Advertisement

46 ಗ್ರಾಮಗಳಲ್ಲಿ ಜೀವಜಲ ಅಭಾವದ ಆತಂಕ

02:07 PM Apr 07, 2021 | Team Udayavani |

ಹಾಸನ: ಜಿಲ್ಲಾ ಕೇಂದ್ರ ಹಾಸನ ನಗರಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಹೇಮಾವತಿನದಿಯಿಂದ ಸಂಪೂರ್ಣವಾಗಿ ಕುಡಿಯುವ ನೀರು ಪೂರೈಸಲು ಹಾಸನ ನಗರಸಭೆಗೆ ಸಾಧ್ಯವಾಗುತ್ತಿಲ್ಲ.ಕೊಳವೆ ಬಾವಿಗಳಮೂಲಕವೂ ಕುಡಿವ ನೀರು ಪೂರೈಕೆಯಾಗುತ್ತಿದೆ.

Advertisement

ಹಾಸನ ನಗರದ ಸುತ್ತಮುತ್ತಲಿನ ಕೆರೆಗಳು ಎರಡುವರ್ಷಗಳಿಂದ ತುಂಬಿರುವ ಪರಿಣಾಮವಾಗಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದ್ದು, ಇದುವರೆಗೂ ಕುಡಿಯುವ ನೀರಿನ ತೀವ್ರ ಅಭಾವಎದುರಾಗಿಲ್ಲ. ಹಾಸನ ನಗರಕ್ಕೆ ದಿನದ 24 ಗಂಟೆಯೂಹೇಮಾವತಿ ನದಿಯಿಂದ ಕುಡಿಯುವ ನೀರುಪೂರೈಸುವ 155 ಕೋಟಿ ರೂ. ಅಂದಾಜಿನ ಅಮೃತ್‌ಯೋಜನೆ ಇನ್ನು ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.4 ವರ್ಷಗಳ ಹಿಂದೆ ಆರಂಭವಾದ ಈ ಯೋಜನೆಅನುಷ್ಠಾನಗೊಂಡರೆ ಹಾಸನ ನಗರದ ಎಲ್ಲವಾರ್ಡುಗಳು ಹಾಗೂ ಹೊರವಲಯದ ಬಡಾವಣೆಗೂ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆಯಾಗಲಿದೆ.

ಹೇಮಾವತಿ ಜಲಾಶಯದಿಂದಲೇ ಹಾಸನ ನಗರಕ್ಕೆಈಗ ನೀರು ಪೂರೈಕೆಯಾಗುತ್ತಿದೆ. ಈ ವರ್ಷ ಹೇಮಾವತಿ ಜಲಾಶಯದಲ್ಲಿ ಈಗಲೂ 12 ಟಿಎಂಸಿನೀರಿನ ಸಂಗ್ರಹವಿದೆ. ಹಾಗಾಗಿ ಈ ವರ್ಷ ಹಾಸನ ನಗರಕ್ಕೆ ಕುಡಿವ ನೀರಿನ ಅಭಾವ ಎದುರಾಗಲಾರದುಎಂಬುದು ಹಾಸನ ನಗರಸಭೆಯ ನಂಬಿಕೆ.ಹಾಸನ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಪ್ರಸ್ತುತ 3 ಗ್ರಾಮಗಳಲ್ಲಿ ಮಾತ್ರ ಕುಡಿಯುವ ನೀರಿನಸಮಸ್ಯೆಯಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಬಹುದಾದ 43 ಗ್ರಾಮಗಳನ್ನುಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆಯು ಹಾಸನ ತಾಪಂ ಸಹಕಾರದೊಂದಿಗೆಈಗಾಗಲೇ ಗುರ್ತಿಸಿದೆ. ಆ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದರೆ ಗ್ರಾಪಂ ಸಹಕಾರದೊಂದಿಗೆ ಕುಡಿವ ನೀರು ಪೂರೈಕೆಗೆ ಹಾಸನ ತಾಪಂ ಯೋಜಿಸಿದೆ.

