಂಭವಾಗಿದೆ.

ತಾಲೂಕುಮಟ್ಟದ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿದ್ದು, 43 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡು ಬಂದಿದೆ. ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಬಗೆಹರಿಸಲು ಮುಂದಾಗಿದ್ದಾರೆ. ಮುಂದೆ ಇದೇ ರೀತಿ ಬೇಸಿಗೆ ಹೆಚ್ಚಾದರೆ ಇನ್ನು ಹಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಈ ಬಗ್ಗೆ ಹೆಚ್ಚು ಗಮನ ಹರಿಸಿ ನೀರಿನ ಸಮಸ್ಯೆ ಬರದಂತೆ ನಿಗಾವಹಿಸುವುದು ಅಗತ್ಯವಾಗಿದೆ.

ನೀರಿನ ಸಮಸ್ಯೆಯಿರುವ ಗ್ರಾಮಗಳು: ತುಮಕೂರುತಾಲೂಕಿನಲ್ಲಿ 43 ಗ್ರಾಮ ಕುಡಿವ ನೀರಿನ ಸಮಸ್ಯೆಇರುವ ಗ್ರಾಮಗಳೆಂದು ಅಧಿಕಾರಿಗಳುಗುರುತಿಸಿದ್ದಾರೆ. ಅವುಗಳೆಂದರೆ ಬೆಳಗುಂಬ,ಬಿದರಕಟ್ಟೆ, ಕಟ್ಟಿಗೊಲ್ಲಹಳ್ಳಿ, ಚನ್ನಿಗಪ್ಪನ ಪಾಳ್ಯ,ಬಳ್ಳಗೆರೆ, ನರಸೀಪುರ, ಕುಂದೂರು ಕ್ರಾಸ್‌, ಬೆಳಗುಂಬತಾಂಡ್ಯ, ಗಂಗನಾಲ, ಕೊಟ್ಟನಹಳ್ಳಿ, ಬಾಣಾವಾರ,ಮೈಲನಹಟ್ಟಿ, ಮಾನಂಗಿ, ಹೊಸೂರು, ಗಂಗಸಂದ್ರ, ಮುಳುಕುಂಟೆ, ಕೋಡೀಪಾಳ್ಯ, ವಿರೂಪಸಂದ್ರ,ಕುರುವಕುಂಟೆ, ಜುಂಜಯ್ಯನ ಪಾಳ್ಯ, ಚಕ್ಕಗೊಲ್ಲಹಳ್ಳಿ, ದೊಡ್ಡಗೊಲ್ಲಹಳ್ಳಿ, ಬೊಮ್ಮನಹಳ್ಳಿ, ಜೆ.ಎಸ್‌.ಪಾಳ್ಯ, ಕಲ್ಲಹಳ್ಳಿ, ಶಂಭೋಹಳ್ಳಿ, ಗೊರಗೊಂಡನಹಳ್ಳಿ, ಕೋರಾ, ಕೊತ್ತಿಹಳ್ಳಿ, ತಮ್ಮಡಿಹಳ್ಳಿ, ಚಿಕ್ಕಕೊರಟಗೆರೆ, ಬೊಮ್ಮನಹಳ್ಳಿ, ನಾಗವಲ್ಲಿ, ಚಿಕ್ಕಗುಂಡಗಲ್ಲು, ಪಾಲಸಂದ್ರ, ಪುರಕಟ್ಟೆ ಕಾವಲ್‌, ಅಪ್ಪಿನಾಯಕನಹಳ್ಳಿ, ಲಿಂಗನಹಳ್ಳಿ, ಹುಚ್ಚಬಸವನಹಳ್ಳಿ, ಯಲ್ಲಾಪುರ, ಅಜ್ಜಗೊಂಡನಹಳ್ಳಿ, ರಂಗನಪಾಳ್ಯ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮವೆಂದು ಗುರುತಿಸಲಾಗಿದೆ

Advertisement

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ :

ತುಮಕೂರು, ಮಧುಗಿರಿ, ಕುಣಿಗಲ್‌ ಸೇರಿದಂತೆ ಇತರೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಗ್ರಾಪಂಗಳು 15ನೇಹಣಕಾಸು ಯೋಜನೆ ಶೇ. 25ರಷ್ಟು ಅನುದಾನ ಸಮಪರ್ಕವಾಗಿಬಳಸಬೇಕು ಎಂದು ಗ್ರಾಮೀಣ ನೀರು ಸರಬರಾಜು ಮತ್ತುನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಕೆ.ಮುತ್ತಪ್ಪ ತಿಳಿಸಿದರು. ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗ,ಹುತ್ರಿದುರ್ಗ ಹೋಬಳಿ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆಇದೆ. ಅಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ತಾಲೂಕಿನಲ್ಲಿ43 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.

ಖಾಸಗಿ ಬೋರ್‌ ವೆಲ್‌ನಿಂದ ನೀರು :

ತುಮಕೂರು ತಾಲೂಕಿನ ಯಲ್ಲಾಪುರದಲ್ಲಿ ಕುಡಿವ ನೀರಿನಸಮಸ್ಯೆ ಹಿನ್ನೆಲೆ ಅಲ್ಲಿಗೆ ಟ್ಯಾಂಕರ್‌ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಾಗವಲ್ಲಿಯಲ್ಲಿಖಾಸಗಿ ಬೋರ್‌ವೆಲ್‌ಸಹಾಯದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಈಗಸಮಸ್ಯಾತ್ಮಕ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ಉಲ್ಬಣವಾಗಿತ್ತಿದೆ.

ಕುಡಿವ ನೀರಿನ ಸಮಸ್ಯೆ ಬರದಂತೆ ಅಗತ್ಯಕ್ರಮ ವಹಿಸಲು ಅಧಿಕಾರಿ ಗಳಿಗೆ ಸೂಚನೆ ನೀಡ ಲಾಗಿದೆ. ನೀರಿನಸಮಸ್ಯೆ ಇರುವ ಗ್ರಾಮಗಳಲ್ಲಿ ಗ್ರಾಪಂ ಯಿಂದ 15ನೇಹಣಕಾಸು ಯೋಜನೆಯಲ್ಲಿಶೇ.25ರಷ್ಟು ಹಣವನ್ನುಬಳಸಿ ನೀರಿನ ಸಮಸ್ಯೆ ನೀಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.  ● ಡಿ.ಸಿ.ಗೌರಿಶಂಕರ್‌, ಗ್ರಾಮಾಂತರ ಶಾಸಕ

ಹಲವು ಗ್ರಾಮೀಣ ಪ್ರದೇಶದಲ್ಲಿಅಂತರ್ಜಲ ಕುಸಿದು ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ.ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ಮೂಲಕ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಂಡಿದ್ದೇವೆ. ●ಕೆ.ಮುತ್ತಪ್ಪ, ಕಾರ್ಯಪಾಲಕ ಎಂಜಿನಿಯರ್‌

 

– ಚಿ.ನಿ.ಪುರುಷೋತ್ತಮ್‌.

Advertisement

Udayavani is now on Telegram. Click here to join our channel and stay updated with the latest news.

Next