Advertisement

ರಾಮನಗರಕ್ಕೆ ಕುಡಿವ ನೀರಿನ ಬವಣೆ

03:37 PM Aug 10, 2023 | Team Udayavani |

ರಾಮನಗರ: ಮುಂಗಾರು ಅವಧಿಯಲ್ಲೇ ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಬೇಸಿ ಗೆಯ ವೇಳೆಗೆ ಏನಾದೀತು ಎಂಬ ಪ್ರಶ್ನೆ ನಗರದ ನಾಗ ರಿಕರನ್ನು ಕಾಡಲಾರಂಭಿಸಿದೆ. ಪರಿಸ್ಥಿತಿ ಇದೇ ರೀತಿ ಉಲ್ಬಣಿಸಿದ್ದೇ ಆದಲ್ಲಿ ರಾಮನಗರದ ಜೊತೆಗೆ ಮಾಗಡಿ ಪಟ್ಟಣಕ್ಕೂ ಕುಡಿ ಯುವ ನೀರಿನ ಬವಣೆ ಎದುರಾಗಲಿದೆ.

Advertisement

ಅರ್ಕಾವತಿ ನದಿಯಲ್ಲಿ ಬರಿ ದಾದ ನೀರು:ನೀರು ಮಳೆ ಬಾರದ ಹಿನ್ನೆಲೆಯಲ್ಲಿ ರಾಮ ನಗರ ಪಟ್ಟಣದ 11 ವಾರ್ಡ್‌ ಗಳಿಗೆ ನೀರು ಪೂರೈಕೆ ಮಾಡು ತ್ತಿರುವ ಅರ್ಕಾವತಿ ನದಿಯಲ್ಲಿ ನೀರು ಬರಿದಾಗಿದೆ. ಇದರಿಂದಾಗಿ ಮೂರು ದಿನಗಳ ಕಾಲ ನೀರು ಪೂರೈಕೆ ಯಲ್ಲಿ ವ್ಯತ್ಯಯ ವಾಗಲಿದೆ ಎಂದು ನೀರು ಸರಬರಾಜು ಮಂಡಳಿ ತಿಳಿ ಸಿದ್ದು, ಮಳೆ ಗಾಲದಲ್ಲೇ ಈ ರೀತಿ ಸಮಸ್ಯೆಯಾದರೆ ಬೇಸಿಗೆಯ ಕತೆ ಏನು ಎಂಬುದು ಜನರ ಪ್ರಶ್ನೆಯಾಗಿದೆ.

ಕೈಕೊಟ್ಟ ಮುಂಗಾರು: ಕಳೆದ ಬಾರಿ ಇದೇ ಅವಧಿ ಯಲ್ಲಿ  1500 ರಿಂದ 2000 ಕ್ಯೂಸೆಕ್ಸ್‌ನಷ್ಟು ನೀರು ಅರ್ಕಾವತಿ ನದಿಯಲ್ಲಿ ಹರಿಯುತಿತ್ತು. ಆದರೆ, ಇದೀಗ ಈ ವರ್ಷ ಮುಂಗಾರಿನಲ್ಲೇ ನದಿ ಬರಿದಾಗಿದೆ. ಇದಕ್ಕೆ ಮುಖ್ಯ ಕಾರಣ ಮುಂಗಾರು ಮಳೆ ಕೈಕೊಟ್ಟಿರುವುದು. ಜೂನ್‌ ತಿಂಗಳಲ್ಲಿ ಶೇ.50 ರಷ್ಟು ಮಳೆ ಕೊರತೆ ಇದ್ದು, ಜುಲೈನಲ್ಲಿ  ಮಳೆ ಕೊರತೆ ಪ್ರಮಾಣ ಶೇ.32ರಷ್ಟು. ಕಳೆದೊಂದು ವಾರ ದಿಂದ ಶೇ.80ರಷ್ಟು ಮಳೆ ಕೊರತೆ ಎದುರಾಗಿದ್ದು, ಒಟ್ಟಾರೆ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ.41 ರಷ್ಟು ಕಡಿಮೆ ಪ್ರಮಾಣದ ಮಳೆ ಬಿದಿದ್ದೆ. ಇದರಿಂ ದಾಗಿ ನದಿ ಮುಂಗಾರು ಹಂಗಾಮಿನಲ್ಲೇ ಬರಿದಾಗಿದೆ. ಮುಂದೆ ಮಳೆ ಬಾರದೆ ಹೋದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ತೀವ್ರವಾಗಲಿದೆ.