ಗ್ರಾಮಗಳಲ್ಲಿರುವ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದರೆ, ವಿದ್ಯುತ್‌ ಕಡಿತ ಮತ್ತಿತರ ಸಮಸ್ಯೆಗಳುಎದುರಾದರೆ ಖಾಸಗಿಯವರ ಬೋರ್‌ವೆಲ್‌ಗ‌ಳಿಗೆಬಾಡಿಗೆ ತೆತ್ತು ಆ ಗ್ರಾಮಗಳಿಗೆ ಕುಡಿಯುವ ನೀರುಪೂರೈಸುವುದೂ ಸೇರಿದಂತೆ ಸಾಧ್ಯವಾದ ಎಲ್ಲಕ್ರಮಗಳನ್ನೂ ಕೈಗೊಳ್ಳಲು ಇಲಾಖೆಯು ಮುಂದಾಗಿದೆ.ಜಾನುವಾರುಗಳಿಗೆ ಮೇವು: ಜಾನುವಾರುಗಳಿಗೆ ಇದು ವರೆಗೂ ಮೇವಿನ ಸಮಸ್ಯೆಎದುರಾಗಿಲ್ಲ. ಭತ್ತದ ಹುಲ್ಲು, ರಾಗಿ ಹುಲ್ಲು, ಜೋಳದ ಸೆಬ್ಬೆ ಯನ್ನು ರೈತರುದಾಸ್ತಾನು ಮಾಡಿಕೊಂಡಿದ್ದಾರೆ. ಒಂದೆರಡು ಹದ ಮಳೆ ಸುರಿದರೆ ಜಾನುವಾರುಗಳ ಮೇವಿಗೆ ಜೋಳದ ಬಿತ್ತನೆಗೆಸಜ್ಜಾಗಿದ್ದಾರೆ.

ಈ ವೇಳೆಗಾಗಲೇ ಒಂದೆರಡು ಹದಮಳೆಯಾಗಬೇಕಾಗಿತ್ತು. ಆದರೆ ಇದುವರೆಗೂ ಪೂರ್ವಮುಂಗಾರಿನ ಮುನ್ಸೂಚನೆಯಿಲ್ಲ. ಯುಗಾದಿಯವೇಳೆಗೆ ಮಳೆ ಬೀಳಬಹುದೆಂದು ರೈತರು ನಿರೀಕ್ಷಿಸಿದ್ದಾರೆ.

Advertisement

ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗಬಹುದಾದ ಗ್ರಾಮಗಳು :

ಹಾಸನ ತಾಲೂಕಿನಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆಗಳಿರುವ ಮೂರು ಗ್ರಾಮಗಳೆಂದರೆ ಸಾಲಗಾಮೆ ಹೋಬಳಿಯ ದ್ಯಾಪಲಾಪುರ, ದುದ್ದ ಹೋಬಳಿಯ ತಿರುಪತಿಹಳ್ಳಿ ಮತ್ತು ಕುದುರುಗುಂಡಿ ಗ್ರಾಮ. ಇನ್ನು ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗಬಹುದೆಂದು ಗುರ್ತಿಸಿರುವ ಗ್ರಾಮಗಳೆಂದರೆ, ಹುಲಿಹಳ್ಳಿ, ತ್ಯಾವಿಹಳ್ಳಿ, ದ್ಯಾವಲಾಪುರ, ವೇದಾವತಿ, ಕೃಷ್ಣಾಪುರ, ಹಂಗರಹಳ್ಳಿ, ಹನುಮಂತಪುರ, ಕೊಕ್ಕನಘಟ್ಟ, ಬಿಜೆಮಾರನಹಳ್ಳಿ,ಮಲ್ಲಗೌಡನಹಳ್ಳಿ, ಹಾಲುವಾಗಿಲು, ದೇವೇಗೌಡ ನಗರ, ಮಾರಿಗುಡಿಕೊಪ್ಪಲು, ಬೀಕನಹಳ್ಳಿ ( ಪದುಮನಹಳ್ಳಿ ಟೆಂಪಲ್‌), ಬೈಲಹಳ್ಳಿ ಕಾಲೋನಿ, ವರ್ತಿಕೆರೆ, ಕಾಳತಮ್ಮನಹಳ್ಳಿ, ದಸ್ಸೂರು, ವೀರಾಪುರ, ಕೊಂಡಜ್ಜಿ, ದೇವಿಹಳ್ಳಿಗೇಟ್‌, ದೊಡ್ಡಗದ್ದವಳ್ಳಿ, ಚಿಕ್ಕಗದ್ದುವಳ್ಳಿ, ಮಾರನಹಳ್ಳಿ,ಸಾಣೇನಹಳ್ಳಿ, ಇಬ್ದಾಣೆ, ಹೊಸೂರು, ನಿಟ್ಟೂರು, ಅಗಲಹಳ್ಳಿ, ಸುಂಡೇನಹಳ್ಳಿ, ಜವೇನಹಳ್ಳಿಕೊಪ್ಪಲು, ಅಣ್ಣಿಗನಹಳ್ಳಿ, ಶೆಟ್ಟಿಹಳ್ಳಿ, ಮುದ್ದನಹಳ್ಳಿ, ಮುಟ್ಟನಹಳ್ಳಿ, ದುಂಡನಾಯಕನಹಳ್ಳಿ, ಚಾಚಾಪುರ ಕೊಪ್ಪಲು, ಕಾರ್ಲೆ, ಬನವಾಸೆ, ಉಡುವಾರೆ ಮತ್ತು ತ್ಯಾಗಟೂರು.

