Advertisement

ನೀರಿಗೆ ಮೈಲುಗಟ್ಟಲೇ ಅಲೆದಾಟ

06:53 AM Jun 05, 2020 | Suhan S |

ಅಫಜಲಪುರ: ತಾಲೂಕಿನಲ್ಲಿ ಕಳೆದ ಮಳೆಗಾಲದಿಂದ ಹಿಡಿದು ಇಲ್ಲಿಯವರೆಗೆ ಕುಡಿಯುವ ನೀರಿನ ಅಭಾವ ಕಾಡುತ್ತಿದೆ. ಹಳ್ಳಿ ಜನ ನಿತ್ಯ ನೀರಿಗಾಗಿ ಪರದಾಡುವ ಪರಿಸ್ಥಿತಿ ಹಾಗೆಯೇ ಇದೆ.

Advertisement

ತಾಲೂಕಿನ ರೇವೂರ(ಕೆ), ರೇವೂರ(ಬಿ), ಬಳೂರ್ಗಿ, ಬಡದಾಳ, ಮಲ್ಲಾಬಾದ, ಸ್ಟೇಷನ್‌ ಗಾಣಗಾಪುರ, ಕೋಗನೂರ, ಅಂಕಲಗಿ, ಗೊಬ್ಬೂರ(ಬಿ), ಕರ್ಜಗಿ, ಮಾಶಾಳ,ಚಿಣಮಗೇರಾ, ಹೊಸೂರ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ಈ ಗ್ರಾಮಗಳ ಜನ ನಿತ್ಯ ಮೈಲಿಗಟ್ಟಲೇ ಕೊಡ, ಬಿಂದಿಗೆ ಹಿಡಿದು ಬಿಸಿಲಲ್ಲಿ ಅಲೆದಾಡಿದರು ನೀರು ಸಿಗೋದಿಲ್ಲ. ಇಷ್ಟು ಮಾತ್ರವಲ್ಲದೆ ತಾಲೂಕಿನಲ್ಲಿರುವ ಭೀಮಾ ನದಿ ದಡದ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಉದ್ಭವವಾಗಿದೆ.

ನದಿ ಇದ್ದರೂ ನೀರಿಲ್ಲದಂತಾಗಿ ಜನ ಕಂಗಾಲಾಗಿದ್ದಾರೆ. ನದಿ ಇಲ್ಲದ ಕಡೆಯಂತು ಜನಸಾಮಾನ್ಯರ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ. ತಾಲೂಕಿನಲ್ಲಿ ಇಷ್ಟೆಲ್ಲ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದ್ದರೂ ಕೂಡ ತಾಲೂಕಿನ ಜನಪ್ರತಿನಿ ಧಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ತಾಪಂ, ಗ್ರಾಪಂ ಸಂಬಂಧಿಸಿದವರು ಸಮಸ್ಯೆ ಬಗ್ಗೆ ಚಿಂತಿಸುತ್ತಿಲ್ಲ. ಜನಸಾಮಾನ್ಯರ ಕಷ್ಟ ಕೇಳಲು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ತಾಲೂಕಿನಾದ್ಯಂತ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಬಾರಿಯ ಮಳೆಗಾಲ ಉತ್ತಮವಾಗಿ ಆಗದಿದ್ದರೆ ಬರುವ ವರ್ಷ ಭೀಕರ ಬರಗಾಲ ಆವರಿಸೋದು ಪಕ್ಕಾ.

ನಾವು ದಿನಾ ತಳ್ಳು ಬಂಡಿಯೊಳಗ್‌ 10 ಕೊಡಗೊಳ್‌ ಇಟಗೊಂಡು 4 ಕಿಲೋ ಮಿಟರ್‌ ದೂರದಿಂದ ನೀರ್‌ ತರಬೇಕ್ರಿ, ಇಲ್ಲಾಂದ್ರ ನಾವು ಬಾಯಿ ಒಣಗಸ್ಕೊಂಡು ಕುಂದರಬೇಕಾತದ್ರಿ. -ಗೊಬ್ಬೂರ(ಬಿ) ಗ್ರಾಮಸ್ಥರು.

 

Advertisement

-ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next