ಮಂಚನಬಲೆಯ ಮೇಲೆ ಹೆಚ್ಚಿದ ಒತ್ತಡ: ಅರ್ಕಾವತಿ ನದಿಯಲ್ಲಿ ನೀರು ಬರಿದಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಮಂಚಲನ ಬಲೆ ಜಲಾ ಯಶದಲ್ಲಿರುವ ನೀರಿಗೆ ಜಲಮಂಡಳಿ ಮೊರೆ ಇಟ್ಟಿದೆ. ಜಲಾಶಯದ ಸಂಗ್ರಹಣಾ ಮಟ್ಟ 1.2 ಟಿಎಂಸಿ ಯಾಗಿದ್ದು. ಪ್ರಸ್ತುತ 0.9 ಟಿಎಂಸಿ           ಯಷ್ಟು ನೀರು ಸಂಗ್ರಹಣೆ ಇದೆ. ಇದರಲ್ಲಿ 0.2 ಟಿಎಂಸಿಯಷ್ಟು ನೀರು ಡೆಡ್‌ ಸ್ಟೋರೇಜ್‌ ಆಗಿದ್ದು 0.7 ಟಿಎಂಸಿಯಷ್ಟು ನೀರನ್ನು ಮಾತ್ರ ಬಳಕೆ ಮಾಡಬಹುದಾಗಿದೆ.  ರಾಮನಗರ ಪಟ್ಟಣದ 11 ವಾರ್ಡ್‌ಗಳಿಗೆ  ಪ್ರತಿದಿನ ನಾಲ್ಕು ಎಂಎಲ್‌ಡಿಯಷ್ಟು ನೀರು ಬೇಕಿದೆ. ಇನ್ನು ಮಾಗಡಿ ಪಟ್ಟಣಕ್ಕೂ ಮಂಚನಬಲೆ ಜಲಾಶಯವನ್ನು ಅವಲಂಬಿಸಲಾಗಿದೆ.  ಪ್ರಸ್ತುನ ಜಲಾಶಯದ ಒಳಹರಿವಿನ ಮಟ್ಟ  ಶೂನ್ಯ ವಿದ್ದು, ಆಗಸ್ಟ್‌ ಅಂತ್ಯದ ವೇಳೆಗೆ ಮಳೆ ಬಾರದೆ ಇದ್ದಲ್ಲಿ  ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣ ವಾಗುವ ಸಾಧ್ಯತೆ ಇದೆ.

ರಾಮನಗರಕ್ಕೆ ಬೇಕು 12 ಎಂಎಲ್‌ಡಿ ನೀರು:

Advertisement

ರಾಮನಗರ ಪಟ್ಟಣಕ್ಕೆ ಗೃಹ ಬಳಕೆಗೆ ಪ್ರತಿದಿನ 12 ಎಂಎಲ್‌ಡಿಯಷ್ಟು ನೀರಿನ ಅಗತ್ಯತೆ ಇದೆ. ದ್ಯಾವರಸೇ ಗೌಡನ ದೊಡ್ಡಿ ಗ್ರಾಮದ ಬಳಿ ನಿರ್ಮಿಸಿರುವ ಪಂಪ್‌ ಹೌಸ್‌ನಿಂದ 4 ಎಂಎಲ್‌ಡಿ ನೀರನ್ನು ಪಡೆಯುತ್ತಿದ್ದು, 8 ಎಂಎಲ್‌ಡಿ ನೀರನ್ನು ತೊರೆ ಕಾಡನಹಳ್ಳಿ ಬಳಿಕ ನಿರ್ಮಿಸಿರುವ ನಗರ ನೀರು ಸರಬರಾಜು ಮಂಡಳಿಯ ಪಂಪ್‌ಹೌಸ್‌ನಿಂದ ಪಡೆಯಲಾಗುತ್ತಿದೆ. ಸ್ಥಳೀಯವಾಗಿ ಕೊಳವೆ ಬಾವಿ ಗಳಿಂದಲೂ ನೀರು ಪೂರೈಕೆ ಮಾಡ ಲಾಗುತ್ತಿದೆ. ಆದರೂ ರಾಮನಗರ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಈ ಪ್ರಮಾಣದ ನೀರು ಸಾಲುತ್ತಿಲ್ಲ.

ಅರ್ಕಾವತಿ ನದಿಯಲ್ಲಿ ನೀರು ಖಾಲಿಯಾದ ಕಾರಣ ಸಮಸ್ಯೆ ಎದುರಾಗಿದೆ. ಮಂಚನಬಲೆ ಜಲಾಶಯ ದಿಂದ ನೀರು ಬಿಡುವಂತೆ ಕಾವೇರಿ ನೀರಾ ವರಿ ನಿಗಮಕ್ಕೆ ಕೋರಿದ್ದು, ಅವರು ನೀರು ಬಿಡಲಿದ್ದಾರೆ. ಮಂಗಳವಾರ ನೀರು ಬಿಡ ಲಿದ್ದು, ಜಲಾಶಯದಿಂದ ಪಂಪ್‌ಹೌಸ್‌ ವರೆಗೆ 21ಕಿಮೀ ದೂರ ಇದ್ದು, ಮಂಗಳ ವಾರ ಸಂಜೆ ಇಲ್ಲ, ಬುಧವಾರ ಬೆಳಗ್ಗೆ ವೇಳೆಗೆ ನೀರು ಬರಲಿದೆ. ಬಳಿಕ ಎಂದಿನಂತೆ ನೀರು ಪೂರೈಕೆ ಮಾಡಲಾಗುವುದು.-ಕುಸುಮಾ, ಎಇಇ, ನಗರ ನೀರುಸಬರಾಜು ಮತ್ತು ಒಳಚರಂಡಿ ಮಂಡಳಿ, ಚನ್ನಪಟ್ಟಣ ವಿಭಾಗ

ಸುಗ್ಗನಹಳ್ಳಿ ಬಳಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಂಕ್ರೀ ಟ್‌ ಕೆಲಸ ನಡೆಯುತ್ತಿರುವ ಕಾರಣ ನೀರು ನಿಲ್ಲಿಸಲಾಗಿತ್ತು. ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಮಂಚನಬಲೆ ಜಲಾಶಯ ದಿಂದ ನದಿಗೆ ನೀರು ಬಿಡಲಾಗುವುದು.-ಉಮೇರಾ ಹಸ್ಮಿ, ಎಇಇ, ಕಾವೇರಿ ನೀರಾವರಿ ನಿಗಮ, ಮಂಚನಬಲೆ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next