 ಟ್ಯಾಂಕರ್ ನೀರು ಪೂರೈಕೆ ಅಗತ್ಯವಿಲ್ಲ :

ಬೇಸಿಗೆಯಲ್ಲಿ ಕುಡಿವ ನೀರಿನ ಅಭಾವ ಎದುರಾಗಬಹುದಾಗ ಗ್ರಾಮಗಳನ್ನು ಗುರ್ತಿಸಿ ಶಾಶ್ವತ ಕುಡಿವ ನೀರು ಪೂರೈಕೆಗೆ ಯೋಜನೆ ರೂಪಿಸುವಂತೆ ಗ್ರಾಮೀಣ ಕುಡಿಯುವ ನೀರು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾ ಗಿದೆ. ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆಯಿರುವದ್ಯಾಪಲಾಪುರ, ಕುದುರುಗುಂಡಿ, ತಿರುಪತಿಹಳ್ಳಿಯಲ್ಲಿ ಅಕ್ಕಪಕ್ಕದ ಕೊಳವೆ ಬಾವಿಗಳಿಂದ ನೀರು ಪೂರೈಸಲು ನೀರುಗಂಟಿಗಳು ಕ್ರಮ ಕೈಗೊಂಡಿದ್ದಾರೆ.

ಬೇಸಿಗೆಯಲ್ಲಿ ತೀವ್ರ ಅಭಾವಎದುರಾದರೆ ಬಾಡಿಗೆ ಕೊಟ್ಟುಖಾಸಗಿಯವರ ಕೊಳವೆ ಬಾವಿಗಳಿಂದನೀರು ಪಡೆದು ಪೂರೈಕೆ ಮಾಡಲೂ ಯೋಜನೆ ರೂಪಿಸಿಕೊಂಡಿದ್ದೇವೆ. ನಿರೀಕ್ಷಿತಮಳೆಯಾದರೆ ಅಂತಹ ಪರಿಸ್ಥಿತಿ ಉದ್ಭವವಾಗುವುದಿಲ್ಲ. ಟ್ಯಾಂಕರ್‌ನಲ್ಲಿಕುಡಿಯುವ ನೀರು ಪೂರೈಸಬೇಕಾದಂತಹ ಪರಿಸ್ಥಿತಿ ಯಂತೂ ಹಾಸನ ತಾಲೂಕಿನಲ್ಲಿಇಲ್ಲ. ಅಂತಹ ಪರಿಸ್ಥಿತಿ ಎದುರಾದರೂ ನಿಭಾಯಿಸಲು ಸಿದ್ಧ. ಡಾ.ಕೆ.ಎಲ್.ಯಶವಂತ್, ಹಾಸನ ತಾಪಂ ಇಒ

 

ಎನ್. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next